'ರತ್ನನ್ ಪ್ರಪಂಚ' ನಟಿ 'ರೆಬಾ ಮೋನಿಕಾ' ಮದುವೆ: ಬೆಂಗಳೂರಿನಲ್ಲೇ ನಡೀತು ಕಲ್ಯಾಣೋತ್ಸವ!
ನಟಿ ರೆಬಾ ಮೋನಿಕಾ ಜಾನ್ ಮದುವೆ ಆಗಿದ್ದಾರೆ. ತಮ್ಮ ಬಹುಕಾಲದ ಗೆಳೆಯನೊಂದಿಗೆ ರೆಬಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾರು ಈ ರೆಬಾ ಅಂತಿರಾ ನೀವು ಕನ್ನಡದ 'ರತ್ನನ್ ಪ್ರಪಂಚ' ಚಿತ್ರವನ್ನು ನೋಡಿದ್ದರೆ, ಈಕೆಯ ಪರಿಚಯ ನಿಮಗೆ ಇರುತ್ತದೆ. ಕನ್ನಡದಲ್ಲಿ ಅಭಿನಯಿಸಿದ ಮೊದಲ ಚಿತ್ರದಲ್ಲೇ ಕನ್ನಡಿಗರ ಮನಸ್ಸು ಗೆದ್ದಾಕೆ ರೆಬಾ. ಈಗ ತನ್ನ ಪ್ರಿಯಕರ ಜೋಮನ್ ಜೋಸೆಫ್ ಅವರ ಜೊತೆಗೆ ಮದುವೆ ಆಗಿದ್ದಾರೆ.
ರೆಬಾ, ಜೋಮನ್ ಜೋಸೆಫ್ ಜೊತೆಗೆ ಲವ್‌ನಲ್ಲಿ ಇರುವುದು ಚಿತ್ರರಂಗದಲ್ಲಿ ಹಲವರಿಗೆ ಗೊತ್ತಿತ್ತು. ಆದರೆ ಇಷ್ಟು ಬೇಗ, ಧಿಡೀರನೇ ಇಬ್ಬರು ಮದುವೆ ಆಗುತ್ತಾರೆ ಎಂದು ಊಹಿಸಿರಲಿಲ್ಲ. ಮದುಮಗಳಾಗಿ ರೆಬಾ ಮತ್ತಷ್ಟು ಸುಂದರವಾಗಿ ಫೋಟೊಗಳಲ್ಲಿ ಮಿಂಚಿದ್ದಾರೆ.
ಯಾವುದೇ ಸುಳಿವು ನೀಡದೇ ರೆಬಾ ಮದುವೆ ಆಗಿದ್ದಾರೆ. ಜನವರಿ 9ರಂದೇ ಇವರ ಮದುವೆ ನಡೆದಿದೆ. ಆದರೆ ಈಗ ಆ ಸುದ್ದಿ ಬೆಳಕಿಗೆ ಬಂದಿದೆ.

ಗುಟ್ಟಾಗಿ ಮದುವೆ ಆದ ನಟಿ ರೆಬಾ ಮೋನಿಕಾ!
ನಟಿ ರೆಬಾ ಮೋನಿಕಾ ಮದುವೆ ಗುಟ್ಟಾಗಿ ನಡೆದಿದೆ. ಮದುವೆ ಕಾರ್ಯಕ್ರಮದ ವಿಚಾರವನ್ನು ಕುಟುಂಬಸ್ಥರು ಗೌಪ್ಯವಾಗಿ ಇಟ್ಟಿದ್ದರು. ಮದುವೆಯಲ್ಲಿ ಕೇವಲ ಆಪ್ತ ಬಂಧುಗಳು ಮಾತ್ರ ಭಾಗಿ ಆಗಿರುವುದಾಗಿ ತಿಳಿದು ಬಂದಿದೆ. ಜನವರಿ 9ರಂದೇ ಮದುವೆ ನಡೆದಿದ್ದರು ಎರಡು ದಿನದ ಬಳಿಕ ಈ ಸುದ್ದಿ ಹೊರ ಬಂದಿದೆ. ಈ ಸುದ್ದಿ ವೈರಲ್ ಆಗುತ್ತಿದ್ದ ಹಾಗೆ ರೆಬಾ ಮೋನಿಕಾ ಮತ್ತು ಜೋಮನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ್ಲಿ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಚರ್ಚ್‌ನಲ್ಲಿ ಮದುವೆ, ಲೀಲಾ ಪ್ಯಾಲೆಸ್‌ನಲ್ಲಿ ಆರತಕ್ಷತೆ!
ರೆಬಾ ಮೋನಿಕಾ ಹೆಚ್ಚಾಗಿ ತಮಿಳು ಮತ್ತು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಮಾಡಿದ್ದು ಒಂದೇ ಒಂದು ಸಿನಿಮಾ ಅದು 'ರತ್ನನ್ ಪ್ರಪಂಚ'. ಈಗ ಕನ್ನಡದ 'ಸಕಲಕಲಾವಲ್ಲಭ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ರೆಬಾ ಬೆಂಗಳೂರಿನಲ್ಲಿ ಮದುವೆ ಆಗಿದ್ದಾರೆ ಕಾರಣ ಈಕೆ ಬೆಂಗಳೂರು ಮೂಲದಾಕೆ. ಅವರದ್ದು ಮಲಯಾಳಂ ಕುಟುಂಬ ಆದರು ಬೆಂಗಳೂರಿನಲ್ಲಿ ವಾಸವಿದೆ. ರೆಬಾ ಬೆಂಗಳೂರಿನಲ್ಲಿ ಹುಟ್ಟಿ ಇಲ್ಲೇ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ. ಹಾಗಾಗಿ ರೆಬಾ ಮೋನಿಕಾ ಅವರು ಬೆಂಗಳೂರಿನ ಚರ್ಚ್‌ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ನಂತರ ಲೀಲಾ ಪ್ಯಾಲೆಸ್‌ನಲ್ಲಿ ಆರತಕ್ಷತೆ ಮಾಡಿಕೊಂಡಿದ್ದಾರೆ.

ಮೂರುವರೆ ವರ್ಷದಿಂದ ಪ್ರೀತಿಯಲ್ಲಿ ಇದ್ದ ರೆಬಾ-ಜೋಮನ್!
ನಟಿ ರೆಬಾ ಮೋನಿಕಾ ಮತ್ತು ಜೋಮನ್ ಜೋಸೆಫ್ ಇಬ್ಬರೂ ಕೂಡ ಮೂರುವರೆ ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಆದರೆ ಒಂದು ವರ್ಷದ ಹಿಂದೆ ಈ ವಿಚಾರವನ್ನು ಮನೆಯವರು ಮತ್ತು ಸ್ನೇಹಿತರಿಗೆ ಈ ವಿಚಾರವನ್ನು ರೆಬಾ ಮತ್ತು ಜೋಮನ್ ತಿಳಿಸಿದರಂತೆ, ಸಾಕಷ್ಟು ಏರಿಳಿತದ ಬಳಿಕ ಇಬ್ಬರು ಮದುವೆ ಆಗಲು ನಿರ್ಧರಿಸಿದರಂತೆ. ಈ ವಿಚಾರವನ್ನು ಮಾಧ್ಯಮ ಒಂದರ ಸಂದರ್ಶನದಲ್ಲಿ ರೆಬಾ ಹೇಳಿ ಕೊಂಡಿದ್ದಾರೆ.

ರೆಬಾ ಕೈಯಲ್ಲಿ ಸಾಲು ಸಾಲು ಚಿತ್ರಗಳು!
ನಟಿ ರೆಬಾ ಸಿನಿಮಾ ಜರ್ನಿ ಕೂಡ ಚೆನ್ನಾಗಿ ಸಾಗಿದೆ. ಮಲಯಾಳಂ, ತಮಿಳಿನ ನಂತರ ಈಗ ರೆಬಾಗೆ ಕನ್ನಡದಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ರೆಬಾಗೆ ರತ್ನನ್ ಪ್ರಪಂಚ ಚಿತ್ರದ ಬಳಿಕ ಸಕಲಕಲಾ ವಲ್ಲಭ ಚಿತ್ರ ಸಿಕ್ಕಿದೆ. ಇನ್ನು ತಮಿಳಿನ 'ಎಫ್.ಐ.ಆರ್', 'ಅಕ್ಟೋಬರ್ 31st ಲೇಡೀಸ್ ನೈಟ್', ಮಲಯಾಳಂನ 'ರಜಿನಿ' ಚಿತ್ರಗಳು ರೆಬಾ ಮೋನಿಕಾ ಕೈಯಲ್ಲಿ ಇವೆ.


Click it and Unblock the Notifications











