ನಟನ ಜೊತೆ ಸೀಕ್ರೆಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡ್ರಂತೆ ಖ್ಯಾತ ನಟಿ.!
'ಚಿಕ್ಕವಯಸ್ಸಿನಲ್ಲಿ ಬ್ಲೂ ಫಿಲಂ ನೋಡುತ್ತಿದ್ದೆ' ಎಂದು ಹೇಳುವ ಮೂಲಕ ಸಿನಿಮಾ ಜತ್ತಿನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ನಟಿ ರೆಜಿನಾ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಸಿನಿಮಾ ಲೋಕದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಿರುವ ರಜಿನಾ, ಕದ್ದು ಮುಚ್ಚಿ ಮದುವೆ ಆಗಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚಿಗಷ್ಟೆ ತೆಲುಗು ನಟರೊಬ್ಬರ ಜೊತೆ ಸೀಕ್ರೆಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ವರ್ಷದ ಅಂತ್ಯಕ್ಕೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿರುವ ರೆಜಿನಾ, ''ಇದೆಲ್ಲ ಸುಳ್ಳು, ಇಂತಹ ಸುದ್ದಿಗಳು ಹೇಗೆ ಬರುತ್ತೋ, ಇದನ್ನ ಕೇಳಿದಾಗ ನನಗೆ ಕಿರಿಕಿರಿ ಉಂಟು ಆಗುತ್ತೆ. ನಾನು ಸೀಕ್ರೆಟ್ ಆಗಿ ಮದುವೆ ಆಗಲ್ಲ, ಎಲ್ಲರಿಗೂ ತಿಳಿಸಿ ಮದುವೆ ಆಗ್ತೀನಿ'' ಎಂದು ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.
ಈ ಹಿಂದೆ ಕೂಡ ಹಲವು ನಟರ ಜೊತೆ ರೆಜಿನಾ ಡೇಟ್ ಮಾಡ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ತೆಲುಗು ನಟ ಸುದೀಪ್ ಕೃಷ್ಣನ್, ಸಾಯಿ ಧರಮ್ ತೇಜ್ ಜೊತೆ ಕೂಡ ರೆಜಿನಾ ಹೆಸರು ಅಂಡಿಕೊಂಡಿತ್ತು. ನಂತರ ಇದೆಲ್ಲ ಸುಳ್ಳು ಎಂಬುದು ಖಾತ್ರಿಯಾಯಿತು.
2005ರಲ್ಲಿ ತಮಿಳಿನ 'ಕಂಡ ನಾಳ್ ಮೊದಲ್' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ ರೆಜಿನಾ, ಇದುವರೆಗೂ ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದ 'ಸೂರ್ಯಕಾಂತಿ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











