For Quick Alerts
  ALLOW NOTIFICATIONS  
  For Daily Alerts

  ಶರಣ್ 'ರಾಜ್ ವಿಷ್ಣು'ನಿಂದ ಮಲ್ಲು ಕುಟ್ಟಿ ರೆಮ್ಯಾ ನಂಬೀಸನ್ ಔಟ್

  By Suneetha
  |

  ತಮಿಳು 'ರಜಿನಿ ಮುರುಗನ್' ಚಿತ್ರದ ಕನ್ನಡ ಅವತರಣಿಕೆ 'ರಾಜ್ ವಿಷ್ಣು' ಚಿತ್ರದಲ್ಲಿ ಕಾಮಿಡಿ ಕಿಂಗ್ ಶರಣ್ ಮತ್ತು ಕಾಮಿಡಿ ನಟ ಚಿಕ್ಕಣ್ಣ ಅವರು ಮಿಂಚುತ್ತಿದ್ದಾರೆ ಎಂಬುದನ್ನು ನಾವು ಮೊದಲೇ ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ.

  ಇನ್ನು ಈ ಚಿತ್ರದಲ್ಲಿ ಶರಣ್ ಅವರಿಗೆ ನಾಯಕಿಯಾಗಿ ಮಲ್ಲು ಕುಟ್ಟಿ ರೆಮ್ಯಾ ನಂಬೀಸನ್ ಅವರು ಮಿಂಚುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಮಾತ್ರವಲ್ಲದೇ ಈ ಚಿತ್ರದಲ್ಲಿ ನಟಿಸಲು ನಟಿ ರೆಮ್ಯಾ ನಂಬೀಸನ್ ಅವರು ಕೂಡ ಒಪ್ಪಿಕೊಂಡಿದ್ದರು.

  ಆದರೆ ಇದೀಗ 'ರಾಜ್ ವಿಷ್ಣು' ಚಿತ್ರದಲ್ಲಿ ರೆಮ್ಯಾ ಅವರು ನಟಿಸುತ್ತಿಲ್ಲವಂತೆ. ಇದನ್ನು ಖುದ್ದು ಚಿತ್ರದ ನಿರ್ಮಾಪಕ ರಾಮು ಅವರೇ ಸ್ಪಷ್ಟಪಡಿಸಿದ್ದಾರೆ.['ರಾಜ್-ವಿಷ್ಣು'ಗೆ ಸಲಾಂ ಹೊಡೆಯುತ್ತಿದ್ದಾರೆ ತುಂಡು ಹೈಕಳು]

  ಈ ಚಿತ್ರದಲ್ಲಿ ನಟಿಸಲು ಬಹಳ ಉತ್ಸುಕರಾಗಿದ್ದ ನಟಿ ರೆಮ್ಯಾ ನಂಬೀಸನ್ ಅವರು ಇದೀಗ ಡೇಟ್ ಕ್ಲ್ಯಾಷ್ ಆಗುತ್ತಿರುವ ಕಾರಣದಿಂದ ಈ ಚಿತ್ರತಂಡದಿಂದ ಹೊರಬಿದ್ದಿದ್ದಾರೆ. ಸದ್ಯಕ್ಕೆ ಅವರ ಜಾಗಕ್ಕೆ ಚಿತ್ರತಂಡದವರು ಬೇರೆ ನಾಯಕಿಯ ಹುಡುಕಾಟದಲ್ಲಿ ತೊಡಗಿದ್ದಾರೆ.

  ನಟ ಶರಣ್ ಅವರ ಜೊತೆ ಕಾಮಿಡಿ ನಟ ಚಿಕ್ಕಣ್ಣ, ರವಿಶಂಕರ್, ಸಾಧು ಕೋಕಿಲ ಮುಂತಾದವರು 'ರಾಜ್ ವಿಷ್ಣು' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.[ಮತ್ತೆ ರಿಮೇಕ್ ಚಿತ್ರದತ್ತ ಕಾಮಿಡಿ ಕಿಂಗ್ ಶರಣ್ ಚಿತ್ತ]

  ವಿಶೇಷವಾಗಿ ಶರಣ್ ಅವರ ಅಜ್ಜನ ಪಾತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಮಿಂಚುತ್ತಿರುವುದು ಈ ಚಿತ್ರದ ಹೈಲೈಟ್. ಚಿತ್ರಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.

  ಮಲಯಾಳಂ ಬೆಡಗಿ ರೆಮ್ಯಾ ನಂಬೀಸನ್ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ 'ಸ್ಟೈಲ್ ಕಿಂಗ್' ಚಿತ್ರದಲ್ಲಿ ನಟಿಸುವ ಮೂಲಕ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ರೆಮ್ಯಾ ಅವರ ಆಕರ್ಷಕ ಚಿತ್ರಗಳು ಕೇವಲ ನಿಮಗಾಗಿ...

  English summary
  Malayalam Actress Remya Nambeesan Kannada Actor Sharan's upcoming project 'Raj Vishnu' with Producer Raamu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X