ಮಲ್ಲು ಹುಡುಗನ ಜೊತೆ ರಿಷಿಕಾ ಮದುವೆ ಫಿಕ್ಸ್

ಹೌದು ಯಾಕೆ ಇಷ್ಟೊಂದು ಗಡಿಬಿಡಿಯಲ್ಲಿ ನಿಶ್ಚಿತಾರ್ಥ ಮುಗಿಸಿದ್ದೀರಾ ಎಂದರೆ... ಮುಂದೆ ಒಳ್ಳೆ ಮುಹೂರ್ತ ಇಲ್ಲ. ಹಾಗಾಗಿ ಬೇಗ ಮುಗಿಸಬೇಕಾಯಿತು ಎಂದಿವೆ ರಿಷಿಕಾ ಕುಟುಂಬ ಮೂಲಗಳು. ಇಷ್ಟಕ್ಕೂ ರಿಷಿಕಾ ಕೈಹಿಡಿಯಲಿರುವ ಹುಡುಗ ಕೇರಳ ಮೂಲದವರು.
ಈತನಿಗೂ ಸಿನಿಮಾ ಕ್ಷೇತ್ರಕ್ಕೂ ಹನ್ನೆರಡು ಮೈಲಿ ದೂರ. ಎಲೆಕ್ಟ್ರಿಕ್ ಬಿಜಿನೆಸ್ ಮಾಡುತ್ತಿರುವ ಈತನ ಹೆಸರು ಸಂದೀಪ್. ಬ್ಯಾಂಕಾಕ್, ಕೊಚ್ಚಿ ಸೇರಿದಂತೆ ಹಲವು ಕಡೆ ಬಿಜಿಜೆಸ್ ನಲ್ಲಿ ಬಿಜಿಯಾಗಿದ್ದಾರೆ. ಮದುವೆ ಏಪ್ರಿಲ್ 14ಕ್ಕೆ ಫಿಕ್ಸ್ ಆಗಿದ್ದು ಬೆಂಗಳೂರಿನಲ್ಲೇ ನಡೆಯಲಿದೆ.
ಅಂದಗಾಗೆ ರಿಷಿಕಾ ಕೈಹಿಡಿಯುತ್ತಿರುವ ಹುಡುಗ ಸಂದೀಪ್ ನನ್ನು ಬಹುಕಾಲದಿಂದ ಪ್ರೀತಿಸುತ್ತಿದ್ದರಂತೆ. ಕಣ್ಣಲ್ಲೇ ಆರಂಭವಾದ ಪ್ರೀತಿ ಬಳಿಕ ಹೃದಯಕ್ಕೆ ಲಗ್ಗೆ ಹಾಕಿದೆ. ಈಗ ಮದುವೆ ತನಕ ಬಂದು ನಿಂತಿದೆ. ರಿಷಿಕಾ ಅಣ್ಣ ಆದಿತ್ಯ ಹಾಗೂ ತಂಗಿ ಟೀನಾ ಮೂಲಕ ಸಂದೀಪ್ ಪರಿಚಯವಾಯಿತಂತೆ. ಮೊದಲ ನೋಟದಲ್ಲೇ ಪ್ರೀತಿ ಪಲ್ಲವಿಸಿದೆ.
ಸದ್ಯಕ್ಕೆ ಜೀ ಕನ್ನಡದ 'ರಗಳೆ ವಿತ್ ರಿಷಿಕಾ' ಕಾರ್ಯಕ್ರಮದಲ್ಲಿ ಬಿಜಿಯಾಗಿರುವ ರಿಷಿಕಾ, 'ಬೆಂಕಿ ಬಿರುಗಾಳಿ' ಚಿತ್ರದ ನಗ್ನ ಪೋಸ್ಟರ್ ಗಳ ಮೂಲಕ ರಾತ್ರೋರಾತ್ರಿ ಖ್ಯಾತಿಯ ಉತ್ತುಂಗಕ್ಕೇರಿದ್ದರು. ಕಂಠೀರವ, ಕಳ್ಳ ಮಳ್ಳ ಸುಳ್ಳ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











