twitter
    For Quick Alerts
    ALLOW NOTIFICATIONS  
    For Daily Alerts

    ಮಂತ್ರಿ ಸ್ಥಾನ ಕೈತಪ್ಪಿದ ಹಿನ್ನಲೆ ಅಜ್ಞಾತ ಸ್ಥಳದಲ್ಲಿ ನಟಿ ರೋಜಾ

    |

    ತಮಿಳು ನಟಿ ಮತ್ತು ಎಂ ಎಲ್ ಎ ರೋಜಾ ಸಚಿವಸ್ಥಾನ ಕೈತಪ್ಪಿದ ಹಿನ್ನಲೆ ಮುನಿಸಿಕೊಂಡಿದ್ದಾರೆ. ಆಂದ್ರಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ನಟಿ ರೋಜಾ ವೈ ಎಸ್ ಆರ್ ಪಕ್ಷದಿಂದ ಸ್ಪರ್ಧೆ ಮಾಡಿ ರೋಚಕ ಗೆಲವು ಪಡೆದಿದ್ದಾರೆ. ನೂತನ ಸಿಎಂ ಜಗನ್ ಮೋಹನ್ ರೆಡ್ಡಿ ಸಚಿವ ಸಂಪುಟ ಸೇರುವ ಆಸೆ ವ್ಯಕ್ತಪಡಿಸಿದ್ದರು.

    ಐರನ್ ಲೆಗ್ ಎಂದು ಜರಿಯುತ್ತಿದ್ದವರ ವಿರುದ್ಧ ರೋಜಾ ಗೆದ್ದು ಬೀಗಿದ್ದಾರೆ. ಈ ಮೂಲಕ ಗೋಲ್ಡನ್ ಲೆಗ್ ಎಂದು ಸಾಬೀತು ಮಾಡಿದ್ದ ರೋಜಾ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಪಕ್ಷದಲ್ಲಿ ಪ್ರಭಾವಿ ನಾಯಕಿಯಾಗಿ ಗುರುತಿಸಿಕೊಂಡಿದ್ದ ರೋಜಾ ಅವರಿಗೆ ಕ್ಯಾಬಿನೆಟ್ ಸ್ಥಾನ ಕೈತಪ್ಪಿರುವುದು ಬಾರಿ ಬೇಸರಕ್ಕೆ ಕಾರಣವಾಗಿದೆ.

    'ನಾನು ವೈಎಸ್ಸಾರ್ ಪಕ್ಷದ 'ಲಕ್ಕಿ ಚಾರ್ಮ್'': ನಟಿ ರೋಜಾ

    ನಟಿಯಾಗಿದ್ದ ರೋಜಾ ಮೊದಲು ರಾಜಕೀಯ ಪ್ರವೇಶ ಮಾಡಿದ್ದು ತೆಲುಗು ದೇಶಂ ಪಕ್ಷದ ಮೂಲಕ. 2009ರಲ್ಲಿ ಪಕ್ಷ ಸೇರ್ಡೆಯಾಗಿದ್ದ ರೋಜಾ ಅದೆ ವರ್ಷ ವಿಧಾನಸಭೆ ಚುನಾವಣೆಯಲ್ಲಿ ನಿಂತು ಸೋತಿದ್ದರು. ಆನಂತರ ರೋಜಾ ಜಗನ್ ಅವರ ವೈ ಎಸ್ ಆರ್ ಕಾಂಗ್ರೇಸ್ ಸೇರಿದ್ದರು. ಮುಂದೆ ಓದಿ..

    ಮುನಿಸಿಕೊಂಡ ರೋಜಾ ಈಗ ಎಲ್ಲಿದ್ದಾರೆ ?

    ಮುನಿಸಿಕೊಂಡ ರೋಜಾ ಈಗ ಎಲ್ಲಿದ್ದಾರೆ ?

    ಈ ಬಾರಿ ರೋಚಕ ಗೆಲುವು ಪಡೆದಿರುವ ರೋಜಾ ಜಗನ್ ಮೋಹನ್ ರೆಡ್ಡಿ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನದ ದೊಡ್ಡ ನಿರೀಕ್ಷೆಯಲ್ಲಿ ಇದ್ದರು. ಆದ್ರೀಗ ಮಂತ್ರಿಗಿರಿ ಕೈ ತಪ್ಪಿದೆ. ಜಗನ್ ಮೋಹನ್ ರೆಡ್ಡಿ 25 ಮಂದಿ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರೆ. ಆದ್ರೆ ರೋಜಾ ಹೆಸರು ಕೈಬಿಟ್ಟಿದ್ದನ್ನು ನೋಡಿ ಮುನಿಸಿಕೊಂಡು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರಂತೆ. ಯಾರ ಸಂಪಕಕ್ಕು ಸಿಗದೆ ಎಲ್ಲಿದ್ದಾರೆ ಎನ್ನುವ ಮಾಹಿತಿ ಕೂಡ ಇಲ್ಲವಂತೆ.

    ಜಗನ್ ಗೆ ರೋಜಾ ಅಭಿಮಾನಿಗಳ ಮನವಿ

    ಜಗನ್ ಗೆ ರೋಜಾ ಅಭಿಮಾನಿಗಳ ಮನವಿ

    ವೈ ಎಸ್ ಆರ್ ಪಕ್ಷದಲ್ಲಿ ಕಷ್ಟಪಟ್ಟು ಕೆಲಸ ಮಾಡಿದ ರೋಜಾ ಅವರಿಗೆ ಉತ್ತಮ ಸ್ಥಾನ ನೀಡುವಂತೆ ರೋಜಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಪಕ್ಷದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ನಿಯತ್ತಿನಿಂದ ದುಡಿದ ರೋಜಾ ಅವರ ಕೆಲಸ ಗುರುತಿಸಿ ಉತ್ತಮ ಸ್ಥಾನ ನೀಡಿ ಎಂದು ಜಗನ್ ಅವರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

    ಜಾತಿ ರಾಜಕಾರಣ

    ಜಾತಿ ರಾಜಕಾರಣ

    ರೋಜಾ ಅವರು ರೆಡ್ಡಿ ಸಮುದಾಯಕ್ಕೆ ಸೇರಿದವರು. ಆದ್ರೆ ಅವರ ಬದಲು ರಾಮಚಂದ್ರ ರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಕಿತ್ತೂರು ಕ್ಷೇತ್ರಕ್ಕೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ರಾಮಚಂದ್ರ ರೆಡ್ಡಿಗೆ ಅವಕಾಶ ಸಿಕ್ಕಿದೆ. ಆದ್ರೆ ಅದೇ ಜಿಲ್ಲಿಯವರಾದ ರೋಜಾ ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ. ಇದರಿಂದ ರೋಜಾ ಮಾತ್ರವಲ್ಲದೆ ಅವರ ಬೆಂಬಲಿಗರು ಬೇಸರಗೊಂಡಿದ್ದಾರಂತೆ.

    ಕಡಿಮೆ ಅಂತರದಲ್ಲಿ ರೋಚಕ ಗೆಲುವು

    ಕಡಿಮೆ ಅಂತರದಲ್ಲಿ ರೋಚಕ ಗೆಲುವು

    ರೋಜಾ ಕಡಿಮೆ ಅಂತರದಲ್ಲಿ ಭರ್ಜರಿ ಗೆಲವು ದಾಖಲಿಸಿದ್ದಾರೆ. ಟಿಡಿಪಿ ಅಭ್ಯರ್ಥಿ ಪ್ರಕಾಶ್ ವಿರುದ್ಧ ರೋಜಾ 2,630 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. 2014ರಲ್ಲಿ ಟಿಡಿಪಿ ಅಭ್ಯರ್ಥಿ ಗಾಲಿ ಮುದ್ದುಕೃಷ್ಣ ನಾಯ್ಡು ವಿರುದ್ಧ ಕೇವಲ 858 ಅಂತರದಲ್ಲಿ ಗೆಲುವು ಪಡೆದಿದ್ದರು. ಈ ಬಾರಿ ಕೂಡ ಕಡಿಮೆ ಅಂತರದಲ್ಲಿ ಮತ್ತೆ ಗೆದ್ದು ಬೀಗಿರುವ ರೋಜಾಗೆ ಸಚಿವ ಸ್ಥಾನ ಕೈತಪ್ಪಿರುವುದು ಬೇಸರಕ್ಕೆ ಕಾರಣವಾಗಿದೆ.

    English summary
    Actress Roja has switched off her mobile phone and she avoids receiving calls from Chief Minister YS Jagan Mohan Reddy. Roja unhappy after being left out of the cabinet.
    Monday, June 10, 2019, 18:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X