For Quick Alerts
  ALLOW NOTIFICATIONS  
  For Daily Alerts

  ಐಟಂ ಡಾನ್ಸ್ ಗೆ ಮರಳಿದ 'ಗಡಿಬಿಡಿ ಗಂಡ' ರೋಜಾ

  By Rajendra
  |
  ಇದೇನಪ್ಪಾ ಇದು ಅತ್ತೆ, ಅಕ್ಕ, ಅಮ್ಮನ ಪಾತ್ರ ಮಾಡಬೇಕಾದ ವಯಸ್ಸಲ್ಲಿ ಐಟಂ ಡಾನ್ಸ್ ಎಂದುಕೊಳ್ಳುತ್ತಿದ್ದೀರಾ? ಹೌದು ಒಂದು ಕಾಲದ ತಾರೆ, ಪ್ರೆಸೆಂಟ್ ರಾಜಕಾರಣಿ ರೋಜಾ ಐಟಂ ಡಾನ್ಸ್ ಮಾಡಲು ಸಹಿ ಹಾಕಿದ್ದಾರೆ. ಇನ್ನೇನಿದ್ದರೂ ಸೊಂಟ ಬಳುಕಿಸುವುದು ಮಾತ್ರ ಬಾಕಿ ಇದೆ.

  ಸದ್ಯಕ್ಕೆ ವೈಎಸ್ ಆರ್ ಕಾಂಗ್ರೆಸ್‌ ಪಕ್ಷದಲ್ಲಿರುವ ಸಕ್ರಿಯವಾಗಿರುವ ಸಿನಿಮಾ ತಾರೆ ರೋಜಾ ಐಟಂ ಡಾನ್ಸ್ ಗೆ ಅಡಿಯಿಡುವ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಶುರುಮಾಡಿದ್ದಾರೆ. ಈ ಹಿಂದೆ ತೆಲುಗು, ತಮಿಳು ಚಿತ್ರಗಳಲ್ಲಿ ರೋಜಾ ಮೈಕೈ ಕುಣಿದಿದ್ದರು. ಆಕೆಯ ಕುಣಿತಕ್ಕೆ ಪ್ರೇಕ್ಷಕರೂ ತಲೆ ಕುಣಿಸಿದ್ದರು. ಆಗೆಲ್ಲಾ ವಯಸ್ಸು ಇತ್ತು ಜೊತೆಗೆ ಕೈಯಲ್ಲಿ ಬಹಳಷ್ಟು ಅವಕಾಶಗಳೂ ಇದ್ದವು.

  ಈಗಲೂ ಅಷ್ಟೇ ಕೈಯಲ್ಲಿ ಬಹಳಷ್ಟು ಅವಕಾಶಗಳಿವೆ ಆದರೆ ವಯಸ್ಸಿಲ್ಲ. ಇರಲಿ ಬಿಡಿ ವಿಷಯ ಇದಲ್ಲ. ಇಷ್ಟಕ್ಕೂ ರೋಜಾ ಐಟಂ ಡಾನ್ಸ್ ಮಾಡುತ್ತಿರುವುದು ಕನ್ನಡದಲ್ಲಂತೂ ಅಲ್ಲ. ಪಕ್ಕದ ತಮಿಳು ಚಿತ್ರದಲ್ಲಿ. ಚಿತ್ರದ ಹೆಸರು ವೆಟ್ಟೈಯಾಡು. ಕುಣಿದುಕೊಳ್ಳಲಿ ಬಿಡಿ ನಮಗೇನು? ಒಟ್ನಲ್ಲಿ ಕನ್ನಡಕ್ಕೆ ಬರಲಿಲ್ಲ ಅಲ್ಲ ಎಂಬುದೇ ಸಮಾಧಾನದ ಸಂಗತಿ.

  ತೊಂಬತ್ತರ ದಶಕದಲ್ಲಿ ಚಿತ್ರರಸಿಕರ ಹೃದಯ ಸಿಂಹಾಸನ ಅಲಂಕರಿಸಿದ್ದ ರೋಜಾ, ಒಂದು ದಶಕಕ್ಕೂ ಹೆಚ್ಚು ಕಾಲ ಚಿತ್ರರಸಿಕರ ಮನ ತಣಿಸಿದ್ದರು. ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್, ರಜನಿಕಾಂತ್, ಚಿರಂಜೀವಿ, ಬಾಲಕೃಷ್ಣ, ಸತ್ಯರಾಜ್ ಸೇರಿದಂತೆ ಹಲವಾರು ಟಾಪ್ ತಾರೆಗಳೊಂದಿಗೆ ತೆರೆ ಹಂಚಿಕೊಂಡ ಖ್ಯಾತಿ ರೋಜಾ ಅವರದು.

  ಇದುವರೆಗೂ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ಪೋಷಿಸಿದ್ದಾರೆ. ಚಿತ್ರ ನಿರ್ಮಾಪಕ ಸೆಲ್ವರಾಜ್ ಅವರನ್ನು ಕೈಹಿಡಿದ ಬಳಿಕ ರೋಜಾ ತೆರೆಗೆ ಮರೆಯಾಗಿದ್ದರು. ಆಗಾಗ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡದ್ದುಂಟು. ಅವೆಲ್ಲವೂ ವಯಸ್ಸಾದ ತಾಯಿಯ ಪಾತ್ರಗಳಲ್ಲದಿದ್ದರೂ ಯುವ ವಯಸ್ಸಿನ ತಾಯಿ ಪಾತ್ರಗಳು.

  ಕನ್ನಡದ ಮೌರ್ಯ, ನಲಿ ನಲಿಯುತಾ, ಪರ್ವ ಮುಂತಾದ ಚಿತ್ರದಲ್ಲಿ ರೋಜಾ ಅಭಿನಯಿಸಿರುವುದು ಗೊತ್ತೇ ಇದೆ. ಮುಂದೊಂದು ದಿನ ಕನ್ನಡದಲ್ಲೂ ಐಟಂ ಡಾನ್ಸ್ ಶುರುವಚ್ಚಿಕೊಳ್ಳಬಹುದೇನೋ? (ಏಜೆನ್ಸೀಸ್)

  English summary
  Actress turned politician Roja is returning back after a long gap. Now the actress is turning glamour by doing item songs. She has been booked for an item number in the film titled “Vettaiyadu”. But doing a hot number is not new for her. Roja was a successful actress for more than a decade starting from the early nineties.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X