ಮದ ಗಜ ರಾಜನ ಜೊತೆ ಸದಾ ಐಟಂ ಸಾಂಗ್

ತಮಿಳು ನಟ ವಿಶಾಲ್ ನಾಯಕ ನಟನಾಗಿರುವ ಎಂಜಿಆರ್ ಎಂಬ ಚಿತ್ರದಲ್ಲಿ ಸದಾ ತಮ್ಮ ಸೊಂಟವನ್ನು ಬಳುಕಿಸಲಿದ್ದಾರೆ. ಇಲ್ಲಿ ಎಂಜಿಆರ್ ಎಂದರೆ ತಮಿಳರು ಆರಾಧಿಸುವ ಎಂ.ಜಿ.ರಾಮಚಂದ್ರನ್ ಅಲ್ಲವೇ ಅಲ್ಲ ಮದ ಗಜ ರಾಜ ಎಂಬುದರ ಸಂಕ್ಷಿಪ್ತ ರೂಪ.
ಚಿತ್ರದ ಶೀರ್ಷಿಕೆಯೇನೋ ವಿಶೇಷವಾಗಿದೆ. ಅದಕ್ಕೆ ತಕ್ಕಂತೆ ಸದಾ ಐಟಂ ಸಾಂಗ್ ಕೂಡ ಸ್ಪೆಷಲ್ ಆಗಿದ್ದರೆ ಸದಾಗೆ ಬ್ರೇಕ್ ಸಿಗಲೂ ಸಿಗಬಹುದೇನೋ. ಈ ಚಿತ್ರದ ನಾಯಕಿ ಕಾರ್ತಿಕಾ ನಾಯರ್. ಇಲ್ಲಿ ಸದಾ ಏನಿದ್ದರೂ ಐಟಂ ಸಾಂಗ್‌ಗಷ್ಟೇ ಸೀಮಿತ. ಕನ್ನಡದಲ್ಲಿ ಮೈಲಾರಿ, ಹುಡುಗ ಹುಡುಗ, ಮೋಹಿನಿ, ಮಲ್ಲಿಕಾರ್ಜುನ ಚಿತ್ರಗಳಲ್ಲಿ ಅಭಿನಯಿಸಿರುವ ಸದಾ ನಟಿಸಿರುವ 'ಗಾಡ್‌ಫಾದರ್' ಇನ್ನಷ್ಟೇ ಬಿಡುಗಡೆಯಾಗಬೇಕಿದೆ. (ಏಜೆನ್ಸೀಸ್)
More from Filmibeat
English summary
South Indina beauty Sada ready for item song. She is doing a item number in Vishal's triple action movie 'MGR' (Mada Gaja Raja). Kartika is the heroine in the film.


Click it and Unblock the Notifications











