For Quick Alerts
  ALLOW NOTIFICATIONS  
  For Daily Alerts

  ಬೆತ್ತಲೆಯಾಗಿ ಆಡಿಷನ್ ನೀಡಲು ಕೇಳಿದ್ದ: ರಾಜ್ ಕುಂದ್ರಾ ವಿರುದ್ಧ ಬಾಂಬ್ ಸಿಡಿಸಿದ ನಟಿ

  |

  ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಪ್ರದರ್ಶನ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನವಾಗಿದ್ದು, ಪ್ರಕರಣ ಸಂಬಂಧ ಹಲವು ಕುತೂಹಲಕಾರಿ ಅಂಶಗಳು ಹೊರಗೆ ಬರುತ್ತಿವೆ.

  ನಟಿ ಸಾಗರಿಕಾ ಸುಮನ್ ಮಾತನಾಡಿ, ''ರಾಜ್ ಕುಂದ್ರಾ, ಬೆತ್ತಲೆಯಾಗಿ ಆಡಿಷನ್ ನೀಡುವಂತೆ ಕೇಳಿದ್ದ'' ಎಂದಿದ್ದಾರೆ.

  ''2020ರ ಆಗಸ್ಟ್‌ನಲ್ಲಿ ನನಗೆ ವೆಬ್ ಸರಣಿಯೊಂದರಲ್ಲಿ ನಟಿಸಲು ಅವಕಾಶ ಬಂತು. ರಾಜ್ ಕುಂದ್ರಾ ಸಂಸ್ಥೆಯ ವ್ಯವಸ್ಥಾಪಕ ಉಮೇಶ್ ಕಾಮತ್ ನನಗೆ ಕರೆ ಮಾಡಿದರು. ನನಗೆ ವಿಡಿಯೋ ಕಾಲ್‌ನಲ್ಲಿ ಆಡಿಷನ್‌ ನೀಡುವಂತೆ ಹೇಳಲಾಗಿತ್ತು'' ಎಂದು ಮಾಹಿತಿ ಬಿಚ್ಚಿಟ್ಟಿದ್ದಾರೆ ನಟಿ.

  ವಿಡಿಯೋ ಕಾಲ್‌ ಮೂಲಕ ಆಡಿಷನ್ ನೀಡಲು ಸಜ್ಜಾಗಿದ್ದೆ. ಬೆತ್ತಲೆಯಾಗಿ ಆಡಿಷನ್ ನೀಡುವಂತೆ ನನಗೆ ಕೇಳಲಾಯಿತು. ಆದರೆ ನಾನು ಅದಕ್ಕೆ ನಿರಾಕರಿಸಿ ಕಾಲ್ ಕಟ್ ಮಾಡಿದೆ. ಆಡಿಷನ್ ನೀಡುವ ದಿನ ಮೂವರು ವಿಡಿಯೋ ಕಾಲ್‌ನಲ್ಲಿದ್ದರು. ಇಬ್ಬರ ಮುಖ ಕಾಣುತ್ತಿರಲಿಲ್ಲ. ಅದರಲ್ಲಿ ಒಬ್ಬರು ರಾಜ್ ಕುಂದ್ರಾ ಎಂದು ನನಗನಿಸುತ್ತದೆ. ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಹಸ್ತಕ್ಷೇಪವಿದ್ದರೆ ಆತನ ಬಂಧನ ಆಗಲೇ ಬೇಕು ಎಂದು ಸಾಗರಿಕಾ ಒತ್ತಾಯಿಸಿದ್ದಾರೆ.

  ಅಶ್ಲೀಲ ವಿಡಿಯೋ ನಿರ್ಮಾಣ ಎಂಬುದು ಬಹಳ ದೊಡ್ಡ ರಾಕೆಟ್. ದೊಡ್ಡ-ದೊಡ್ಡ ಉದ್ಯಮಿಗಳು, ನಟರು ಇದರಲ್ಲಿ ಇದ್ದಾರೆ. ಎಲ್ಲರ ಹೆಸರೂ ಬಹಿರಂಗಗೊಳ್ಳಬೇಕು, ಎಲ್ಲರ ಬಂಧನ ಆಗಬೇಕು ಎಂದು ಸಾಗರಿಕಾ ಹೇಳಿದ್ದಾರೆ.

  ಮುಂಬೈ ಪೊಲೀಸರು ರಾಜ್ ಕುಂದ್ರಾ ಅನ್ನು ಜುಲೈ 19ರಂದು ಬಂಧಿಸಿದ್ದಾರೆ. ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ಜುಲೈ 23ರ ವರೆಗೆ ಪೊಲೀಸರ ವಶಕ್ಕೆ ನೀಡಲಾಗಿದೆ.

  English summary
  Actress Sagarika Suman makes serious allegations against Raj Kundra. She said Raj tried to take nude audition of her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X