ಅಂಬರೀಶ್ ಮಗನಿಗೆ ಜೋಡಿ ಆಗುವ ಬಗ್ಗೆ ಏನಂತಾರೆ ಈ ನಟಿ ?

By Naveen

Recommended Video

ಅಂಬಿ ಪುತ್ರ ಅಭಿಷೇಕ್ ಜೋಡಿ ಈ ಬೆಡಗಿ | Filmibeat Kannada

ನಟ ಅಂಬರೀಶ್ ಮಗ ಅಭಿಷೇಕ್ ಅವರ ಮೊದಲ ಸಿನಿಮಾದ ಬಗ್ಗೆ ಈಗ ಹೊಸ ಹೊಸ ಸುದ್ದಿಗಳು ಹರಿದಾಡುತ್ತಿದೆ. ಈ ಸಿನಿಮಾದ ನಾಯಕಿ ಯಾರು ಎನ್ನುವ ಕುತೂಹಲ ಒಂದು ಕಡೆ ಇದೆ. ಜೊತೆಗೆ ನಟಿ ಸಾಹೇರ್ ಅಫ್ಸಾ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಮಾತಿದೆ. ಆದರೆ ಈ ಬಗ್ಗೆ ಈಗ ಈ ನಟಿಯೇ ಸ್ಪಷ್ಟನೆ ನೀಡಿದ್ದಾರೆ.

'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ ನಟಿ ಸಾಹೇರ್ ಅಫ್ಸಾ ಅಂಬಿ ಮಗನ ಜೊತೆಗೆ ನಟಿಸುವ ಬಗ್ಗೆ ಕ್ಲಾರಿಟಿ ನೀಡಿದ್ದಾರೆ. ''ಎಲ್ಲರೂ ಕೇಳುತ್ತಿದ್ದಾರೆ ನೀವು ಅಂಬರೀಶ್ ಅವರ ಮಗನ ಸಿನಿಮಾದಲ್ಲಿ ನಟಿಸುತ್ತಿರಾ ಅಂತ. ಆದರೆ ಸಿನಿಮಾದ ಮಾತುಕತೆ ಇನ್ನೂ ನಡೆಯುತ್ತಿದೆ. ನಾನು ಇನ್ನೂ ಚಿತ್ರಕ್ಕೆ ಆಯ್ಕೆ ಆಗಿಲ್ಲ. ಬೇರೆ ಸಿನಿಮಾ ಮಾಡುತ್ತ ಇದ್ದೇನೆ.'' ಎಂದು ಸಾಹೇರ್ ಅಫ್ಸಾ ತಿಳಿಸಿದ್ದಾರೆ.

Actress saher afsha gives clarification about Ambareesh’s sons abhishek movie

ಅಂದಹಾಗೆ, ಅಭಿ‍ಷೇಕ್ ಅವರ ಮೊದಲ ಸಿನಿಮಾದ ಲಾಂಚ್ ಕಾರ್ಯಕ್ರಮವನ್ನು ತಂದೆ ಅಂಬರೀಶ್ ಅವರ ಹುಟ್ಟುಹಬ್ಬದ ದಿನ ಮಾಡುವ ಪ್ಲಾನ್ ನಡೆಯುತ್ತಿದೆಯಂತೆ. ಮೇ 29ಕ್ಕೆ ಅಂಬರೀಶ್ ಅವರ ಹುಟ್ಟುಹಬ್ಬ ಇದ್ದು, ಅದೇ ದಿನ ಮಗನ ಸಿನಿಮಾ ಶುರು ಆಗಲಿದೆ ಎನ್ನುವ ಮಾತಿದೆ. ಅಭಿಷೇಕ್ ಅವರ ಈ ಸಿನಿಮಾವನ್ನು ನಾಗಶೇಖರ್ ನಿರ್ದೇಶನ ಮಾಡುತ್ತಿದ್ದಾರೆ. ಸಂದೇಶ್ ನಾಗರಾಜ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಇದರ ಜೊತೆಗೆ ನಟಿ ಸಾಹೇರ್ ಅಫ್ಸಾ ಹಿಂದಿಯ ಒಂದು ಆಲ್ಬಂ ಹಾಡಿನಲ್ಲಿ ನಟಿಸಿದ್ದಾರೆ. ಈ ಹಾಡು ಮೇ ನಲ್ಲಿ ರಿಲೀಸ್ ಆಗಲಿದೆ. ರೂಪದರ್ಶಿ ಆಗಿರುವ ಸಾಹೇರ್ ಅವರ ಮೊದಲ ಹಾಡು ಇದಾಗಿದೆ. ಖಳನಟ ಏಝಜ್ ಖಾನ್ ಜೊತೆ 'ಕುಚ್ ಇಸ್ ತರ...' ಎಂಬ ಹಾಡಿಗೆ ಸಾಹೇರ್ ಹೆಜ್ಜೆ ಹಾಕಿದ್ದಾರೆ . 'ಬೀಗ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಇವರಿಗೆ ಹಿಂದಿ ಹಾಡಿನಲ್ಲಿ ಕಾಣಿಸಿಕೊಂಡಿದ್ದು ಖುಷಿ ಕೊಟ್ಟಿದೆಯಂತೆ.

More from Filmibeat

English summary
Actress saher afsha gives clarification about Ambareesh’s son's abhishek movie. According to the source kannada actor Ambareesh’s son Abhishek debut movie will launch on the occasion of Ambareesh’s birthday (May 29th). The movie is directed by Nagashekar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X