ಸಾಯಿ ಪಲ್ಲವಿ 'ಡಿಯರ್ ಕಾಮ್ರೇಡ್' ಸಿನಿಮಾ ರಿಜೆಕ್ಟ್ ಮಾಡಲು ಇದೇ ಕಾರಣ

ಡಿಯರ್ ಕಾಮ್ರೇಡ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಮಾಡಿರುವ ಸಿನಿಮಾ. ಸೆನ್ಸೇಸನ್ ಸ್ಟಾರ್ಸ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಎರಡನೆ ಭಾರಿಗೆ ಒಂದಾಗಿರುವ ಸಿನಿಮಾ. ಇತ್ತಿಚಿಗಷ್ಟೆ ಟ್ರೈಲರ್ ರಿಲೀಸ್ ಮಾಡಿ ಅಭಿಮಾನಿಗಳ ನಿರೀಕ್ಷೆ ಮಟ್ಟವನ್ನು ಹೆಚ್ಚಿಸಿದೆ ಡಿಯರ್ ಕಾಮ್ರೇಡ್.

ಈ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿರುವ ರಶ್ಮಿಕಾ ಮಂದಣ್ಣ ಜಾಗಕ್ಕೆ ಈ ಮೊದಲು ದಕ್ಷಿಣ ಭಾರತೀಯ ಚಿತ್ರರಂಗದ ಮತ್ತೋರ್ವ ಸ್ಟಾರ್ ನಟಿ ಸಾಯಿ ಪಲ್ಲವಿ ಅವರಿಗೆ ಆಫರ್ ಹೋಗಿತ್ತು. ಆದ್ರೆ ಸಾಯಿ ಈ ಸಿನಿಮಾವನ್ನು ಒಂದು ಕ್ಷಣವು ಯೋಚಿಸದೆ ರಿಜೆಕ್ಟ್ ಮಾಡಿದ್ದಾರೆ. ಸಾಕಷ್ಟು ಆಫರ್ ಗಳನ್ನು ಪಡೆಯುವ ಸಾಯಿ ಈ ಸಿನಿಮಾ ತಿರಸ್ಕರಿಸಿದ್ದಾರೆ ಅಂದ್ರೆ ಅದಕ್ಕೆ ಬಲವಾದ ಕಾರಣನು ಇದೆ.

ಈ ಪರಿ ಸದ್ದು ಮಾಡುತ್ತಿರುವ ಡಿಯರ್ ಕಾಮ್ರೇಡ್ ಸಿನಿಮಾವನ್ನು ಸಾಯಿ ರಿಜೆಕ್ಟ್ ಮಾಡಿದ ಕಾರಣ ಕೇಳಿದ್ರೆ ನಿಜಕ್ಕು ಅಚ್ಚರಿ ಪಡುತ್ತೀರಾ. ಹೌದು, ಚಿತ್ರದಲ್ಲಿ ಹೆಚ್ಚು ಲಿಪ್ ಲಕ್ ದೃಶ್ಯಗಳು ಇರುವ ಕಾರಣ ಸಾಯಿ ಈ ಸಿನಿಮಾವನ್ನು ಒಪ್ಪಿಕೊಂಡಿಲ್ಲವಂತೆ.

ಲಿಪ್ ಲಾಕ್ ದೃಶಕ್ಕಾಗಿ ಸಿನಿಮಾ ಕೈಬಿಟ್ಟ ಸಾಯಿ

ಲಿಪ್ ಲಾಕ್ ದೃಶಕ್ಕಾಗಿ ಸಿನಿಮಾ ಕೈಬಿಟ್ಟ ಸಾಯಿ

ಡಿಯರ್ ಕಾಮ್ರೇಡ್ ಸಿನಿಮಾದ ಮೊದಲ ಟೀಸರ್ ರಿಲೀಸ್ ಆದ ನಂತರ ಹೆಚ್ಚು ಸದ್ದು ಮಾಡಿದ್ದು ಚುಂಬನದ ದೃಶ್ಯ. ಅಲ್ಲದೆ ಸದ್ಯ ರಿಲೀಸ್ ಆಗಿರುವ ಟ್ರೇಲರ್ ನಲ್ಲಿಯೂ ರಶ್ಮಿಕಾ ಮತ್ತು ವಿಜಯ್ ನಡುವೆ ಹೆಚ್ಚು ಚುಂಬನದ ದೃಶ್ಯಗಳಿಗೆ. ಹಾಗಾಗಿ ಇಂತಹ ಸೀನ್ ಗಳಲ್ಲಿ ಸಾಯಿ ಕಾಣಿಸಿಕೊಳ್ಳಲ್ಲ ಎನ್ನುವ ಕಾರಣಕ್ಕೆ ಈ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ. ನಂತರ ಈ ಸ್ಕ್ರಿಪ್ಟ್ ರಶ್ಮಿಕಾ ಪಾಲಾಗಿದೆ.

ರಶ್ಮಿಕಾಗೆ ಅವಕಾಶ ಕೊಡಿಸಿದ್ದು ವಿಜಯ್

ರಶ್ಮಿಕಾಗೆ ಅವಕಾಶ ಕೊಡಿಸಿದ್ದು ವಿಜಯ್

ನಟಿ ಸಾಯಿ ಪಲ್ಲವಿ ರಿಜೆಕ್ಟ್ ಮಾಡಿದ ನಂತರ ನಾಯಕಿ ಪಾತ್ರಕ್ಕೆ ಯಾರು ಎನ್ನುವ ಪ್ರಶ್ನೆ ಎದುರಾದಾಗ ವಿಜಯ್ ದೇವರಕೊಂಡ ರಶ್ಮಿಕಾ ಹೆಸರನ್ನು ಸೂಚಿಸಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದ್ದವು. ಆದ್ರೆ ಈ ಮಾತನ್ನು ತಳ್ಳಿ ಹಾಕಿದ್ದ ವಿಜಯ್ "ಫ್ರೆಂಡ್ ಶಿಪ್ ಬೇರೆ, ಸಿನಿಮಾನೇ ಬೇರೆ, ಸ್ನೇಹಿತೆ ಎಂಬ ಕಾರಣಕ್ಕೆ ಆಯ್ಕೆ ಆಗಿಲ್ಲ. ಪಾತ್ರಕ್ಕೆ ಹೋಲಿಕೆ ಆಗುತ್ತಾರೆ ಎಂಬ ಕಾರಣಕ್ಕೆ ಆಯ್ಕೆ ಆಗಿದ್ದಾರೆ'' ಎಂದು ಸ್ಪಷ್ಟನೆ ನೀಡಿದ್ದರು.

ಸಂಚಲನ ಮೂಡಿಸಿದ್ದ ಲಿಪ್ ಲಾಕ್ ದೃಶ್ಯ

ಸಂಚಲನ ಮೂಡಿಸಿದ್ದ ಲಿಪ್ ಲಾಕ್ ದೃಶ್ಯ

ಡಿಯರ್ ಕಾಮ್ರೇಡ್ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದ್ದಂತೆ ಭಾರಿ ಸಂಚಲನ ಮೂಡಿಸಿತ್ತು. ರಶ್ಮಿಕಾ ಮತ್ತು ವಿಜಯ್ ನಡುವಿನ ಲಿಪ್ ಲಾಕ್ ದೃಶ್ಯ ಭಾರಿ ಚರ್ಚೆಗೆ ಕಾರಣವಾಗಿತ್ತು. ಇಬ್ಬರ ಕಿಸ್ಸಿಂಗ್ ದೃಶ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಂತೆ ವಿಜಯ್ ದೇವರಕೊಂಡ ಸಿಕ್ಕಿಗೆದ್ದಿದ್ದರು. ಹೋದಲ್ಲಿ ಬಂದಲ್ಲಿ ಇದೊಂದೆ ಪ್ರಶ್ನೆ ಎದುರಾಗುತ್ತೆ ಎಂದು ವಿಜಯ್ ದೇವರಕೊಂಡ ಅಸಮಾಧಾನ ಹೊರಹಾಕಿದ್ರು.

ಜುಲೈ 26ಕ್ಕೆ ಚಿತ್ರ ರಿಲೀಸ್

ಜುಲೈ 26ಕ್ಕೆ ಚಿತ್ರ ರಿಲೀಸ್

ಭಾರಿ ಸದ್ದು ಮಾಡುತ್ತಿರುವ ಡಿಯರ್ ಕಾಮ್ರೇಡ್ ಸಿನಿಮಾ ಇದೆ ತಿಂಗಳು 26ಕ್ಕೆ ರಿಲೀಸ್ ಆಗುತ್ತಿದೆ. ಕೇವಲ ತೆಲುಗು ಮಾತ್ರವಲ್ಲದೆ ಐದು ಭಾಷೆಯಲ್ಲಿ ಡಿಯರ್ ಕಾಮ್ರೇಡ್ ಮೋಡಿ ಮಾಡಲಿದೆ. ಈಗಾಗಲೆ ಐದು ಭಾಷೆಯ ಟ್ರೈಲರ್ ಸಖತ್ ಸದ್ದು ಮಾಡುತ್ತಿದ್ದು ವಿಜಯ್ ಮತ್ತು ರಶ್ಮಿಕಾ ಅವರನ್ನು ಮತ್ತೊಮ್ಮೆ ತೆರೆಮೇಲೆ ನೋಡಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

More from Filmibeat

English summary
Most Expected Dear Comrade film was reportedly offered Sai Pallavi. She refused it over the liplock scene in the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X