ಎರಡು ಜಡೆ ಸುಂದರಿಯಾದ ನಟಿ ಸಮಂತಾ
ಹುಡುಗಿಯರು ಎರಡು ಜಡೆಯಲ್ಲಿ ಮತ್ತಷ್ಟು ಸುಂದರವಾಗಿ ಕಾಣುತ್ತಾರೆ. ಈಗ ಟಾಲಿವುಡ್ ನಟಿ ಸಮಂತಾ ಕೂಡ ಎರಡು ಜಡೆ ಹಾಕಿ ತಮ್ಮ ಅಂದವನ್ನು ಹೆಚ್ಚು ಮಾಡಿಕೊಂಡಿದ್ದಾರೆ.
ಆಗಾಗ ತಮ್ಮ ಕೇಶರಾಶಿಯ ಮೇಲೆ ಸಮಂತಾ ಪ್ರಯೋಗ ಮಾಡುತ್ತಾ ಇರುತ್ತಾರೆ. ಇತ್ತೀಚಿಗೆ 'ಯೂ ಟರ್ನ್' ಸಿನಿಮಾಗಾಗಿ ಶಾರ್ಟ್ ಹೇರ್ ಸ್ಟೈಲ್ ಮಾಡಿದ್ದ ಸಮಂತಾ ಈಗ ಎರಡು ಜಡೆ ಹಾಕಿ ಮಿಂಚಿದ್ದಾರೆ.
ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದಕ್ಕೆ ಸಮಂತಾ ಈ ಹೊಸ ಹೇರ್ ಸ್ಟೈಲ್ ನಲ್ಲಿ ಬಂದಿದ್ದರು. ಎಲ್ಲರೂ ಸಮಂತಾ ಕೇಶ ವಿನ್ಯಾಸ ನೋಡಿ ಇಷ್ಟ ಪಟ್ಟರು. ಸ್ಕೂಲ್ ಹುಡುಗಿಯರ ರೀತಿ ಸಮಂತಾ ಎರಡು ಜಡೆ ಹಾಕಿದ್ದು, ತುಂಬಾನೇ ಕ್ಯೂಟ್ ಆಗಿ ಕಾಣುತ್ತಿದ್ದರು.

ಅಂದಹಾಗೆ, ಸಮಂತಾ ಸದ್ಯ 'ಮಜಲಿ' ಸಿನಿಮಾದ ಯಶಸ್ಸಿನ ಬಳಿಕ 'ಓ ಬೇಬಿ', 'ಮನ್ಮತುಡು 2' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಸೂಪರ್ ಹಿಟ್ ಸಿನಿಮಾ '96' ತೆಲುಗು ರಿಮೇಕ್ ಸಿನಿಮಾಗೆ ಸಹ ಸಮಂತಾ ನಾಯಕಿಯಾಗಿದ್ದಾರೆ.
More from Filmibeat
English summary
Checkout pictures : Tollywood actress Samantha Akkineni new hairstyle.


Click it and Unblock the Notifications











