ಸುದೀಪ್-ಸಮಂತಾ ಕುರಿತು ಅಚ್ಚರಿ ಸುದ್ದಿ: ನಿಜ ಆದ್ರೆ ಫ್ಯಾನ್ಸ್ ಫುಲ್ ಖುಷ್
ಸ್ಟಾರ್ ನಟರ ಸಿನಿಮಾ ಸೆಟ್ಟೇರುತ್ತಿದೆ ಎಂದರೆ ಸಾಕು ನಾಯಕಿಯಾರಾಗ್ತಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿರುತ್ತೆ. ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿಮಣಿಯರ ಹೆಸರೆಲ್ಲ ಕೇಳಿ ಬರುತ್ತಿರುತ್ತೆ. ಸದ್ಯ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ 'ಫ್ಯಾಂಟಮ್' ಸಿನಿಮಾ ಮುಂದಿನ ವರ್ಷ ಆರಂಭದಲ್ಲಿ ಸೆಟ್ಟೇರಲಿದೆ.
ಕಿಚ್ಚನಿಗೆ ನಾಯಕಿ ಯಾರಾಗ್ತಾರೆ ಎನ್ನುವ ಚರ್ಚೆ ಈಗಲೆ ಪ್ರಾರಂಭವಾಗಿದೆ. ಮೂಲಗಳ ಪ್ರಕಾರ ಸುದೀಪ್ ಗೆ ನಾಯಕಿಯಾಗಿ ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಮಂತಾ ಅವರನ್ನು ಫ್ಯಾಂಟಮ್ ಸಿನಿಮಾಗೆ ಕರೆತರಬೇಕೆನ್ನುವುದು ಚಿತ್ರತಂಡದ ಪ್ಲಾನ್.

ಎರಡನೇ ಬಾರಿಗೆ ಒಂದಾಗುತ್ತಾರಾ ಸುದೀಪ್-ಸಮಂತಾ
ಸಮಂತಾ ಮತ್ತು ಸುದೀಪ್ ಇಬ್ಬರು ಈಗಾಗಲೆ ಒಟ್ಟಿಗೆ ಅಭಿನಯಿಸಿದ್ದಾರೆ. 2012ರಲ್ಲಿ ರಿಲೀಸ್ ಆದ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಸುದೀಪ್ ವಿಲನ್ ಆಗಿ ಅಬ್ಬರಿಸಿದ್ದರು. ಸಮಂತಾ ನಾಯಕಿಯಾಗಿ ಮಿಂಚಿದ್ದರು. ಇಬ್ಬರು ಒಂದೆ ಸಿನಿಮಾ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು. ಈಗ ಮತ್ತೆ ಫ್ಯಾಂಟಮ್ ಸಿನಿಮಾ ಮೂಲಕ ಸುದೀಪ್ ಜೊತೆ ಅಭಿನಯಿಸುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

ಕನ್ನಡಕ್ಕೆ ಬಂದರೆ ಅಚ್ಚರಿ ಇಲ್ಲ
ಸಮಂತಾ ಬಳಿ ಸದ್ಯ ಯಾವುದು ಸಿನಿಮಾಗಳಿಲ್ಲ. '96' ಸಿನಿಮಾದ ರಿಮೇಕ್ ನಲ್ಲಿ ಬ್ಯುಸಿಯಿದ್ದ ಸಮಂತಾ ಚಿತ್ರೀಕರಣ ಈಗಾಗಲೆ ಮುಗಿಸಿದ್ದಾರೆ. ಮದುವೆ ನಂತರ ಅಷ್ಟು ಬೇಡಿಕೆ ಕಳೆದುಕೊಂಡಿರುವ ಸಮಂತಾ ಸೆಲೆಕ್ಟೀವ್ ಸಿನಿಮಾಗಳಲ್ಲಿ ಮಾತ್ರ ಅಭಿನಯಿಸುತ್ತಿದ್ದಾರೆ. ಹಾಗಾಗಿ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿದ್ರು ಅಚ್ಚರಿ ಇಲ್ಲ. ಸಮಂತಾ ಕನ್ನಡದಲ್ಲಿ ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ಅನೇಕ ವರ್ಷಗಳಿಂದ ಕೇಳಿಬರುತ್ತಿತ್ತು, ಆದರೀಗ ಆ ಸಮಯ ಬಂದರು ಬರಬಹುದು.
ಬಾಲಿವುಡ್ ನಲ್ಲಿ ಬರ್ತಿದೆ ಕನ್ನಡದ 'ಯು ಟರ್ನ್': ನಾಯಕಿ ಇವರೇ

ವೆಬ್ ಸೀರಿಸ್ ನಲ್ಲಿ ಸಮಂತಾ
ಸಿನಿಮಾಗಳ ಜೊತೆಗೆ ವೆಬ್ ಸೀರಿಸ್ ಲೋಕಕ್ಕೂ ಎಂಟ್ರಿ ಕೊಟ್ಟಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ನಲ್ಲಿ ಸಮಂತಾ ಅಭಿನಯಿಸುತ್ತಿದ್ದಾರೆ. ವೆಬ್ ಸೀರಿಸ್ ನಂತರ ಫ್ಯಾಂಟಮ್ ಸಿನಿಮಾ ತಂಡ ಸೇರಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕು.

ಅನೂಪ್ ನಿರ್ದೇಶನದ ಸಿನಿಮಾ
ಫ್ಯಾಂಟಮ್ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಮೊದಲ ಬಾರಿಗೆ ಅನೂಪ್ ಮತ್ತು ಸುದೀಪ್ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಅನೂಪ್ ಸಹೋದರ ನಿರೂಪ್ ಭಂಡಾರಿ ಕೂಡ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಮಂಜುನಾಥ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











