For Quick Alerts
  ALLOW NOTIFICATIONS  
  For Daily Alerts

  ನಟಿ ಸಮಂತಾ ಜಿಮ್ ನಲ್ಲಿ ರಿಮ್ ಜಿಮ್ ಫೋಟೋ

  By ಅನಂತರಾಮು, ಹೈದರಾಬಾದ್
  |

  ಸದ್ಯಕ್ಕೆ ಟಾಲಿವುಡ್ ಚಿತ್ರರಂಗದಲ್ಲಿ ನಂಬರ್ ಒನ್ ಹೀರೋಯಿನ್ ಎಂದರೆ ಮೊದಲು ಕೇಳಿಬರುತ್ತಿರುವ ಹೆಸರು ಸಮಂತಾ. ತನ್ನ ಅಂದಚೆಂದ, ಅಭಿನಯ, ಸೆಕ್ಸಿ ಲುಕ್ ನಿಂದ ಪ್ರೇಕ್ಷಕರನ್ನು ಖೆಡ್ಡಾಗೆ ಬೀಳಿಸಿ ಅಡ್ಡಡ್ಡ ಮಲಗಿಸುತ್ತಿರುವ ತಾರೆ. ಈಕೆ ಅಭಿನಯದ ಚಿತ್ರಗಳು ಹಿಟ್ ಆಗುತ್ತಿದ್ದು ಲಕ್ಕಿ ಸ್ಟಾರ್ ಎಂಬ ಹಣೆಪಟ್ಟಿಯೂ ಅಂಟಿಕೊಂಡಿದೆ.

  ಆರಂಭದಲ್ಲಿ ಈಕೆ ಟಾಲಿವುಡ್ ಚಿತ್ರರಂಗಕ್ಕೆ ಅಡಿಯಿಟ್ಟಾಗ ಇಷ್ಟೆಲ್ಲಾ ಸೆಕ್ಸಿಯಾಗಿರಲಿಲ್ಲ. ಆದರೆ ಬರುಬರುತ್ತಾ ತನ್ನ ಅಂಗಸೌಷ್ಟವಕ್ಕೆ ಹೊಸ ಮೆರುಗು ನೀಡಿದರು. ತನ್ನ ಮೈಮಾಟವನ್ನು ಸೆಕ್ಸಿಯಾಗಿ ಬದಲಾಯಿಸಿಕೊಂಡು ಎಲ್ಲರ ಚಿತ್ತ ತನ್ನತ್ತ ಸೆಳೆಯುತ್ತಿದ್ದಾರೆ ಈ ಚೆನ್ನೈ ಸುಂದರಿ.

  ಇತ್ತೀಚೆಗೆ ಈಕೆಯ ದೇಹಸಿರಿಯ ರಹಸ್ಯ ಬಯಲಾಗಿದೆ. ಅದೇನೆಂದರೆ ನಿಯಮಿತವಾಗಿ ವ್ಯಾಯಾಮ ಮಾಡುತ್ತಿರುವುದು. ಜಿಮ್ ನಲ್ಲಿ ಬೆವರರಿಸುತ್ತಿರುವ ರಿಮ್ ಜಿಮ್ ಚಿತ್ರವೊಂದು ಈಗ ಲೀಕ್ ಆಗಿದೆ. ಸಮಂತಾ ಸೌಂದರ್ಯ ರಹಸ್ಯ ಜಿಮ್ ಜಿಮ್ ಮಾಯ ಎಂಬುದು ಎಲ್ಲರಿಗೂ ಗೊತ್ತಾಗಿದೆ.

  ಸದ್ಯಕ್ಕೆ ಸಮಂತಾ ಅಭಿನಯದ 'ಅತ್ತಾರಿಂಟಿಕಿ ದಾರೇದಿ' ಚಿತ್ರ ತೆಲುಗಿನಲ್ಲಿ ಸೂಪರ್ ಹಿಟ್ ದಾಖಲಿಸಿದೆ. ಜೂ.ಎನ್ಟಿಆರ್ ಜೊತೆಗಿನ 'ರಾಮಯ್ಯ ವಸ್ತಾವಯ್ಯಾ' ಚಿತ್ರ ಆವರೇಜ್ ಹಿಟ್ ಆಗಿದೆ. ಇದು ಹೊರತುಪಡಿಸಿದರೆ ಅರ್ಧ ಡಜನ್ ತೆಲುಗು ಚಿತ್ರಗಳು ಸಮಂತಾ ಕೈಯಲ್ಲಿವೆ. ಇದಿಷ್ಟೇ ಅಲ್ಲದೆ ತಲಾ ಒಂದೊಂದು ಹಿಂದಿ ಹಾಗೂ ತೆಲುಗು ಚಿತ್ರಕ್ಕೂ ಸಹಿ ಹಾಕಿದ್ದಾರೆ.

  English summary
  Actress Samantha was caught sweating out in a gym in Hyderabad to stay fit. Samantha is an Indian film actress and model, who mainly works in the Tamil and Telugu film industries.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X