ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸಮೀರಾ ರೆಡ್ಡಿ
ಇತ್ತೀಚಿಗಷ್ಟೆ ತಮ್ಮ ಅಂಡರ್ ವಾಟರ್ ಪ್ರೆಗ್ನೆಸ್ಸಿ ಫೋಟೋಶೂಟ್ ಮೂಲಕ ಗಮನ ಸೆಳೆದಿದ್ದ ನಟಿ ಸಮೀರಾ ರೆಡ್ಡಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ ಶುಕ್ರವಾರ ಸಮೀರಾ ರೆಡ್ಡಿ ಮಗಳು ಹುಟ್ಟಿದ್ದು, ನಿನ್ನೆ (ಜುಲೈ 15) ರಂದು ಆಕೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.
ಪ್ರೀತಿಯ ಕಂದನ ಜೊತೆಗಿನ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಮೀರಾ ರೆಡ್ಡಿ ಶೇರ್ ಮಾಡಿದ್ದಾರೆ. ತಾಯಿಯಾದ ಅವರಿಗೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಅವರ ಪೋಸ್ಟ್ ಗೆ ಮನಸಾರೆ ಲೈಕ್ ನೀಡಿದ್ದಾರೆ.
ಮುದ್ದು ಮಗಳ ಬಗ್ಗೆ ಬರೆದುಕೊಂಡಿರುವ ಸಮೀರಾ ರೆಡ್ಡಿ ''ನಮ್ಮ ಮನೆಗೆ ಏಂಜೆಲ್ ಬಂದಿದ್ದಾಳೆ'' ಎಂದು ಸಂತಸ ಹಂಚಿಕೊಂಡಿದ್ದಾರೆ. ಈಗಾಗಲೇ ಒಂದು ಗಂಡು ಮಗುವಿಗೆ ಜನ್ಮ ನೀಡಿರುವ ಸಮೀರಾ ಈಗ ಎರಡನೇ ಸಲ ತಾಯಿ ಆಗಿದ್ದಾರೆ.

ಅಂದ್ಹಾಗೆ, ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿರುವ ಸಮೀರಾ ರೆಡ್ಡಿ 2014ರಲ್ಲಿ ಅಕ್ಷಯ್ ಎಂಬುವರ ಜೊತೆ ವಿವಾಹವಾಗಿದ್ದರು. ಮದುವೆ ಆದ ಬಳಿಕ ಸಿನಿಮಾರಂಗದಿಂದ ದೂರ ಉಳಿದವರು.

ಇನ್ನುಳಿದಂತೆ, ಸಮೀರಾ ರೆಡ್ಡಿ ಕನ್ನಡದಲ್ಲಿ ಮಾಡಿದ್ದು ಒಂದೇ ಸಿನಿಮಾ. 2013ರಲ್ಲಿ ಬಿಡುಗಡೆಯಾದ 'ವರದನಾಯಕ' ಚಿತ್ರದಲ್ಲಿ ಸುದೀಪ್ ಪತ್ನಿಯಾಗಿ ನಟಿಸಿದ್ದರು. ಇದೇ ಅವರ ಕೊನೆಯ ಚಿತ್ರವಾಗಿದೆ.


Click it and Unblock the Notifications











