2 ತಿಂಗಳ ಮಗುವಿನೊಂದಿಗೆ ಕರ್ನಾಟಕದ ಅತಿ ಎತ್ತರದ ಬೆಟ್ಟ ಏರಿದ ನಟಿ ಸಮೀರಾ ರೆಡ್ಡಿ.!

Recommended Video

ಚಿಕ್ಕಮಗಳೂರಿನಲ್ಲಿ ತನ್ನ ಮಗುವಿನ ಜೊತೆ ಸಮೀರಾ ರೆಡ್ಡಿ ಟೈಮ್ ಪಾಸ್ | FILMIBEAT KANNADA

ಅಂಡರ್ ವಾಟರ್ ಪ್ರೆಗ್ನೆನ್ಸಿ ಫೋಟೋಶೂಟ್, ಬಿಕಿನಿ ಫೋಟೋ ಶೂಟ್ ಹೀಗೆ ತರಹೇವಾರಿ ರೀತಿಯ ಫೋಟೋಶೂಟ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದ ನಟಿ ಸಮೀರಾ ರೆಡ್ಡಿ ಈಗ ಮತ್ತೊಂದು ಅಚ್ಚರಿಗೆ ಕಾರಣರಾಗಿದ್ದಾರೆ. ಇತ್ತೀಚಿಗಷ್ಟೆ ಅಂದ್ರೆ ಎರಡು ತಿಂಗಳ ಹಿಂದೆಯಷ್ಟೆ ಮಗುವಿಗೆ ಜನ್ಮ ನೀಡಿರುವ ಸಮೀರಾ ರೆಡ್ಡಿ ಮೊನ್ನೆ ಮೊನ್ನೆಯಷ್ಟೆ ಕರ್ನಾಟಕದ ಅತೀ ಎತ್ತರದ ಬೆಟ್ಟ ಏರಿ ಅಚ್ಚರಿ ಮೂಡಿಸಿದ್ದಾರೆ.

ಇತ್ತೀಚಿಗೆ ಕರ್ನಾಟಕ ಪ್ರವಾಸ ಕೈಗೊಂಡಿರುವ ಸಮೀರಾ ರೆಡ್ಡಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಪುಟ್ಟ ಕಂದಮ್ಮನ ಜೊತೆ ಜಾಲಿ ಟ್ರಿಪ್ ಮಾಡುತ್ತಿರುವ ಸಮೀರಾ ಮುಳ್ಳಯ್ಯನಗಿರಿ ಬೆಟ್ಟ ಏರಿದ್ದಾರೆ. ಬೆಟ್ಟ ಏರಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

"6,300 ಅಡಿ ಎತ್ತರದ ಮುಳ್ಳಯ್ಯನಗಿರಿ ಕರ್ನಾಟಕದ ಅತೀ ಎತ್ತರದ ಬೆಟ್ಟ. ನನ್ನ ಪ್ರಯಾಣದಿಂದ ಅನೇಕ ತಾಯಂದಿರಿಗೆ ಪ್ರೇರಣೆಯಾಗಿದೆ. ನನಗೆ ಸಾಕಷ್ಟು ಪಾಸಿಟೀವ್ ಪ್ರತಿಕ್ರಿಯೆ ಸಿಗುತ್ತಿದೆ. ಹಾಗಾಗಿ ಸಖತ್ ಥ್ರಿಲ್ ಆಗಿದ್ದೇನೆ. ಮಗುವಿಗೆ ಸರಿಯಾದ ಸಮಯದಲ್ಲಿ ಹಾಲು ನೀಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

Actress Sameera Reddy Climbed Mullayanagiri Hill With Her 2 Months Baby

ಸಾಮಾನ್ಯವಾಗಿ ಮಗುವಿಗೆ ಜನ್ಮ ನೀಡಿದ ನಂತರ ಮೂರು ತಿಂಗಳವರೆಗೂ ದೂರ ಪ್ರಯಾಣ, ಪ್ರವಾಸ ಮಾಡುವುದು, ಗಾಳಿಯಲ್ಲಿ ಓಡಾಡುವುದಿಲ್ಲ. ಆದ್ರೆ ಸಮೀರಾ ಎತ್ತರದ ಬೆಟ್ಟ ಹತ್ತಿ ಎಲ್ಲಾ ತಾಯಂದಿರಿಗೂ ಸ್ಪೂರ್ತಿಯಾಗಿದ್ದಾರೆ. ಇನ್ನು 500 ಮೆಟ್ಟಿಗಳು ಇವೆ. ಆದ್ರೆ ಮಗುವಿನೊಂದಿಗೆ ಬೆಟ್ಟ ಏರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಲ್ಲಿಗೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿರುವ ಸಮೀರಾ ರೆಡ್ಡಿ 2014ರಲ್ಲಿ ಅಕ್ಷಯ್ ಎಂಬುವರ ಜೊತೆ ವಿವಾಹವಾಗಿದ್ದರು. ಮದುವೆ ಆದ ಬಳಿಕ ಸಿನಿಮಾರಂಗದಿಂದ ದೂರ ಉಳಿದ್ದಾರೆ. ಸಮೀರಾ ರೆಡ್ಡಿಗೆ ಒಬ್ಬ ಮಗನಿದ್ದಾರೆ. ಈಗ ಎರಡನೆ ಮಗುವಿಗೆ ಜನ್ಮ ನೀಡಿದ್ದಾರೆ.

More from Filmibeat

English summary
Actress Sameera Reddy climbed Mullayanagiri hill with her 2 months baby.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X