»   » ತಾರೆ ಸಮೀರಾ ರೆಡ್ಡಿ ಅರೆನಗ್ನ ಫ್ಯಾಷನ್ ಶೋ

ತಾರೆ ಸಮೀರಾ ರೆಡ್ಡಿ ಅರೆನಗ್ನ ಫ್ಯಾಷನ್ ಶೋ

By: ರವಿಕಿಶೋರ್
Subscribe to Filmibeat Kannada

ಕನ್ನಡದ ವರದನಾಯಕ ಚಿತ್ರದಲ್ಲಿ ಸುದೀಪ್ ಜೊತೆ ಅಭಿನಯಿಸಿದ್ದ ದಕ್ಷಿಣದ ಬೆಡಗಿ ಸಮೀರಾ ರೆಡ್ಡಿ ಮತ್ತೆ ಸುದ್ದಿ ಮಾಡಿದ್ದಾರೆ. ಈ ಬಾರಿ ತಮ್ಮ ಮೈಮಾಟವನ್ನು ತೋರಿಸುವ ಮೂಲಕ ಎಲ್ಲರ ಕಣ್ಣು ಅರಳಿಸಿದ್ದಾರೆ. ಸಮೀರಾ ರೆಡ್ಡಿ ಅವರ ಎದೆಗಾರಿಕೆಗೆ ಚಿತ್ರರಂಗ ಬೆರಗಾಗಿದೆ.

ಇತ್ತೀಚೆಗೆ ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಟೂರ್ ನಲ್ಲಿ ಸಮೀರಾ ವಿಚಿತ್ರ ಡ್ರೆಸ್ ಮೂಲಕ ಎಲ್ಲರ ಗಮನಸೆಳೆದರು. ಅದಕ್ಕೆ ಸಂಬಂಧಿಸಿದ ಫೋಟೋಗಳು ಬಿಡುಗಡೆಯಾಗಿವೆ. ಪ್ರಮುಖ ಡಿಸೈನರ್ಸ್ ಆದ ಫಾಲ್ಗುನಿ, ಷಾನ್ ಪಿಕಾಕ್ ಡಿಸೈನ್ ಮಾಡಿದ ವಸ್ತ್ರಗಳನ್ನು ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಟೂರ್ ಗಾಗಿ ಸಮೀರಾ ಧರಿಸಿದರು.

ಇಷ್ಟಕ್ಕೂ ಸಮೀರಾ ರೆಡ್ಡಿ ಧರಿಸಿರುವ ಡ್ರೆಸ್ ಅವರ ದೇಹದ ಸೌಂದರ್ಯವನ್ನು ಅನಾವರಣಗೊಳಿಸಿದೆ. ಈ ಡ್ರೆಸ್ ನಲ್ಲಿ ಅವರ ಎಕ್ಸ್ ಫೋಸಿಂಗ್ ಬಿಟ್ಟು ಆಕರ್ಷಿಸುವಂತಹದ್ದೇನು ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಚಿತ್ರವೊಂದಕ್ಕೆ ಬರೋಬ್ಬರಿ ರು.50 ಲಕ್ಷ ಎಣಿಸುವ ಸಮೀರಾ ಇದ್ದಕ್ಕಿದ್ದಂತೆ ಈ ರೀತಿ ಬಿಚ್ಚಮ್ಮನಾಗಲು ಕಾರಣ ಏನು ಎಂಬುದು ಗೊತ್ತಾಗಿಲ್ಲ. ಸ್ಲೈಡ್ ಗಳಲ್ಲಿ ನೋಡಿ ಸಮೀರಾ ಹೊಸ ಲುಕ್.

ಇದು ಬ್ಯಾಡ್ ಟೇಸ್ಟ್ ಎಂದ ಅಭಿಮಾನಿಗಳು

ಸಮೀರಾ ರೆಡ್ಡಿ ಅವರನ್ನು ಈ ಡ್ರೆಸ್ ನಲ್ಲಿ ನೋಡಿದರು ಇದು ಬ್ಯಾಡ್ ಟೇಸ್ಟ್ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಒಳಗೊಳಗೇ ಮೆಚ್ಚಿಕೊಳ್ಳುತ್ತಿದ್ದಾರೆ.

ಎಕ್ಸ್ ಪೋಸಿಂಗ್ ಬಿಟ್ಟರೆ ಬೇರೇನು ಇಲ್ಲ

ಈ ವಿನ್ಯಾಸದ ಡ್ರೆಸ್ ನಲ್ಲಿ ಎಕ್ಸ್ ಪೋಸಿಂಗ್ ಬಿಟ್ಟು ಬೇರೇನು ಇಲ್ಲ. ಆಕರ್ಷಿಸುವ ಅಂದಚೆಂದ ಕಾಣಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ರೀತಿಯ ಫ್ಯಾಷನ್ ಬೇಕಾಗಿತ್ತಾ?

ಸಮೀರಾ ರೆಡ್ಡಿ ದಕ್ಷಿಣದ ಎಲ್ಲ ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್ ಚಿತ್ರರಂಗಕ್ಕೂ ಚಿರಪರಿಚಿತ. ಇಷ್ಟೆಲ್ಲಾ ಇದ್ದರೂ ಈ ರೀತಿಯ ಫ್ಯಾಷನ್ ಬೇಕಾಗಿತ್ತಾ.

ಹಿಂದಿಯಲ್ಲೂ ಪಾದ ಊರಿದ ಬೆಡಗಿ

ಸಮೀರಾ ರೆಡ್ಡಿ ಮುಂದಿನ ಹಿಂದಿ ಚಿತ್ರ 'ನಾಮ್'. ಅನೀಷ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ದೇವಗನ್, ಭೂಮಿಕಾ ಚಾವ್ಲಾ ಸಹ ಅಭಿನಯಿಸುತ್ತಿದ್ದಾರೆ.

ಸದ್ಯಕ್ಕೆ ತಮಿಳುನಲ್ಲೂ ಬಿಜಿ ತಾರೆ

ತಮಿಳಿನಲ್ಲಿ ಸಮೀರಾ ರೆಡ್ಡಿ ಒಪ್ಪಿಕೊಂಡಿರುವ ಚಿತ್ರ 'ಧೃವ ನಚ್ಚತಿರಮ್'. ಈ ಚಿತ್ರದ ಹೀರೋ ಸೂರ್ಯ ಹೀರೋ. ಗೌತಮ್ ಮಿನನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ.

ಆಸಲ್ ಬೆಡಗಿ ಯಾಕಿಂಗ್ ಮಾಡಿದ್ರು?

ಈ ಹಿಂದೆ ಸಮೀರಾ ರೆಡ್ಡಿ ಆಸಲ್, ವೆಟ್ಟೈನಂತಹ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವರುಣಂ ಆಯಿರಂ ಚಿತ್ರದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ನಟಿ ಈಗ ಈ ರೀತಿ ಕಾಣಿಸಿಕೊಂಡಿರುವುದು ವಿಶೇಷ.

English summary
Actress Sameera Reddy (Kannada Varadanayaka fame), who had earned a good name for herself in the minds of Tamil audience with Vaaranam Aayiram, has appeared in a colourful dress in a fashion event. The actress tried to make a style statement with her costumes but it has gone wrong, as it has failed to impress her fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada