For Quick Alerts
  ALLOW NOTIFICATIONS  
  For Daily Alerts

  ಜೀವ ಕಳೆದುಕೊಳ್ಳುತ್ತಿದ್ದೇವೆ, ದಯವಿಟ್ಟು ಸಹಾಯ ಮಾಡಿ: ನಟಿ ಸಂಯುಕ್ತಾ

  |

  ಬೆಂಗಳೂರಿನಲ್ಲಿ ಆಸ್ಪತ್ರೆ ಬೆಡ್‌ಗಳು, ಆಮ್ಲಜನಕ, ರೆಮ್‌ಡಿಸಿವರ್ ಇಂಜೆಕ್ಷನ್‌ಗಳಿಗೆ ಆಹಾಕಾರವೆದ್ದಿದೆ. ಆಸ್ಪತ್ರೆಗಳ ಮುಂದೆ ರೋಗಿಗಳು ಸಾಲುಗಟ್ಟಿ ನಿಂತಿದ್ದಾರೆ. ಆಮ್ಲಜನಕ ಸಿಗದೆ ರಸ್ತೆಯಲ್ಲಿ ರೋಗಿಗಳು ನರಳಾಡುತ್ತಿದ್ದಾರೆ. ಈ ವಿಷಮ ಪರಿಸ್ಥಿತಿ ಕೇವಲ ಸಾಮಾನ್ಯರಿಗಲ್ಲ ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ.

  ಕನ್ನಡದ ಯುವ ನಟಿ ಸಂಯುಕ್ತಾ ಹೊರನಾಡು ಇಂದು ಸಂಜೆ 4 ಗಂಟೆ ವೇಳೆಗೆ ಟ್ವೀಟ್‌ ಮಾಡಿದ್ದು, ಕೋವಿಡ್ ವಾರ್ ರೂಂಗಳ ಕರೆಗಳು ಬ್ಯುಸಿ ಬರುತ್ತಲೇ ಇವೆ. ಎಷ್ಟು ಹೊತ್ತು ಕಾದರು ಕರೆಗಳು ಕನೆಕ್ಟ್ ಆಗುತ್ತಿಲ್ಲ. ಬೆಂಗಳೂರು ಪೂರ್ವ, ಪಶ್ಚಿಮ ಜೋನ್‌ಗಳ ವಾರ್‌ ರೂಮ್‌ಗಳಿಂದ ಉತ್ತರವೇ ಬರುತ್ತಿಲ್ಲ' ಎಂದಿದ್ದಾರೆ.

  ಆರು ಗಂಟೆಗಳಿಂದಲೂ ನಾವು ಐಸಿಯುಗಾಗಿ ಕಾಯುತ್ತಿದ್ದೇವೆ. ಆಮ್ಲಜನಕ ಕೊರತೆ, ಬೆಡ್‌ಗಳ ಕೊರತೆಯಿಂದ ರೋಗಿಗಳು ಆತಂಕದಲ್ಲಿ ಆಸ್ಪತ್ರೆಗಳಿಗೆ ದಾಂಗುಡಿ ಇಡುತ್ತಿದ್ದಾರೆ. ನಾವು ಜೀವನಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಮೊದಲು ಭ್ರಷ್ಟಾಚಾರವನ್ನು ಹೋಗಲಾಡಿಸಿ. ಯಾರು ಮಾಡಿದ್ದು? ಏಕೆ ಮಾಡಿದ್ದು ಎಲ್ಲಾ ಆಮೇಲೆ. ನಮಗೆ ಸಹಾಯ ಬೇಕಿದೆ ಈಗಲೇ'' ಎಂದು ಮನವಿ ಮಾಡಿದ್ದಾರೆ ನಟಿ ಸಂಯುಕ್ತಾ ಹೊರನಾಡು.

  ಬೆಂಗಳೂರಿನಲ್ಲಿ ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್‌ ಖಾಲಿಯಿಲ್ಲ. ಆಮ್ಲಜನಕ ಕೊರತೆ, ಐಸಿಯು ಬೆಡ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಆಮ್ಲಜನಕ ಸೂಕ್ತ ಸಮಯಕ್ಕೆ ದೊರೆಯದೆ ಹಲವರು ಅಸುನೀಗಿದ್ದಾರೆ. ಪರಿಸ್ಥಿತಿ ದಿನೇ-ದಿನೇ ಹದಗೆಡುತ್ತಿದೆ.

  ಮುಖ್ಯಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ 25 ಲಕ್ಷ ರೂ.ಗಳ ದೇಣಿಗೆ ಕೊಟ್ಟ ನಟಿ ತಾರಾ | Filmibeat Kannada

  ನಗರದಲ್ಲಿ ಬೆಡ್‌ ಬ್ಲಾಕಿಂಗ್‌ಗಾಗಿ ನಡೆಯುತ್ತಿದೆ ಎನ್ನಲಾಗುತ್ತಿದೆ. ಅವಶ್ಯಕತೆ ಇರುವ ಸಾವಿರಾರು ಜನರಿಗೆ ಬೆಡ್‌ಗಳು ಸಿಗುತ್ತಿಲ್ಲ. ಏಜೆಂಟ್‌ಗಳ ಮೂಲಕ ಬೆಡ್‌ಗಳು ಬುಕ್‌ ಆಗುತ್ತಿವೆ ಎಂದು ಆರೋಪಿಸಲಾಗಿದೆ.

  English summary
  Actress Samyukta Hornad asking for help on twitter she trying to get a ICU bed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X