For Quick Alerts
  ALLOW NOTIFICATIONS  
  For Daily Alerts

  Exclusive: ದರ್ಶನ್ 'ಕ್ರಾಂತಿ' ಅಖಾಡಕ್ಕೆ ಮತ್ತೊಬ್ಬ ನಾಯಕಿ ಎಂಟ್ರಿ: ವೈರಲ್ ಆಯ್ತು ಫೋಟೊ!

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಒಂದೊಳ್ಳೆ ಮೆಸೇಜ್ ಜೊತೆಗೆ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಬೆರಸಿ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಣ ನಡೀತಿತ್ತು. ಇನ್ನು ಚಿತ್ರಕ್ಕೆ ಮತ್ತೊಬ್ಬ ನಾಯಕಿಯ ಆಗಮನವಾಗಿದೆ.

  ಅಕ್ಷರಕ್ರಾಂತಿಯ ಕಥೆಯನ್ನು 'ಕ್ರಾಂತಿ' ಸಿನಿಮಾದಲ್ಲಿ ಹೇಳಲಾಗ್ತಿದೆ. ಅಂದರೆ ಕನ್ನಡ ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಚಿತ್ರದಲ್ಲಿ ಚರ್ಚೆ ನಡೆಸಲಾಗಿದೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ ಚಿತ್ರವನ್ನು ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು, ಟೀಸರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಅಭಿಮಾನಿಗಳು ಸ್ವಯಂಪ್ರೇರಿತರಾಗಿ 'ಕ್ರಾಂತಿ' ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯೋತ್ಸವದ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಕೊಂಚ ತಡವಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

  'ಕ್ರಾಂತಿ' ಸಿನಿಮಾದ ಪೋಲೆಂಡ್ ಮೇಕಿಂಗ್ ವಿಡಿಯೋ ಲೀಕ್: ದರ್ಶನ್ ಸ್ಟೈಲ್‌ಗೆ ಫ್ಯಾನ್ಸ್ ಫಿದಾ!'ಕ್ರಾಂತಿ' ಸಿನಿಮಾದ ಪೋಲೆಂಡ್ ಮೇಕಿಂಗ್ ವಿಡಿಯೋ ಲೀಕ್: ದರ್ಶನ್ ಸ್ಟೈಲ್‌ಗೆ ಫ್ಯಾನ್ಸ್ ಫಿದಾ!

  'ಕ್ರಾಂತಿ' ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ನಟಿಸ್ತಿರೋದು ಗೊತ್ತೇಯಿದೆ. ಇದೀಗ ಚಿತ್ರಕ್ಕೆ ಮತ್ತೊಬ್ಬ ನಾಯಕಿಯ ಎಂಟ್ರಿ ಆಗಿದೆ. ದರ್ಶನ್, ರಚಿತಾ ರಾಮ್ ಹಾಗೂ ನಟಿ ಸಂಯುಕ್ತಾ ಹೊರನಾಡು ಒಟ್ಟಿಗೆ ಇರುವ ಫೋಟೊವೊಂದು ವೈರಲ್ ಆಗಿದ್ದು, ಇಷ್ಟೆಲ್ಲಾ ಚರ್ಚೆ ಹುಟ್ಟುಹಾಕಿದೆ. ಆದರೆ ಎಲ್ಲಿ ಯಾವಾಗ ಈ ಫೋಟೊ ಕ್ಲಿಕ್ಕಿಸಿದ್ದಾರೆ ಎನ್ನುವುದು ಗೊತ್ತಿಲ್ಲ. ಗಾಂಧಿನಗರದ ಮೂಲಗಳ ಪ್ರಕಾರ 'ಕ್ರಾಂತಿ' ಸಿನಿಮಾದಲ್ಲಿ ಸಂಯುಕ್ತಾ ಚಿತ್ರದಲ್ಲಿ ನಟಿಸುತ್ತಿರುವುದು ನಿಜ.

  'ಲೈಫು ಇಷ್ಟೇನೆ', 'ಜಿಗರ್‌ತಾಂಡ', 'ದಯವಿಟ್ಟು ಗಮನಿಸಿ', 'ನಾನು ಮತ್ತು 'ಗುಂಡ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಂಯುಕ್ತಾ ಹೊರನಾಡು ನಟಿಸಿದ್ದಾರೆ. ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಘಟಾನುಘಟಿ ಕಲಾವಿದರು 'ಕ್ರಾಂತಿ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕಥೆಯ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡದೇ ಚಿತ್ರೀಕರಣ ನಡೆಸಲಾಗ್ತಿದೆ. ಚಿತ್ರದಲ್ಲಿ ದರ್ಶನ್ ಒನ್ಸ್ ಅಗೇನ್ ಮಾಸ್ ಮಹಾರಾಜನಾಗಿ ಅಬ್ಬರಿಸಿದ್ದಾರೆ. ಅಭಿಮಾನಿಗಳು ಕೇಳುವ ಫೈಟ್ಸ್, ಡೈಲಾಗ್ಸ್, ಬಿಂದಾಸ್ ಸಾಂಗ್ಸ್ ಚಿತ್ರದಲ್ಲಿದೆ.

  Actress Samyukta Hornad on-board for Challenging star Darshan Starrer Kranti

  ಸೆಟ್‌ಗಳನ್ನು ನಿರ್ಮಿಸಿ 'ಕ್ರಾಂತಿ' ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಬೆಂಗಳೂರು, ಮೈಸೂರಿನಲ್ಲಿ ಬಹುತೇಕ ಚಿತ್ರೀಕರಣ ನಡೆದಿದ್ದು, ಪೋಲ್ಯಾಂಡ್‌ನಲ್ಲಿ ಎರಡು ಹಾಡುಗಳ ಚಿತ್ರೀಕರಣ ಮಾಡಿ ಬಂದಿತ್ತು ಚಿತ್ರತಂಡ. ಈಗಾಗಲೇ ದರ್ಶನ್, ರಚಿತಾ ರಾಮ್ ತಮ್ಮ ಪಾತ್ರಗಳಿಗೆ ಡಬ್ಬಿಂಗ್ ಕೂಡ ಮಾಡಿದ್ದಾರೆ. 'ಡ್ಯಾನ್ಸ್ ವಿತ್ ಪದ್ಮಾವತಿ' ಎನ್ನುವ ಐಟಂ ಸಾಂಗ್‌ನ ಚಿತ್ರತಂಡ ಇತ್ತೀಚೆಗೆ ಸೆರೆಹಿಡಿದಿತ್ತು ಎನ್ನಲಾಗಿತ್ತು.

  English summary
  Actress Samyukta Hornad on-board for Challenging star Darshan Starrer Kranti. Know More.
  Tuesday, October 4, 2022, 10:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X