ಅವರ ಬಳಿ ಹಣ, ಅಧಿಕಾರವಿದೆ : ಸರ್ಜಾಗೆ ಸೆಡ್ಡು ಹೊಡೆದ ಸಂಯುಕ್ತ ಹೆಗ್ಡೆ!
Recommended Video

ಸ್ಯಾಂಡಲ್ ವುಡ್ ನಲ್ಲಿ ಈಗ ಎರಡು ಗ್ಯಾಂಗ್ ಸೃಷ್ಟಿಯಾಗಿವೆ. ಒಂದು ಗುಂಪು ನಟ ಅರ್ಜುನ್ ಸರ್ಜಾ ಅವರಿಗೆ ಬೆಂಬಲ ಸೂಚಿಸುತ್ತಿದೆ. ಇನ್ನೊಂದು ತಂಡ ನಟಿ ಶ್ರುತಿ ಹರಿಹರನ್ ಅವರಿಗೆ ಸಾಥ್ ನೀಡುತ್ತಿದ್ದಾರೆ.
ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮಾಡಿರುವ ಆರೋಪ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕನ್ನಡದ ನಟಿಯರು ಈ ಬಗ್ಗೆ ಮುಂದೆ ಬಂದು ಮಾತನಾಡುತ್ತಿದ್ದಾರೆ. ಈಗಾಗಲೇ ಸಂಗೀತ ಭಟ್, ನೀತೂ, ಸೋನು ಗೌಡ, ನಿಧಿ ಸುಬ್ಬಯ್ಯ ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಇದೀಗ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಈ ಘಟನೆಯ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಶ್ರುತಿ ಹರಿಹರನ್ ಪರ ನಿಂತ ಅವರು ಅರ್ಜುನ್ ಸರ್ಜಾ ವಿರುದ್ಧ ಮಾತನಾಡಿದ್ದಾರೆ.
ಮುಂದೆ ಓದಿ...

ನಮ್ಮನ್ನು ಟೀಕಿಸುತ್ತಾರೆ, ಟ್ರೋಲ್ ಮಾಡುತ್ತಾರೆ
''ನಮ್ಮ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳು ಹೆದರುವ ಸಂಧರ್ಭದಲ್ಲಿ ಶ್ರುತಿ ಹರಿಹರನ್ ಅವರು ಧೈರ್ಯ ಮಾಡಿ ಇಂತಹ ವಿಷಯದ ಬಗ್ಗೆ ಮಾತನಾಡಿದ್ದಾರೆ. ಆದರೆ, ನಾವು ''ನಟಿ''ಯರಾದ ಕಾರಣ ನಮ್ಮನ್ನು ಟೀಕಿಸುತ್ತಾರೆ, ಟ್ರೋಲ್ ಮಾಡುತ್ತಾರೆ.'' - ಸಂಯುಕ್ತ ಹೆಗ್ಡೆ, ನಟಿ

ಹಣ, ಅಧಿಕಾರ, ಚಿತ್ರರಂಗದ ಬೆಂಬಲ
''ಶ್ರುತಿಯ ಮೇಲೆ ಎಲ್ಲರೂ ಸಿಟ್ಟಾಗಿದ್ದಾರೆ. ಅದು ಸಹಜ. ಏಕೆಂದರೆ, ಸರ್ಜಾ ಕುಟುಂಬಕ್ಕೆ ಒಂದು ಇತಿಹಾಸವಿದೆ. ಅವರಲ್ಲಿ ಹಣ, ಅಧಿಕಾರ, ಚಿತ್ರರಂಗದ ಬೆಂಬಲ ಎಲ್ಲವೂ ಇದೆ. ನಾವು ಯಾವುದೇ ಹಿನ್ನಲೆ ಇಲ್ಲದ ಮಹಿಳೆಯರು. ಆದ್ದರಿಂದ ನಾವು ಸೋಲುತ್ತಿದ್ದೇವೆ.'' - ಸಂಯುಕ್ತ ಹೆಗ್ಡೆ, ನಟಿ

ಗೌರವವನ್ನಾದರೂ ನೀಡಿರಿ
''ಸಿನಿಮಾದಲ್ಲಿ ನಟಿಯರಿಗೆ ನಾಯಕರಿಗೆ ಸಮಾನವಾದ ಸಂಭಾವನೆ ಸಿಗುವುದಿಲ್ಲ, ಗೌರವವನ್ನಾದರೂ ನೀಡಿರಿ. ನಾವು ಗೌರವವನ್ನು ಬಿಟ್ಟು ಬೇರೆ ಏನ್ನನ್ನೂ ನಿರೀಕ್ಷಿಸುವುದಿಲ್ಲ. ನಿಮಗೆ ಒಬ್ಬ ನಟಿಯನ್ನು ಬ್ಯಾನ್ ಮಾಡಿ ಹೊಸ ನಟಿಯನ್ನು ತರುವುದು ಸುಲಭ.'' - ಸಂಯುಕ್ತ ಹೆಗ್ಡೆ, ನಟಿ

ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಬೇಕು
''ಅವರ (ಶ್ರುತಿ) ಬಗ್ಗೆ ಮಾತನಾಡುತ್ತಿರುವ ಎಲ್ಲರೂ ಅವರ ಸ್ಥಾನದಲ್ಲಿ ನಿಮ್ಮ ಮನೆಯ ಹೆಣ್ಣು ಮಕ್ಕಳು ಇದ್ದಿದ್ದರೆ ಏನು ಮಾಡುತ್ತಿದ್ರಿ ಯೋಚಿಸಿ. ಇದೇ ರೀತಿ ಮಾಡುತ್ತಿದ್ರಾ, ಖಂಡಿತ ಇಲ್ಲ. ಇದು ನಾವೆಲ್ಲ ಒಗ್ಗಟ್ಟಾಗಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತು ಹೊರಾಡುವ ಸಮಯ. ಹಾಗೆ ಮಾಡದೆ ಹೋದರೆ ಈ ಇಡೀ ಅಭಿಯಾನವೇ ಸೋತಂತೆ.

ಶ್ರುತಿಗೆ ನಟಿಯರ ಬೆಂಬಲ
ಸಂಯುಕ್ತ ಹೆಗ್ಡೆ ಜೊತೆಗೆಯಲ್ಲಿ ನಟಿ ಶ್ರುತಿ ಹರಿಹರನ್ ಅವರಿಗೆ ಕನ್ನಡದ ಅನೇಕ ನಟಿಯರ ಬೆಂಬಲ ಸಿಕ್ಕಿದೆ. ಸಂಗೀತ ಭಟ್, ನೀತೂ, ಸೋನು ಗೌಡ, ನಿಧಿ ಸುಬ್ಬಯ್ಯ, ಅವಂತಿಕಾ ಶೆಟ್ಟಿ ಸೇರಿದಂತೆ ಸಾಕಷ್ಟು ಜನರು ಶ್ರುತಿ ಪರ ಮಾತನಾಡಿದ್ದಾರೆ.


Click it and Unblock the Notifications











