ಹೊಸ ಕಾರ್ ಖರೀದಿಸಿದ ಸ್ಯಾಂಡಲ್ ವುಡ್ ನಟಿ ಸಂಗೀತಾ ಭಟ್
'ಎರಡನೇ ಸಲ', 'ದಯವಿಟ್ಟು ಗಮನಿಸಿ' ಚಿತ್ರಗಳ ನಂತರ ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆ ಮೂಡಿಸಿರುವ ನಟಿ ಸಂಗೀತಾ ಭಟ್. ಅದಕ್ಕು ಮುಂಚೆ 'ಪ್ರೀತಿ ಗೀತಿ ಇತ್ಯಾದಿ', 'ಮಾಮು ಟೀ ಅಂಗಡಿ' ಅಂತಹ ಚಿತ್ರಗಳಲ್ಲಿ ನಟಿಸಿದ್ದರೂ ತಕ್ಕ ಮಟ್ಟಿಗೆ ಬ್ರೇಕ್ ಸಿಕ್ಕಿರಲಿಲ್ಲ. ಈಗ ಸಂಗೀತಾ ವೃತ್ತಿ ಜೀವನದಲ್ಲಿ ಯಶಸ್ಸಿನ ಬಾಗಿಲು ತೆರೆದಿದೆ.
ಏಳು ಬೀಳಿನ ಹಾದಿಯಲ್ಲಿ ನಡೆದು ಬಂದ ಸಂಗೀತಾ, ತಮ್ಮ ಬಹುದಿನಗಳ ಆಸೆಯೊಂದನ್ನ ಈಗ ಈಡೇರಿಸಿಕೊಂಡಿದ್ದಾರೆ. ಹೌದು, ಸುಮಾರು 10 ವರ್ಷಗಳ ಕಾಲ ಕಷ್ಟದ ಜರ್ನಿ ಮಾಡಿದ ಸಂಗೀತಾ, ಈಗ ಹೊಸ ಕಾರ್ ಖರೀದಿಸುವ ಮೂಲಕ ಖುಷಿ ಪಟ್ಟಿದ್ದಾರೆ.

ನೀಲಿ ಬಣ್ಣದ 'ರೆನೊ ಕ್ವಿಡ್ ಕ್ಲೈಂಬರ್' (renault kwid climber) ಕಾರನ್ನ ಕೊಂಡುಕೊಂಡಿರುವ ಸಂಗೀತಾ, ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಅಂದ್ಹಾಗೆ, ಈ ಕಾರಿನ ಬೆಲೆ ಸುಮಾರು 4.5 ಲಕ್ಷದಿಂದ 5 ಲಕ್ಷದವರೆಗೂ ಇರಬಹುದು.
ಸದ್ಯ, 'ಕಿಸ್ಮತ್' ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿರುವ ಸಂಗೀತಾ ಭಟ್, 'ಲೋಡೆಡ್ ಗನ್' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











