ನನ್ನನ್ನು ಬದುಕಲು ಬಿಡಿ ಎಂದು ಕಣ್ಣೀರು ಹಾಕಿದ ಸಂಗೀತ ಭಟ್
ಮೀ ಟೂ ಬಗ್ಗೆ ಈಗಾಗಲೇ ಬಹುತೇಕ ಕನ್ನಡದ ನಟಿಯರು ಮಾತನಾಡುತ್ತಿದ್ದಾರೆ. ಆದರೆ, ಮೊದಲ ಬಾರಿಗೆ ತಮ್ಮ ಮೇಲೆ ಆದ ಮೀ ಟೂ ಅನುಭವನ್ನು ಹೇಳಿಕೊಂಡಿದ್ದು, ನಟಿ ಸಂಗೀತಾ ಭಟ್.
ಮೀ ಟೂ ವೇದಿಕೆಯಲ್ಲಿ ಗಟ್ಟಿಯಾಗಿ ಸಂಗೀತಾ ಭಟ್ ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ಹಂಚಿಕೊಂಡಿದ್ದರು. ಈಗ ಅದೇ ಅವರ ಪಾಲಿಗೆ ಮುಳುವಾಗಿರುವ ಹಾಗೆ ಕಾಣುತ್ತಿದೆ.
ಸಂಗೀತ ಭಟ್ ತಮ್ಮ ಪೊಸ್ಟ್ ನಲ್ಲಿ ಯಾವ ನಟ, ನಿರ್ದೇಶಕ, ನಿರ್ಮಾಪಕ ಹೀಗೆ ಯಾರ ಬಗ್ಗೆಯೂ ಬೆಟ್ಟು ಮಾಡಿ ತೋರಿಸಿರಲಿಲ್ಲ. ಆದರೆ, ಸಂಗೀತ ಅವರ ಪೋಸ್ಟ್ ಗಳನ್ನು ಇಟ್ಟುಕೊಂಡು ಕೆಲವರು ಬೇರೆ ಬೇರೆ ಹೆಸರುಗಳನ್ನು ಊಹಿಸಲು ಶುರು ಮಾಡಿದ್ದಾರೆ.
ಇದರಿಂದ ಬೇಸರಗೊಂಡಿರುವ ಸಂಗೀತ ಭಟ್ ''ನಾನು ಯಾರ ಹೆಸರು ಕೆಡಿಸಬೇಕು ಎನ್ನುವ ಉದ್ದೇಶಕ್ಕೆ ಆ ಪೋಸ್ಟ್ ಹಾಕಿಲ್ಲ. ನಾನು ನನ್ನ ಅನುಭವ ಹಂಚಿಕೊಂಡೆ ಅಷ್ಟೇ'' ಎಂದು ಭಾವುಕವಾಗಿ ಮಾತನಾಡಿದ್ದಾರೆ. ಮುಂದೆ ಓದಿ....

ನಾನು ಹಾಕಿದ ಒಂದು ಪೋಸ್ಟ್
''15 ದಿನದ ಹಿಂದೆ ನಾನು ನನ್ನ ಸಾಮಾಜಿಕ ಜಾಲತಾಲದಲ್ಲಿ ಒಂದು ಪೋಸ್ಟ್ ಹಾಕಿದೆ. ಆದರೆ, ಅದು ಈಗ ಬೇರೆ ಬೇರೆಯಾದ ಬಣ್ಣಗಳನ್ನು ಪಡೆದುಕೊಳ್ಳುತ್ತಿದೆ. ನಾನು ಅದರಲ್ಲಿ ನನ್ನ ಕಷ್ಟಗಳನ್ನು ಅಭಿಮಾನಿಗಳು ಹಾಗೂ ಫಾಲೋವರ್ಸ್ ಗಳ ಜೊತೆಗೆ ಹೇಳಿಕೊಂಡಿದ್ದೇನೆ ಅಷ್ಟೇ. ಇದು ಯಾವುದೇ ಪಬ್ಲಿಸಿಟಿಗಾಗಿ ಮಾಡಲಿಲ್ಲ.'' - ಸಂಗೀತ ಭಟ್, ನಟಿ

ನನ್ನ ಪ್ರಕಾರ ಮೀ ಟೂ ಅಂದರೆ
''ಮೀ ಟೂ ಅಭಿಯಾನದಲ್ಲಿ ನಾನು ನನ್ನ ಅನುಭವ ಹಂಚಿಕೊಂಡಿದ್ದೇನೆ. ನನಗೆ ತಿಳಿದಿರುವ ಪ್ರಕಾರ ಮೀ ಟೂ ಎನ್ನುವುದು ಹೆಣ್ಣು ಮಕ್ಕಳು ತಮ್ಮ ಮೇಲೆ ಆದ ಲೈಂಗಿಕ ದೌರ್ಜನ್ಯವನ್ನು ಹೇಳಿಕೊಳ್ಳುವ ಒಂದು ವೇದಿಕೆ. ನಾನು ನನ್ನ ಪೋಸ್ಟ್ ನಲ್ಲಿ ಯಾವ ನಟನ ಬಗ್ಗೆ, ನಿರ್ದೇಶಕನ ಬಗ್ಗೆ ,ಯಾವ ನಿರ್ಮಾಪಕನ ಬಗ್ಗೆಯೂ ಆರೋಪ ಮಾಡಿಲ್ಲ.'' - ಸಂಗೀತ ಭಟ್, ನಟಿ

ಅಶ್ಲೀಲ ಕಮೆಂಟ್ಸ್ ಗಳು ಬರ್ತಿವೆ
''ನಾನು ಯಾರ ಹೆಸರು ಕೆಡಿಸಬೇಕು ಎನ್ನುವ ಉದ್ದೇಶಕ್ಕೆ ಆ ಪೋಸ್ಟ್ ಹಾಕಿಲ್ಲ. ಕಆದರೆ, ನನ್ನ ಫೋಟೋ ಇನ್ಸ್ಟಾಗ್ರಾಮ್ ಹಾಕಿದರೆ ಸಾಕಷ್ಟು ಅಶ್ಲೀಲ ಕಮೆಂಟ್ಸ್ ಗಳು ಬರುತ್ತಿವೆ.ಕಳೆದ ಒಂದು ವರ್ಷಗಳಿಂದ ನಾನು ಚಿತ್ರರಂಗದಲ್ಲಿ ಇಲ್ಲ. ನಾನು ಬದುಕಬೇಕು ಆಸೆ ಪಡುತ್ತಿದ್ದೇನೆ ನೀವೆಲ್ಲ ಯಾಕೆ ಅದಕ್ಕೆ ಬಿಡುತ್ತಿಲ್ಲ.''

ನಾನು ಬದುಕಲು ಆಸೆ ಪಡುತ್ತೇನೆ
''ನಾನು ಯಾರ ಕುಟುಂಬಕ್ಕೆ ನೋವು ಮಾಡಿಲ್ಲ. ಯಾರಿಗೂ ಹಾನಿ ಆಗುವ ದೃಷ್ಟಿಯಲ್ಲಿ ಆ ಪೋಸ್ಟ್ ಹಾಕಿಲ್ಲ. ಆದರೂ, ನನಗೆ ಕೆಟ್ಟ ಕೆಟ್ಟ ಸಂದೇಶಗಳು ಬರುತ್ತಿವೆ. ನಾನು ಒಬ್ಬ ಸಮಾನ್ಯ ವ್ಯಕ್ತಿಯಾಗಿ ಬದುಕಲು ಆಸೆ ಪಡುತ್ತೇನೆ ನನ್ನನ್ನು ಬಿಟ್ಟುಬಿಡಿ. - ಸಂಗೀತ ಭಟ್ ನಟಿ

ನಾನು ಯಾರ ಹೆಸರು ಹಾಕಿಲ್ಲ
''ನನ್ನ ಪೋಸ್ಟ್ ನಲ್ಲಿ ನಾನು ಯಾರ ಹೆಸರು ಹಾಕಿಲ್ಲ. ಆದರೆ, ನನ್ನ ಸ್ಟೋರಿ ಇಟ್ಟುಕೊಂಡು ಎಷ್ಟೋ ಜನ ಅವರ ಅಸ್ತ್ರವಾಗಿ ಉಪಯೋಗ ಮಾಡುತ್ತಿದ್ದಾರೆ. ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಇದುವರೆಗೆ ಯಾರ ಹತ್ತಿರ ಕೂಡ ಕೆಟ್ಟ ಹೆಸರು ತೆಗೆದುಕೊಂಡಿಲ್ಲ.'' - ಸಂಗೀತ ಭಟ್ ನಟಿ

ಅದನ್ನು ಬಿಟ್ಟು ಮುಂದೆ ಬಂದಿದ್ದೇನೆ
''ನಾನು ಆ ಘಟನೆಯನ್ನು ಬಿಟ್ಟು ಮುಂದೆ ಬಂದಿದ್ದೇನೆ. ನೀವು ಕೂಡ ಅದನ್ನು ಬಿಟ್ಟು ಹಾಕಿ. ಯಾರ್ ಯಾರು ನನ್ನ ಪೋಸ್ಟ್ ಬಳಿಸಿ ನಿಮ್ಮ ನಿಮ್ಮ ಊಹೆಗೆ ತಕ್ಕಂತೆ ಫೇಸ್ ಬುಕ್ ನಲ್ಲಿ ಬರೆದಿದ್ದೀರಾ. ನಿಮಗೆ ಬೇಕಾದವರ ಹೆಸರು ತೆಗೆದುಕೊಳ್ಳುತ್ತಿದ್ದೀರಾ ಇದು ಅನಗತ್ಯ''. - ಸಂಗೀತ ಭಟ್ ನಟಿ
ನನ್ನ ಕುಟುಂಬದವರನ್ನು ಇದರಲ್ಲಿ ಎಳೆಯಬೇಡಿ
''ನನ್ನ ನೋವನ್ನು ಯಾರೂ ಸರಿ ಮಾಡುವುದಕ್ಕೆ ಆಗಲ್ಲ. ನನ್ನ ಮತ್ತು ನನ್ನ ಕುಟುಂಬದವರನ್ನು ಇದರಲ್ಲಿ ಎಳೆಯಬೇಡಿ. ಯಾರ ಹೆಸರನ್ನು ಹೇಳಲು ನನಗೆ ಇಷ್ಟವಿಲ್ಲ. ನಾನು ಯಾರ ಬಳಿಯು ಸಹಾಯ ಹೇಳಿಲ್ಲ. ಹೋರಾಡುವ ಆಸಕ್ತಿ ಕೂಡ ನನಗೆ ಇಲ್ಲ. ನನ್ನ ಸ್ಟೋರಿಗೆ ಏನೇನೋ ಕಲ್ಟಿಸಬೇಡಿ. - ಸಂಗೀತ ಭಟ್ ನಟಿ


Click it and Unblock the Notifications











