ಅಜಯ್ ರಾವ್ ಗೆ ಜೋಡಿಯಾದ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ನಾಯಕಿ
'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರ ನೋಡಿದ ವೀಕ್ಷಕರು ಖುಷಿಯಾಗಿದ್ದರು. ಈ ಸಿನಿಮಾ ದಿನನಿತ್ಯದ ಬದುಕಿಗೆ ಬಹಳ ಹತ್ತಿರ ಆಗಿತ್ತು. ತಬಲಾ ನಾಣಿ, ಚಂದನ್ ಚಿತ್ರದ ನಾಯರಾಗಿದ್ದರೆ, ಸಂಜನಾ ಆನಂದ್ ಸಿನಿಮಾದ ನಾಯಕಿಯಾಗಿದ್ದರು.
ಈ ಸಿನಿಮಾದ ನಂತರ ನಟಿ ಸಂಜನಾ ಆನಂದ್ ಗೆ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಈಗ ಅಜಯ್ ರಾವ್ ಅವರ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಸಂಜನಾ ಆಯ್ಕೆ ಆಗಿದ್ದಾರೆ. ಇನ್ನು ಟೈಟಲ್ ಫಿಕ್ಸ್ ಆಗದ ಈ ಸಿನಿಮಾವನ್ನು ಚಂದ್ರಶೇಖರ್ ಟಿ ಆರ್ ನಿರ್ಮಾಣ ಮಾಡುತ್ತಿದ್ದಾರೆ.
'ಅಯೋಗ್ಯ', 'ಚಮಕ್', 'ಬೀರ್ ಬಲ್' ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಚಂದ್ರಶೇಖರ್ ಅವರ ಹೊಸ ಸಿನಿಮಾ ಇದಾಗಿದೆ. ಚಿತ್ರವನ್ನು ಜಾಕಿ ನಿರ್ದೇಶನ ಮಾಡುತ್ತಿದ್ದಾರೆ.

ಹಳ್ಳಿ ಹಿನ್ನಲೆಯಲ್ಲಿ ಸಿನಿಮಾ ಕಥೆ ಸಾಗಲಿದ್ದು, ಸಂಜನಾ ಪಾತ್ರ ಹೋಮ್ಲಿಯಾಗಿ ಇರುತ್ತದೆಯಂತೆ. 'ಕೆಮಿಸ್ಟ್ರಿ ಆಫ್ ಕರಿಯಪ್ಪ' ನಂತರ ಸದ್ಯ ಅವರು 'ಹಾನಿ ಮೂನ್' ಎಂಬ ವೆಬ್ ಸೀರಿಸ್ ನಲ್ಲಿಯೂ ನಟಿಸುತ್ತಿದ್ದಾರೆ.
ಅಜಯ್ ರಾವ್ ನಟನೆಯ 27 ಸಿನಿಮಾ ಇದಾಗಿದೆ. ಶ್ರೀಧರ್ ವಿ ಸಂಭ್ರಮ್ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಜೂನ್ ಮೊದಲ ವಾರದಲ್ಲಿ ಸಿನಿಮಾದ ಚಿತ್ರೀಕರಣ ಶುರು ಆಗಲಿದೆ. ಮದ್ದೂರು ಹಾಗೂ ಚನ್ನಪಟ್ಟಣದಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದೆ.


Click it and Unblock the Notifications











