»   » ಸಪ್ತಪದಿ ತುಳಿಯಲು ಸಿದ್ಧವಾದ 'ಬಿಗ್ ಬಾಸ್' ಸಂಜನಾ

ಸಪ್ತಪದಿ ತುಳಿಯಲು ಸಿದ್ಧವಾದ 'ಬಿಗ್ ಬಾಸ್' ಸಂಜನಾ

Posted By:
Subscribe to Filmibeat Kannada
ಬಿಗ್ ಬಾಸ್ ಸಂಜನಾ ಚಿದಾನಂದ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ | Filmibeat Kannada

'ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕವೇ ಪ್ರಖ್ಯಾತಿಗಳಿಸಿದ ನಟಿ ಸಂಜನಾ ಚಿದಾನಂದ್ ಮದುವೆ ಮಾಡಿಕೊಳುತ್ತಿದ್ದಾರಂತೆ. ಹೌದು.. ಈ ರೀತಿಯ ಗಾಸಿಪ್ ಗಳು ಆಗಾಗ ಸುದ್ದಿಯಾಗುತ್ತಲೇ ಇತ್ತು. 'ಬಿಗ್ ಬಾಸ್' ನಲ್ಲೇ ತಮ್ಮ ಜೊತೆ ಸಹ ಸ್ಪರ್ಧಿಯಾಗಿದ್ದ ನಟ ಭುವನ್ ರನ್ನು ಸಂಜನಾ ಮದುವೆ ಮಾಡಿಕೊಳ್ಳುತ್ತಾರೆ ಅಂತಲೂ ಸುದ್ದಿ ಇತ್ತು. 'ಬಿಗ್ ಬಾಸ್' ಮುಗಿಸಿಕೊಂಡು ಬಂದ ನಂತರ ಈ ಇಬ್ಬರು 'ಸಂಜು ಮತ್ತು ನಾನು' ಧಾರಾವಾಹಿಯಲ್ಲಿ ಅಭಿನಯಿಸಿದ್ದು, ಗಾಸಿಪ್ ಗಳಿಗೆ ಮತ್ತಷ್ಟು ಪುಷ್ಟಿ ನೀಡಿತ್ತು.

ಕೆಲ ತಿಂಗಳ ಹಿಂದೆ ಭುವನ್ ಹಾಗೂ ಸಂಜನಾ ನಿಶ್ಚಿತಾರ್ಥ ಫಿಕ್ಸ್ ಆಗಿದೆ ಎಂದು ಸುದ್ದಿ ಆಗಿತ್ತು. ಜೊತೆಗೆ ಆಮಂತ್ರಣ ಪತ್ರಿಕೆಯನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಘಟನೆ ಸಂದರ್ಭದಲ್ಲಿ ಸಂಜನಾ 'ನಾನು ಮತ್ತು ಭುವನ್ ಇಬ್ಬರು ಸ್ನೇಹಿತರಷ್ಟೇ' ಎಂದು ಸ್ಪಷ್ಟಪಡಿಸಿರು. ಆದರೆ ಈಗ ಸಂಜನಾ ತಾವು ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗಲಿರುವ ಸೂಚನೆ ಸಹ ನೀಡಿದ್ದಾರೆ. ಮುಂದೆ ಓದಿ...

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಸಂಜನಾ

'ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕವೇ ಫೇಮಸ್ ಆಗಿದ್ದ ನಟಿ ಸಂಜನಾ ಚಿದಾನಂದ್ ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾಗಿದ್ದಾರೆ. ತಮ್ಮ ಬಹುಕಾಲದ ಸ್ನೇಹಿತನ ಜೊತೆ ಸಂಜನಾ ಚಿದಾನಂದ್ ತಮ್ಮ ವೈವಾಹಿಕ ಜೀವನವನ್ನು ಪ್ರಾರಂಭ ಮಾಡಲಿದ್ದಾರೆ.

ಗೌರವ್ ಜೊತೆ ಸಂಜನಾ ನಿಶ್ವಿತಾರ್ಥ

ಗೌರವ್ ರಾಯ್ ಎನ್ನುವ ಸ್ನೇಹಿತನ ಜೊತೆಯಲ್ಲಿ ನಟಿ ಸಂಜನಾ ಚಿದಾನಂದ್ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಮೂರು ವರ್ಷಗಳಿಂದ ಸ್ನೇಹಿತರಾಗಿದ್ದ ಇವರಿಬ್ಬರು ಇನ್ನು ಕೆಲವೇ ದಿನಗಳಲ್ಲಿ ದಂಪತಿಗಳಾಗಲಿದ್ದಾರೆ.

ಗುರು-ಹಿರಿಯರ ಸಮ್ಮುಖದಲ್ಲಿ ಮದುವೆ

ಗೌರವ್ ಹಾಗೂ ಸಂಜನಾ ಪ್ರೀತಿಗೆ ಇಬ್ಬರು ಮನೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈಗಾಗಲೇ ಇಬ್ಬರ ಮನೆಯಲ್ಲಿ ಮದುವೆಯ ವಿಚಾರ ಪ್ರಸ್ತಾಪಿಸಿದ್ದು, ಮುಂದಿನ ವರ್ಷದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು, 2019ರಲ್ಲಿ ಮದುವೆ ಆಗಲಿದ್ದಾರಂತೆ.

ಸದ್ಯ ಸಂಜನಾ ಸಿನಿಮಾಗಳಲ್ಲಿ ಬ್ಯುಸಿ

ಈಗಾಗಲೇ ಒಂದು ಚಿತ್ರದಲ್ಲಿ ಅಭಿನಯಿಸಿರುವ ನಟಿ ಸಂಜನಾ ಚಿದಾನಂದ್ ರಿಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಸಿನಿಮಾ ಸೇರಿದಂತೆ ಧಾರಾವಾಹಿಯಲ್ಲಿ ನಟಿಸಲು ಆಫರ್ ಬಂದಿದ್ದು, ಇಲ್ಲಿಯ ತನಕ ಸಂಜನಾ ಯಾವುದನ್ನೂ ಒಪ್ಪಿಕೊಂಡಿಲ್ಲ.

English summary
Big Boss fame Actress Sanjana Chidanand will be engaged next year,Sanjana will marry her boy friend Gaurav Roy,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada