twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೊಂದು ಎಡವಟ್ಟು ಮಾಡಿದ ಸಂಜನಾ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು.!

    |

    Recommended Video

    ಸಂಜನಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು!! | SANJANA GALRANI | COP | FILMIBEAT KANNADA

    ನಟಿ ಸಂಜನಾ ಗಲ್ರಾನಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ನಿರ್ಮಾಪಕಿ ವಂದನಾ ಜೈನ್ ಜೊತೆ ಕಿತ್ತಾಡಿಕೊಂಡು ಇತ್ತೀಚೆಗಷ್ಟೆ ಸದ್ದು ಮಾಡಿದ್ದ ಸಂಜನಾ ಗಲ್ರಾನಿ ಇದೀಗ ಟ್ರಾಫಿಕ್ ನಿಯಮ ಉಲ್ಲಂಘಿಸಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಕಾರು ಚಾಲನೆ ಮಾಡುತ್ತಿದ್ದ ವೇಳೆ ಸೆಲ್ಫಿ ವಿಡಿಯೋ ಮಾಡಿದ್ದ ನಟಿ ಸಂಜನಾ ಗಲ್ರಾನಿ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಟ್ರಾಫಿಕ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮುಂದೆ ಓದಿರಿ...

    ಏನಿದು ಪ್ರಕರಣ.?

    ಏನಿದು ಪ್ರಕರಣ.?

    ಬೆಂಗಳೂರಿನ ಮೆಜೆಸ್ಟಿಕ್ ರಸ್ತೆ ಬಳಿ ಕಾರು ಚಾಲನೆ ಮಾಡುತ್ತಿದ್ದಾಗ, ನಟಿ ಸಂಜನಾ ಗಲ್ರಾನಿ ಒಂದು ಸೆಲ್ಫಿ ವಿಡಿಯೋ ಮಾಡಿದ್ದರು. ''ನಾನು ಈಗ ತೆಲುಗು ಸಿನಿಮಾ 'ಸರಿಲೇರು ನೀಕೆವ್ವರು' ನೋಡೋಕೆ ಹೋಗ್ತಾ ಇದ್ದೀನಿ. ಐ ಲವ್ ಮಹೇಶ್ ಬಾಬು'' ಎಂದು ಹೇಳಿ ಸ್ಟೇರಿಂಗ್ ತಿರುಗಿಸುತ್ತಾರೆ ನಟಿ ಸಂಜನಾ ಗಲ್ರಾನಿ. ಓಪನ್ ಕಾರಿನಲ್ಲಿ, ನಡುರಸ್ತೆಯಲ್ಲಿ ಗಿಜಿಗುಡುವ ಟ್ರಾಫಿಕ್ ಮಧ್ಯೆ ಸಂಜನಾ ಈ ಸೆಲ್ಫಿ ವಿಡಿಯೋ ಮಾಡಿ, ಅದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

    ಬಾರ್ ನಲ್ಲಿ ಗಲಾಟೆ: ಸಂಜನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ ವಂದನಾ ಜೈನ್ಬಾರ್ ನಲ್ಲಿ ಗಲಾಟೆ: ಸಂಜನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ ವಂದನಾ ಜೈನ್

    ದೂರು ದಾಖಲು

    ದೂರು ದಾಖಲು

    ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದ ನಟಿ ಸಂಜನಾ ಮತ್ತು ಆಕೆಯ ಜೊತೆ ಕಾರಿನಲ್ಲಿದ್ದ ವ್ಯಕ್ತಿ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

    ಬಾರ್ ನಲ್ಲಿ ಕಿರಿಕ್: ಸುದೀರ್ಘ ಪತ್ರ ಬರೆದು ಸ್ಪಷ್ಟನೆ ನೀಡಿದ ಸಂಜನಾ ಗಲ್ರಾನಿಬಾರ್ ನಲ್ಲಿ ಕಿರಿಕ್: ಸುದೀರ್ಘ ಪತ್ರ ಬರೆದು ಸ್ಪಷ್ಟನೆ ನೀಡಿದ ಸಂಜನಾ ಗಲ್ರಾನಿ

    ಸಂಚಾರಿ ನಿಯಮ ಏನು ಹೇಳುತ್ತೆ.?

    ಸಂಚಾರಿ ನಿಯಮ ಏನು ಹೇಳುತ್ತೆ.?

    ಸಂಚಾರಿ ನಿಯಮದ ಪ್ರಕಾರ, ವಾಹನ ಚಲಾಯಿಸುವ ವೇಳೆ ಮೊಬೈಲ್ ಫೋನ್ ಬಳಸುವ ಹಾಗಿಲ್ಲ. ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದರೆ ಭಾರಿ ದಂಡ ತೆರಬೇಕಾಗುತ್ತದೆ. ಮೊಬೈಲ್ ಬಳಕೆಯಿಂದ ಮೂರು ಬಾರಿ ಸಿಕ್ಕಿಬಿದ್ದರೆ, ಡ್ರೈವಿಂಗ್ ಲೈಸೆನ್ಸ್ ಅಮಾನತಿಗೆ ಟ್ರಾಫಿಕ್ ಪೊಲೀಸರು ಶಿಫಾರಸ್ಸು ಮಾಡುತ್ತಾರೆ.

    ವ್ಯಾಪಕ ಟೀಕೆಗೆ ಗುರಿಯಾದ ಸಂಜನಾ

    ವ್ಯಾಪಕ ಟೀಕೆಗೆ ಗುರಿಯಾದ ಸಂಜನಾ

    ಇದೀಗ ಸಂಜನಾ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ನಟಿ ಸಂಜನಾಗೆ ಟ್ರಾಫಿಕ್ ನಿಯಮಗಳ ಕುರಿತು ಅರಿವಿಲ್ಲವೇ.? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಜೊತೆಗೆ, ಪೊಲೀಸರು ಸಂಜನಾ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಅಂತ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.

    English summary
    Actress Sanjana Galrani lands in trouble for violating Traffic rules.
    Monday, January 13, 2020, 9:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X