Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಂಜನಾ ಮಗನ ಕೈಯಲ್ಲಿ ಕ್ಯಾಮರಾ ಕೊಟ್ಟು ಫೋಟೊಶೂಟ್ ಮಾಡಿಸಿದ್ದು ಇದೇ ಕಾರಣಕ್ಕೆ!
ಎರಡು ತಿಂಗಳ ಹಿಂದಷ್ಟೇ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದ ಸಂಜನಾ ಗರ್ಲಾನಿ, ಸದ್ಯ ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗನಿಗೆ 'ಅಲಾರಿಕ್' ಎಂದು ನಾಮಕರಣ ಮಾಡಿದ್ದ ಸಂಜನಾ ಮೊದಲ ಬಾರಿಗೆ ಫೋಟೊ ಸಮೇತ ಎಲ್ಲರಿಗೂ ಆತನನ್ನು ಪರಿಚಯಿಸಿದ್ದಾರೆ.
ಮಗ ಅಲಾರಿಕ್ ಜೊತೆಗಿನ ಸುಂದರ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಸಂಜನಾ ಶೇರ್ ಮಾಡುತ್ತಲೇ ಇರುತ್ತಾರೆ. ಮಗನ ಇನ್‌ಸ್ಟ್ರಾಗ್ರಾಂ ಖಾತೆಯನ್ನು ತೆರೆದಿರುವ ಚೆಲುವೆ ಇಷ್ಟು ದಿನ ಫೋಟೊ, ವೀಡಿಯೋಗಳಲ್ಲಿ ಮಗನ ಮುಖ ಕಾಣದಂತೆ ನೋಡಿಕೊಳ್ಳುತ್ತಿದ್ದರು. ಇದೀಗ ಬೊಂಬಾಟ್ ಫೋಟೊಶೂಟ್ ಮಾಡಿಸಿ, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕ್ಯೂಟ್ ಅಲಾರಿಕ್‌ನ ನೋಡಿದ ಸಂಜನಾ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಭಿನ್ನ ವಿಭಿನ್ನ ಪರಿಕರಗಳ ಜೊತೆ ಬಹಳ ಸೊಗಸಾಗಿ ಫೋಟೊಶೂಟ್ ಮಾಡಿದ್ದು, ಅದರ ವಿಡಿಯೋ ಕೂಡ ನೋಡಬಹುದು.
ಕಷ್ಟದ
ಸಮಯದಲ್ಲೂ
ಜೊತೆಯಲ್ಲಿ
ನಿಂತ
ಅಭಿಮಾನಿಗಳು
ಮತ್ತು
ಸ್ನೇಹಿತರಿಗೆ
ಸಂಜನಾ
ಪ್ರೀತಿಯ
ಸಂದೇಶ
ಗರ್ಭಿಣಿಯಾದ ನಂತರ ಬೇಬಿ ಬಂಪ್ ಫೋಟೊಶೂಟ್ ಮಾಡಿಸಿಕೊಂಡಿದ್ದ ಸಂಜನಾ ಆ ಫೋಟೊಗಳನ್ನು, ವಿಡಿಯೋಗಳನ್ನು ಕೂಡ ಶೇರ್ ಮಾಡಿದ್ದರು. ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಗಿತ್ತು. ಅದರ ಫೋಟೊ ಹಾಗೂ ವಿಡಿಯೋ ಶೇರ್ ಮಾಡಿದ್ದ ಸಂಜನಾ ಅಭಿಮಾನಿಗಳ ಆಶೀರ್ವಾದವನ್ನು ಸಹ ಕೇಳಿದ್ದರು. ತಾಯ್ತನದ ಖುಷಿಯಲ್ಲಿರುವ ಸಂಜನಾ ಗರ್ಲಾನಿ ಮಗನನ್ನು ಬೆಳವಣಿಗೆಯ ಪ್ರತಿ ಹಂತವೂ ನೆನಪಿನಲ್ಲಿ ಉಳಿಯುವಂತೆ ಮಾಡುತ್ತಿದ್ದಾರೆ.
'ನೀಲಕಂಠ',
'ಹೂ'
ಸಿನಿಮಾದ
ನಟಿ
ನಮಿತಾ
ತುಂಬು
ಗರ್ಭಿಣಿ:
ಬೇಬಿ
ಬಂಪ್
ಫೋಟೊಶೂಟ್
ವೈರಲ್!

ಎರಡು ಥೀಮ್‌ನಲ್ಲಿ ಅಲಾರಿಕ್ ಫೋಟೂಶೂಟ್
ಸಂಜನಾ ಗರ್ಲಾನಿ ನಟಿ. ಪತಿ ಅಜೀಜ್ ಪಾಷಾ ಡಾಕ್ಟರ್. ಹಾಗಾಗಿ ಡಾಕ್ಟರ್ ಮತ್ತು ಆಕ್ಟರ್ ಥೀಮ್‌ನಲ್ಲಿ ಮಗನ ಫಸ್ಟ್ ಫೋಟೊಶೂಟ್ ಮಾಡಿಸಿದ್ದಾರೆ. ಸದ್ಯ ಆಕ್ಟರ್ ಥೀಮ್ ಫೋಟೊಗಳನ್ನು ಹಂಚಿಕೊಂಡಿದ್ದು, ಶೀಘ್ರದಲ್ಲೇ ಡಾಕ್ಟರ್ ಥೀಮ್ ಫೋಟೊಗಳನ್ನು ಅಪ್‌ಲೋಡ್ ಮಾಡಲಿದ್ದಾರೆ

ಸಂಜನಾ ಮಗನ ಕೈಯಲ್ಲಿ ಕ್ಯಾಮೆರಾ
ಆಕ್ಟರ್ ಥೀಮ್ ಫೋಟೊಶೂಟ್‌ನಲ್ಲಿ ಕ್ಲಾಪ್ ಬೋರ್ಡ್, ಕ್ಯಾಮರಾ ಸೇರಿದಂತೆ ಸಿನಿಮಾ ಚಿತ್ರೀಕರಣಕ್ಕೆ ಸಂಬಂಧಿಸಿದ ಪರಿಕರಗಳನ್ನು ಬಳಸಲಾಗಿದೆ. ಪುಟ್ಟ ಕ್ಯಾಮರಾವನ್ನು ಮಗನ ಕೈಗಿಟ್ಟು ಸಂಜನಾ ಫೋಟೊ ಕ್ಲಿಕ್ಕಿಸಿ ಖುಷಿಪಟ್ಟಿದ್ದಾರೆ. ಮಗನ ಜೊತೆಗೆ ತಾವು ಕ್ಯಾಮರಾಗೆ ಪೋಸ್ ಕೊಟ್ಟು ಸಂಭ್ರಮಿಸಿದ್ದಾರೆ.
ಅಲಾರಿಕ್ ಕಂಡು ಖುಷಿಯಾದ ಅಭಿಮಾನಿಗಳು
ಅಲಾರಿಕ್ ಕ್ಯೂಟ್ ಕ್ಯೂಟ್ ಫೋಟೊಗಳು ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬೇಗ ಡಾಕ್ಟರ್ ಥೀಮ್ ಫೋಟೊಗಳನ್ನು ಶೇರ್ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಹೆರಿಗೆಯ ವಿಡಿಯೋ ಶೇರ್ ಮಾಡಿದ್ದ ನಟಿ
ಸಿಸೇರಿಯನ್ ಹೆರಿಗೆ ಮೂಲಕ ಮಗುವಿಗೆ ಜನ್ಮ ನೀಡಿದ್ದ ಸಂಜನಾ, ಆ ಕಷ್ಟ ಹೇಗಿರುತ್ತದೆ ಅನ್ನುವುದನ್ನು ಹಂಚಿಕೊಂಡಿದ್ದರು. ಹೆರಿಗೆಯ ಲೈವ್ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಸಿಸೇರಿಯನ್ ಹೆರಿಗೆ ಎಷ್ಟು ಕಷ್ಟ ಅನ್ನುವುದನ್ನು ವಿವರಿಸಿದ್ದರು. ತಾಯಿ ಎಷ್ಟು ಕಷ್ಟಪಟ್ಟು ಆಸೆಯಿಂದ ಮಗುವನ್ನು ಭೂಮಿಗೆ ತರ್ತಾಳೆ, ಅದೇ ರೀತಿ ಆಕೆಯನ್ನು ಕೊನೆಯವರೆಗೂ ನಾವು ಪ್ರೀತಿಯಿಂದ ನೋಡಿಕೊಳ್ಳಬೇಕು, ಪೂಜಿಸಬೇಕು ಅಂತ ಹೇಳಿದ್ದರು.