»   » ಮತ್ತೆ ಸುದ್ದಿಯಲ್ಲಿ 'ಬೆಸ್ತರ ಹೆಣ್ಣುಮಗಳು' ಸಂಜನಾ

ಮತ್ತೆ ಸುದ್ದಿಯಲ್ಲಿ 'ಬೆಸ್ತರ ಹೆಣ್ಣುಮಗಳು' ಸಂಜನಾ

Posted By:
Subscribe to Filmibeat Kannada
ನಟಿ ಸಂಜನಾ ಮತ್ತೆ ಸಾಕಷ್ಟು ಸುದ್ದಿಯಾಗುವ ಕಾಲ ಬಂದಿದೆ. ಸಂಜನಾ ಅಭಿನಯದ ಬರಲಿರುವ ಬಹುನಿರೀಕ್ಷಿತ ಚಿತ್ರ 'ಮಹಾನದಿ'ಗೆ ಚಿತ್ರೀಕರಣ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಆ ಚಿತ್ರವು ಸದ್ಯದಲ್ಲೇ ತೆರೆಗೆ ಬರಲಿದೆ. ಈ ಮೊದಲು 'ಮಾರಿಬಲೆ' ಎಂಬ ಚಿತ್ರವನ್ನು ನಿರ್ದೇಶಿಸಿ ನಟಿ ಭಾವನಾರನ್ನು ಜಾಗತಿಕ ಮಟ್ಟದಲ್ಲಿ ಮಿಂಚುವಂತೆ ಮಾಡಿದ್ದ ಕೃಷ್ಣಪ್ಪ ಉಪ್ಪೂರು ಅವರೇ ಈ 'ಮಹಾನದಿ' ಚಿತ್ರದ ನಿರ್ದೇಶಕರು ಎಂಬುದು ವಿಶೇಷ.

ಈ ಚಿತ್ರವು ಸಂಪೂರ್ಣವಾಗಿ ನಾಯಕಿ ಪ್ರಧಾನವೆಂಬುದು ಗಮನಿಸಬೇಕಾದ ಅಂಶ. ಇದೇ ನಟಿ ಸಂಜನಾ ಅವರಿಗೂ ಇರುವ ಖುಷಿಯ ವಿಚಾರ. ಇಲ್ಲಿಯವೆರೆಗೆ ಹೆಚ್ಚಾಗಿ ಮರಸುತ್ತುವ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದ ನಟಿ ಸಂಜನಾ ಅಲ್ಲೊಂದು ಇಲ್ಲೊಂದು ಎಂಬಂತೆ ಗಟ್ಟಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು ಅಷ್ಟೇ. ಆದರೆ 'ಮಹಾನದಿ' ಚಿತ್ರದಲ್ಲಿ ನಾಯಕಿ ಪ್ರಧಾನ ಪಾತ್ರವೇ ಸಂಜನಾರನ್ನು ಹುಡುಕಿಕೊಂಡು ಬಂದಿರುವುದು ಇದು ಅವರಿಗೆ ವೃತ್ತಿಜೀವನದಲ್ಲಿ ಹೊಸ ತಿರುವು ನೀಡಿದರೆ ಆಶ್ಚರ್ಯವಿಲ್ಲ.

'ಮಹಾನದಿ' ಚಿತ್ರದಲ್ಲಿ ಸಂಜನಾರದು ಬೆಸ್ತರ ಹೆಣ್ಣುಮಗಳ ಪಾತ್ರವಂತೆ. ಕರಾವಳಿಯ ಈ ಬೆಸ್ತರ ಹೆಣ್ಣುಮಗಳಿಗೆ ಮುಂಬೈ ಹುಡುಗನನ್ನು ವರಿಸುವ, ಅಲ್ಲಿ ಬದುಕುವ ಆಸೆಯಂತೆ. ನಾಯಕಿ ಜೀವನ ಯಾನವನ್ನು ಹರಿಯುವ ನದಿಯ ಚಲನೆಯೊಂದಿಗೆ ಹೋಲಿಸಿ 'ಮಹಾನದಿ' ಎಂಬ ಹೆಸರಿಟ್ಟಿದ್ದಾರೆ ನಿರ್ದೆಶಕ ಉಪ್ಪೂರರು.

ಈ ಚಿತ್ರದಲ್ಲಿ ಪ್ರಧಾನ ಪಾತ್ರಧಾರಿಯಾಗಿರುವ ಸಂಜನಾರದು ಭಾರಿ ಸವಾಲಿನ ಪಾತ್ರ. ಅದನ್ನವರು ಹೇಗೆ ನಿರ್ವಹಿಸಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಈಗಾಗಲೇ ಕನ್ನಡದ 15 ಚಿತ್ರಗಳಲ್ಲಿ ಅಭಿನಯಿಸಿರುವ ಸಂಜನಾ, ತೆಲುಗು, ತುಳು ಹಾಗೂ ಮಲಯಾಳಂ ಭಾಷೆಗಳ ಚಿತ್ರಗಳನ್ನು ಸೇರಿಸಿದರೆ ಒಟ್ಟೂ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ.

'ಗಂಡ ಹೆಂಡತಿ' ಚಿತ್ರದಲ್ಲಿ ಸಂಜನಾ ಮಾಡಿದ ಪಾತ್ರ ಸಾಕಷ್ಟು ವಾದ-ವಿವಾದಗಳಿಗೆ ಕಾರಣವಾಯ್ತು. ನಂತರ ಸಂಜನಾ ತಮ್ಮ ವೃತ್ತಿಜೀವನದಲ್ಲಿ ಪಾತ್ರಗಳ ಆಯ್ಕೆಯಲ್ಲಿ ಜಾಣತನ ತೋರಿಸಲು ತೊಡಗಿದ್ದಾರೆ ಎನ್ನಲಾಗುತ್ತಿದೆ. ಯಾವುದಕ್ಕೂ ಬರಲಿರುವ 'ಮಹಾನದಿ'ಗೆ ಕಾಯಲಾಗುತ್ತಿದೆ, ನೋಡೋಣ! (ಒನ್ ಇಂಡಿಯಾ ಕನ್ನಡ)

English summary
Actress Sanjana acted Heroine Oriented Role in her upcoming movie titled Mahanadi. Maribale movie fame Director Krishnappa Uppuru Directed this movie. This movie to release shortly. 
 
Please Wait while comments are loading...