'ಡಾರ್ಲಿಂಗ್' ಚಿತ್ರದ ಐಟಂ ಡಾನ್ಸರ್ ಆಗಿ ಸಂಜನಾ

By Rajendra

ಇದು ಲೂಸ್ ಮಾದ ಯೋಗೀಶ್ ಅವರ 'ಡಾರ್ಲಿಂಗ್' ಚಿತ್ರದ ಸಮಾಚಾರವಲ್ಲ. ಇದು 'ಸಿನಿಮಾ ಮೈ ಡಾರ್ಲಿಂಗ್' ಚಿತ್ರದ ತಾಜಾ ತಾಜಾ ಕಬರ್. ಜನಪ್ರಿಯ ಟಿವಿ ನಿರೂಪಕ ಗೌರೀಶ್ ಅಕ್ಕಿ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದು.

ಗೌರೀಶ್ ಅಕ್ಕಿ ಅವರು ಸಾಕಷ್ಟು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಗೌರೀಶ್ ಅಕ್ಕಿ ಅವರಿಗೆ ಅಭಿನಯ ಹೊಸದಲ್ಲ. ಈ ಹಿಂದೆ ಅವರು ಮಾತಾಡ್ ಮಾತಾಡ್ ಮಲ್ಲಿಗೆ, ಕಳ್ಳರ ಸಂತೆ, ಮೈನಾ, ಚಾರ್ಮಿನಾರ್, ಮತ್ತೆ ಬನ್ನಿ ಪ್ರೀತ್ಸೋಣ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆದರೆ ಅವರ ನಿರ್ದೇಶನದ ಚಿತ್ರ ಹೇಗಿರುತ್ತದೆ ಎಂಬ ಕುತೂಹಲವಂತೂ ಗಾಂಧಿನಗರದ ಪ್ರೇಕ್ಷಕರಿಗೆ ಇದ್ದೇ ಇದೆ.

'ನಮಕ್ ಹರಾಮ್' ಚಿತ್ರದಲ್ಲಿ ಲಾಂಗ್ ಹಿಡಿಯುವ ಮೂಲಕ ಗಾಂಧಿನಗರದಲ್ಲಿ ಅಚ್ಚರಿ ಮೂಡಿಸಿದ್ದರು ಗೌರೀಶ್. ಇದೀಗ ಅವರ 'ಸಿನಿಮಾ ಮೈ ಡಾರ್ಲಿಂಗ್' ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಗಂಡ ಹೆಂಡತಿ ಖ್ಯಾತಿಯ ಸಂಜನಾ ಅರ್ಚನಾ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Actress Sanjjanaa Archana as item dancer in Gowrish Akki Movie

ಹೀರೋಯಿನ್ ಆಗಬೇಕು ಎಂದುಕೊಂಡು ಬಣ್ಣದ ಲೋಕಕ್ಕೆ ಅಡಿಯಿಡುವ ದೇವಯಾನಿಯಾಗಿ ಸಂಜನಾ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅವರು ಐಟಂ ಡಾನ್ಸರ್ ಆಗುತ್ತಾರೆ. ಚಿತ್ರದಲ್ಲಿ ಐಟಂ ಸಾಂಗ್ ಇರುತ್ತದಾ ಎಂದು ಗೌರೀಶ್ ಅಕ್ಕಿ ಅವರನ್ನು ಫಿಲ್ಮಿಬೀಟ್ ಕೇಳಿದಾಗ, ಅವರು ಖಂಡಿತ ಇರುತ್ತದೆ ಅದು ಇಂಟ್ರಡಕ್ಷನ್ ಸಾಂಗ್ ಸಹ ಹೌದು ಎಂದರು.

ನಾಯಕಿಯಾಗಿ ಕನಸು ಹೊತ್ತು ಬರುವ ಸಂಜನಾ ಐಟಂ ಡಾನ್ಸರ್ ಆಗುತ್ತಾರೆ. ಸಿನಿಮಾ ವೃತ್ತಿಯಲ್ಲಿರುವ ಗಂಡಹೆಂಡತಿಯ 'ಇಗೋ'ಗಳು ಹೇಗೆ ಅಡಚಣೆಯಾಗುತ್ತವೆ ಎಂಬುದೂ ಚಿತ್ರದ ಭಾಗವಾಗಿದೆ ಎನ್ನುತ್ತಾರೆ ನಿರ್ದೇಶಕ ಗೌರೀಶ್. 'ಡಾರ್ಲಿಂಗ್' ಚಿತ್ರ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿದೆ.

ಸಿನಿಮಾ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಇನ್ನೊಬ್ಬರ ಬಗ್ಗೆ ದೂರುತ್ತಲೇ ಇರುತ್ತಾರೆ. ಆದರೆ ಯಾರೂ ಈ ಕ್ಷೇತ್ರವನ್ನು ಬಿಟ್ಟು ಹೋಗಲ್ಲ. ಅದಕ್ಕೆ ಸಿನಿಮಾ ಕಾರಣವಾಗುತ್ತದೆ. ಸಿನಿಮಾ ಎಲ್ಲರ ಡಾರ್ಲಿಂಗ್ ಆಗುತ್ತದೆ. ಹೀಗೆ ಸಿನಿಮಾಗೆ ಸಂಬಂಧಿಸಿದ ಸಾಕಷ್ಟು ಅಂಶಗಳು ಚಿತ್ರದಲ್ಲಿ ಇರುತ್ತವೆ. ಸಿನಿಮಾ ಸೆಂಟ್ರಿಕ್ ಕಥೆ ಇದು ಎಂಬುದು ಗೌರೀಶ್ ವಿವರಣೆ.

ಗೌರೀಶ್ ಅಕ್ಕಿ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದು ಕಥೆ ಚಿತ್ರಕಥೆ ಸಂಭಾಷಣೆ ಹಾಗೂ ನಿರ್ದೇಶನ ಗೌರೀಶ್ ಅಕ್ಕಿ ಅವರದು. ಅಮರನಾಥ್ ಮತ್ತು ಮಹಾಂತೇಶ್ ಯಡವಾಡ್ ಚಿತ್ರದ ನಿರ್ಮಾಪಕರು. ಅಜನೀಶ್ ಲೋಕನಾಥ್ ಅವರ ಸಂಗೀತ ಹಾಗೂ ಎಸ್.ಕೆ.ರಾವ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. (ಫಿಲ್ಮಿಬೀಟ್ ಕನ್ನಡ)

More from Filmibeat

English summary
Popular anchor Gowrish Akki has forayed into film making. The anchor is directing his first movie. The movie has been titled as Cinema My Darling. The anchor turned director decided to cast Sanjjanaa Archana in the lead role for the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X