For Quick Alerts
  ALLOW NOTIFICATIONS  
  For Daily Alerts

  ಕೊರೊನಾ ವೈರಸ್ ಲಸಿಕೆ ಪಡೆದ ಧ್ರುವ ಸರ್ಜಾ ಮತ್ತು ಸ್ಟಾರ್ ನಟಿಯರು

  |

  ಕೊರೊನಾ ವೈರಸ್ ವಿರುದ್ಧ ಹೋರಾಡಬೇಕಿದ್ರೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಸುವುದು ಮಾತ್ರ ಸಾಕಾಗಲ್ಲ. ಜೊತೆಗೆ ಸರ್ಕಾರ ನೀಡುತ್ತಿರುವ ಲಸಿಕೆ ಪಡೆಯಬೇಕಿದೆ. 18 ವರ್ಷ ಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆಯಬೇಕು ಎಂದು ಸರ್ಕಾರ ತಿಳಿಸಿದೆ.

  ಈ ಹಿನ್ನೆಲೆ ಈಗಾಗಲೇ ಹಲವು ಸೆಲೆಬ್ರಿಟಿಗಳು ಕೊರೊನಾ ವೈರಸ್ ಲಸಿಕೆ ಪಡೆದಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಅನಂತ್ ನಾಗ್, ಸಂಜಯ್ ದತ್ ಸೇರಿದಂತೆ ಅನೇಕರು ಲಸಿಕೆ ಪಡೆದಿದ್ದರು. ಇದೀಗ, ಕನ್ನಡದ ಕೆಲವು ಸ್ಟಾರ್ ನಟಿಯರು ಲಸಿಕೆ ಪಡೆದಿದ್ದು, ಜನಸಾಮಾನ್ಯರಿಗೆ ವ್ಯಾಕ್ಸಿನ್ ಪಡೆಯುವಂತೆ ವಿನಂತಿಸಿದ್ದಾರೆ. ಮುಂದೆ ಓದಿ...

  ಕೊರೊನಾ ಲಸಿಕೆ ಪಡೆದ ನಿಧಿ, ದೀಪಿಕಾ, ದಿವ್ಯಾ, ಶ್ವೇತಾಕೊರೊನಾ ಲಸಿಕೆ ಪಡೆದ ನಿಧಿ, ದೀಪಿಕಾ, ದಿವ್ಯಾ, ಶ್ವೇತಾ

  ವ್ಯಾಕ್ಸಿನ್ ಪಡೆದ ಧ್ರುವ ಸರ್ಜಾ

  ವ್ಯಾಕ್ಸಿನ್ ಪಡೆದ ಧ್ರುವ ಸರ್ಜಾ

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು ಕೊರೊನಾ ವೈರಸ್ ಲಸಿಕೆ ಪಡೆದುಕೊಂಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಧ್ರುವ ''ನೀವೂ ಕೂಡ ತಪ್ಪದೇ ವ್ಯಾಕ್ಸಿನೇಷನ್ ನ್ನು ಮಾಡಿಕೊಂಡು ಕೊವಿಡ್ ಮುಕ್ತ ಭಾರತ ನಿರ್ಮಾಣ ಮಾಡಲು ಸಹಕರಿಸಿ'' ಎಂದು ವಿನಂತಿಸಿದ್ದಾರೆ.

  ಸಂಜನಾ ಗಲ್ರಾನಿ

  ಸಂಜನಾ ಗಲ್ರಾನಿ

  ಇತ್ತೀಚಿಗಷ್ಟೆ ಹೈದರಾಬಾದ್‌ ಹಾಗೂ ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್‌ಗೆ ಸ್ಯಾನಿಟೈಸರ್, ಮಾಸ್ಕ್ ನೀಡಿ ಗಮನ ಸೆಳೆದಿದ್ದ ನಟಿ ಸಂಜನಾ ಗಲ್ರಾನಿ ಈಗ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

  ಹರ್ಷಿಕಾ ಪೂಣಚ್ಚ

  ಹರ್ಷಿಕಾ ಪೂಣಚ್ಚ

  ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿ, ಜನಸೇವೆಯಲ್ಲಿ ತೊಡಗಿಕೊಂಡಿರುವ ನಟಿ ಹರ್ಷಿಕಾ ಪೂಣಚ್ಚ ಸಹ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು. ಕ್ವಾರಂಟೈನ್ ಮಾಡಲಾಗಿದ್ದ ಮನೆಗಳಿಗೆ ಖುದ್ದು ದಿನಸಿ ತಲುಪಿಸಿದ್ದರು.

  ಪ್ರಾಣಿಗಳನ್ನು ದತ್ತು ಪಡೆದು ಕಾಪಾಡಿ ಎಂದು ಮನವಿ ಮಾಡಿಕೊಂಡ Darshan | Filmibeat Kannada
  ನಟಿ ಕೃತಿ ಕರಬಂಧ

  ನಟಿ ಕೃತಿ ಕರಬಂಧ

  ಕನ್ನಡ ಹಾಗೂ ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಿರುವ ನಟಿ ಕೃತಿ ಕರಬಂಧ ಸಹ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಫೋಟೋ ಹಂಚಿಕೊಂಡು ಲಸಿಕೆ ಪಡೆದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

  English summary
  Kannada Actress sanjjanaa galrani, dhruva sarja, kriti kharbanda, harshika poonacha reciveed Covid19 Vaccine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X