Sanjana Galrani: ತಲೆ ಬೋಳಿಸಿಕೊಂಡ ತುಂಬು ಗರ್ಭಿಣಿ ಸಂಜನಾ, ಕಾರಣ ಕೇಳಿದ್ರೆ ಹೃದಯ ಕರಗುತ್ತೆ!

ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಹೆಚ್ಚು ಸುದ್ದಿ ಆಗೋದು, ಸದ್ದು ಮಾಡೋದು ಎಲ್ಲವೂ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ. ಇನ್ನು ಸದ್ಯಕ್ಕೆ ಸಿನಿಮಾ ಅಭಿನಯ ಬಿಟ್ಟು ಸಂಜನಾ ತಮ್ಮ ಕೌಟುಂಬಿಕ ಜೀವನದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ತಮ್ಮ ಮನೆಯವರ ಜೊತೆಗೂ ಸಂಜನಾ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

Recommended Video

Sanjjanaa Galrani|ಜೀವನದಲ್ಲಿ ಒಳ್ಳೆದಿನಗಳ ಬಂತು ಅಂತ ಕೂದಲಿಗೆ ಕತ್ತರಿ ಹಾಕಿದ ಸಂಜನಾ | Filmibeat Kannada

ಸಂಜನಾ ಸಿನಿಮಾ ಮಾಡದೇ ಇದ್ದರು ಸೋಶಿಯಲ್ ಮೀಡಿಯಾದ ಮೂಲಕ ಅವರು ತಮ್ಮ ಅಭಿಮಾನಿಗಳಿಗೆ ಕನೆಕ್ಟ್ ಆಗಿ ಇರುತ್ತಾರೆ. ಸಂಜನಾ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಹಾಗಾಗಿ ಸಂಜನಾ ಆಗಾಗ ವಿಡಿಯೋ ಮಾಡಿ ಹಾಕುತ್ತಿರುತ್ತಾರೆ. ಆದರೆ ಈ ಬಾರಿ ಸಂಜನಾ ಒಂದು ಫೋಟೊ ಹಾಕಿ ಗಮನ ಸೆಳೆದಿದ್ದಾರೆ.

ನಟಿ ಸಂಜನಾ ಸಿನಿಮಾ ನಟಿಯರ ಪೈಕಿ, ಒಬ್ಬ ಗ್ಲಾಮರ್ ನಟಿ ಎನ್ನುವುದನ್ನು ಒಪ್ಪಲೇ ಬೇಕು. ಸಂಜನಾ ಮೊದಲ ಚಿತ್ರದಿಂದಲೂ ಕೂಡ ಸಿಕ್ಕಾ ಪಟ್ಟೆ ಗ್ಲಾಮರಸ್ ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ಈಗಲೂ ಕೂಡ ಸಂಜನಾ ಗ್ಲಾಮ್ ಲುಕ್‌ ಕಡಿಮೆ ಆಗಿಲ್ಲ. ಈಗ ಆಕೆ ತಮ್ಮ ತಲೆ ಕೂದಲನ್ನು ದಾನ ಮಾಡಿರುವ ಬೋಳು ತಲೆಯ ಫೋಟೋ ಹಾಕಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಸಂಜನಾ ಬೋಳು ತಲೆಯ ಫೋಟೊ ವೈರಲ್!

ಸಂಜನಾ ಬೋಳು ತಲೆಯ ಫೋಟೊ ವೈರಲ್!

ನಟಿ ಸಂಜನಾ ಗಲ್ರಾನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ಲುಕ್‌ನ ಫೋಟೊ ಒಂದನ್ನು ಹರಿ ಬಿಟ್ಟಿದ್ದಾರೆ. ಆದರೆ ಅದು ಮಾಮೂಲಿ ಫೋಟೊ ಅಲ್ಲ. ಈ ಫೋಟೊದಲ್ಲಿ ಸಂಜನಾ ತಲೆಯಲ್ಲಿ ಕೂದಲು ಇಲ್ಲ. ತಲೆ ಬೋಳಿಸಿಕೊಂಡ ಲುಕ್‌ನಲ್ಲಿ ಇದ್ದಾರೆ ಸಂಜನಾ. ಇದು ಲುಕ್ ಮಾತ್ರ ಅಲ್ಲ. ಸಂಜನಾ ತನ್ನ ತಲೆ ಕೂದಲನ್ನು ದಾನ ಮಾಡಿದ್ದಾರೆ. ಬಳಿಕ ಬೋಳು ತಲೆಯ ಫೋಟೊ ಹಂಚಿಕೊಂಡಿದ್ದಾರೆ. ಸಂಜನಾಳ ಈ ಲುಕ್ ಕಂಡವರು ಸಂಜನಾಗೆ ಏನಾಯ್ತು?. ಎಂದು ಅಚ್ಚರಿ ವ್ಯಕ್ತ ಪಡಿಸುತ್ತಿದ್ದಾರೆ.

ಸಂಜನಾ ಕೂದಲು ದಾನ ಮಾಡಿದ್ದು ಯಾಕೆ?

ನಟಿ ಸಂಜನ ಹೀಗೆ ತಮ್ಮ ತಲೆ ಕೂದಲನ್ನು ದಾನ ಮಾಡಲು ಕಾರಣ ಇದೆ. ಹಾಗಂತ ಆಕೆಗೆ ಯಾವುದೋ ಖಾಯಿಲೆ ಬಂದಿಲ್ಲ. ಬದಲಿಗೆ ತಾನೇ ಸ್ವಂತ ಇಚ್ಛೆಯಿಂದ ಕೂದಲು ದಾನ ಮಾಡಿದ್ದಾರೆ. ಸಂಜನಾ ಬದುಕಲ್ಲಿ ಈಗ ಉತ್ತಮವಾದ ಸಂಗತಿಗಳು ನಡೆಯುತ್ತಿವೆ ಅಂತೆ. ಹಾಗಾಗಿ ಅವರು ಸರ್ವ ಶಕ್ತಿಗೆ ಧನ್ಯವಾದ ಹೇಳಲು ಈ ರೀತಿ ಕೂದಲು ದಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಫೋಟೊ ಹಂಚಿಕೊಂಡ ನಟಿ ಸಂಜನಾ ಕಾರಣದ ಜೊತೆಗೆ, ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ.

ಭಾವುಕ ಸಂದೇಶ ಬರೆದ ಸಂಜನಾ ಗಲ್ರಾನಿ!

ಭಾವುಕ ಸಂದೇಶ ಬರೆದ ಸಂಜನಾ ಗಲ್ರಾನಿ!

ಸಂಜನಾ ತಮ್ಮ ಪೋಸ್ಟ್‌ನಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ. "ಸೌಂದರ್ಯವು ನೋಡುಗರ ದೃಷ್ಟಿಯಲ್ಲಿದೆ. ನಾನು ದೇವರಲ್ಲಿ ಇಟ್ಟ ನಂಬಿಕೆಯನ್ನು ಪೂರ್ಣಮಾಡಲು ನನ್ನ ತಲೆ ಕೂದಲನ್ನು ತ್ಯಾಗ ಮಾಡಿದ್ದೇನೆ ಎಂದಿದ್ದಾರೆ. ಅನೇಕ ಕಷ್ಟಗಳನ್ನು ದಾಟಿದ ನಂತರ, ಜೀವನವು ಮತ್ತೊಮ್ಮೆ ಸುಂದರವಾಗಿದೆ. ನನ್ನ ಜೀವನದ ಈ ಹಂತಕ್ಕಾಗಿ ನಾನು ದೇವರಿಗೆ ಎಷ್ಟೇ ಧನ್ಯವಾದ ಹೇಳಿದರು ಸಾಲದು. ಇದು ನನ್ನ ಸಾಮಾಜಿಕ ಮಾಧ್ಯಮದ ಕೆಲಸದ ಅನುಮೋದನೆಗಾಗಿ ಅಥವಾ ನನ್ನ ಜೀವನದಲ್ಲಿ ಶೀಘ್ರದಲ್ಲೇ ಬರಲಿರುವ ಮಗುವಿಗಾಗಿ. ಈ ಮೂಲಕ ನಾನು ನನ್ನ ಕೃತಜ್ಞತೆ ಸಲ್ಲಿಸುತ್ತೇನೆ. ಜೈ ಶ್ರೀ ಕೃಷ್ಣ, ಅಹಂ ಬ್ರಹ್ಮಾಸ್ಮಿ".

ಮಗುವಿನ ನಿರೀಕ್ಷೆಯಲ್ಲಿ ನಟಿ ಸಂಜನಾ!

ಮಗುವಿನ ನಿರೀಕ್ಷೆಯಲ್ಲಿ ನಟಿ ಸಂಜನಾ!

ನಟಿ ಸಂಜನಾ ಗಲ್ರಾನಿ ಈಗ 8 ತಿಂಗಳ ತುಂಬು ಗರ್ಭಿಣಿ. ಸದ್ಯ ಮಗುವಿನ ನಿರೀಕ್ಷೆಯಲ್ಲಿ ಸಂಜನಾ ಕಾಯುತ್ತಾ ಇದ್ದಾರೆ. ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡ ಸಂಜನಾ ಈಗ ಸಂತಸದಿಂದ ಕುಟುಂಬದ ಜೊತೆಗೆ ಕಾಲ ಕಳೆಯುತ್ತಾ ಇದ್ದಾರೆ. ಇನ್ನು ಒಂದು ತಿಂಗಳಲ್ಲಿ ಸಂಜನಾ ಮಗು ಜನ್ಮ ಪಡೆಯಲಿದೆ. ಆ ಬಳಿಕಾ ಮತ್ತೆ ಸಂಜನಾ ಸಿನಿಮಾಗಳಲ್ಲಿ ಅಭಿನಯಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

More from Filmibeat

English summary
Actress Sanjjanaa Galrani Become Bald, What Happens To Pregnant Lady Sanjana,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X