ಮಗುವಿನೊಂದಿಗೆ ಮನೆಗೆ ಬಂದ ಸಂಜನಾ, ಮಗುವಿಗೆ ಯಾವ ಹೆಸರು ಇಡ್ತಾರೆ?
ನಟಿ ಸಂಜನಾ ಗಲ್ರಾನಿ ಇತ್ತೀಚಿಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಂಜನಾ ಕೊನೆಗೂ ತಮ್ಮ ಮಗುವನ್ನು ಅಪ್ಪಿ ಮುದ್ದಾಡಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಬೇಬಿ ಬಂಪ್ ಪೋಟೊಶೂಟ್ ಮಾಡಿ ಸುದ್ದಿಯಲ್ಲಿದ್ದ ನಟಿ ಸಂಜನಾ ಈಗ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಮೊದಲ ಚಿತ್ರದಲ್ಲೇ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಮನ ಗೆದ್ದಿದ್ದರು. ಆ ಮೂಲಕ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಮಿಂಚಿದ್ದರು. ಕಳೆದ ಎರಡು ವರ್ಷದ ಹಿಂದೆ ಆಜೀಜ್ ಪಾಷಾರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಈ ವಿಷಯವನ್ನು ತಡವಾಗಿ ಬಹಿರಂಗ ಪಡಿಸಿ ಭಾರೀ ಚರ್ಚೆಯಾಗಿದ್ದರು.
ಸದ್ಯ ಈಗ ನಟಿ ಸಂಜನಾ ತಾಯ್ತನದ ಸಂಭ್ರಮದಲ್ಲಿದ್ದಾರೆ. ತಮ್ಮ ಇಚ್ಚೆಯಂತೆಯೇ ಗಂಡು ಮಗುವಿಗೆ ಜನ್ಮ ನೀಡಿರುವ ನಟಿ ಸಂಜನಾ ಪುಟ್ಟ ಕಂದನ ಜೊತೆಗೆ ತಮ್ಮ ಮನೆಗೆ ವಾಪಾಸ್ ಆಗಿದ್ದಾರೆ. ಮನೆಗೆ ಮಗನನ್ನು ತುಂಬಿಸಿಕೊಳ್ಳುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನಟಿ ಶೇರ್ ಮಾಡಿಕೊಂಡು ಭಾವುಕವಾಗಿ ಬರೆದುಕೊಂಡಿದ್ದಾರೆ.

ಆರತಿ ಬೆಳಗಿ ಮಗುವನ್ನು ಬರ ಮಾಡಿಕೊಂಡ ಕುಟುಂಬ
ಚಂದನವನದ ನಟಿ ಸಂಜನಾ ತಮ್ಮ ಬೋಲ್ಡ್ ನಟನೆ ಮೂಲಕ ಪ್ರಸಿದ್ದರಾಗಿದ್ದರು. ಸದ್ಯ ಕಳೆದ ಎರಡು ವರ್ಷಗಳಿಂದ ಅವರು ನಟನೆಯಿಂದ ಕೊಂಚ ದೂರ ಉಳಿದಿದ್ದು, ಕುಟುಂಬದ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಈಗ ತಾಯಿಯಾಗಿರುವ ಸಂಭ್ರಮದಲ್ಲಿರುವ ಅವರು ತಮ್ಮ ಮೊದಲ ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಇನ್ನು ಸಂಜನಾ ಕುಟುಂಬಸ್ಥರು ಮಗು ಹಾಗೂ ಸಂಜನಾಗೆ ಆರತಿ ಬೆಳಗಿ ಮನೆಗೆ ಬರಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ತಾಯ್ತತನದ ಸಂಭ್ರಮದಲ್ಲಿ ಸಂಜನಾ
ನಟಿ ಸಂಜನಾ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿಯೇ ಇದ್ದ ಸಂಜನಾ ತಮ್ಮ ಮಗುವಿನ ಬಗ್ಗೆ ಭಾವುಕವಾಗಿ ಇಲ್ಲಿ ಬರೆದುಕೊಂಡಿದ್ದಾರೆ. "ಈ ನಾಲ್ಕು ದಿನಗಳಿಂದ ನನ್ನ ಬದುಕು ಸಂಪೂರ್ಣವಾಗಿ ಬದಲಾಗಿದೆ. ನನ್ನ ಪುಟ್ಟ ಗೂಡಿಗೆ ನನ್ನ ಮಗು, ನನ್ನ ಜೀವನದಲ್ಲಿ ಸೃಷ್ಟಿಸಿದ ಸುಂದರ ಶಕ್ತಿ ಈ ಪುಟ್ಟ ಕಂದಮ್ಮಗೆ ಸ್ವಾಗತ. ಮಾತೃತ್ವ ಮತ್ತು ರಕ್ಷಣೆಯ ಕಡೆಗೆ ನನ್ನ ಪಯಣ." ಎಂದು ಮಗುವಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ತಾಯಿಯಾದ ನಟಿ ಸಂಜನಾ ಗಲ್ರಾನಿ
ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಬೇಬಿ ಬಂಪ್ ಪೋಟೊಶೂಟ್ ಹಾಗೂ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದರು. ಇದಾದ ಬಳಿಕ ಮೇ 20 ರಂದು ನಟಿ ಸಂಜನಾ ಗಲ್ರಾನಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಸಂಜನಾ ವ್ಯಕ್ತಪಡಿಸಿದ್ದರು.

ಫ್ಯಾನ್ಸ್‌ಗೆ ಸಂಜನಾ ಮಗು ಹೆಸರಿನ ಮೇಲೆ ಕುತೂಹಲ
ನಟಿ ಸಂಜನಾ ತಮ್ಮ ಮೊದಲ ಮಗುವಾಗಿರುವ ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಸದ್ಯ ಈಗ ಆಸ್ಪತ್ರೆಯಿಂದ ಮಗುವನ್ನು ಮನಗೆ ಕರೆದುಕೊಂಡು ಬಂದಿದ್ದು, ಅದರ ಲಾಲನೆ ಪಾಲನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ನಡುವೆಯೇ ಸೋಶಿಯಲ್ ಮೀಡಿಯಾದಲ್ಲಿ ಸಂಜನಾ ತಮ್ಮ ಮಗುವಿಗೆ ಯಾವ ಸಂಪ್ರದಾಯದ ಹೆಸರು ಇಡಬಹುದು ಎಂಬ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಏಕೆಂದರೆ, ಸಂಜನಾಗೆ ಇತ್ತೀಚಿಗೆ ಹಿಂದೂ ಹಾಗೂ ಮುಸ್ಲಿಂ ಎರಡು ಸಂಪ್ರದಾಯದಂತೆ ಸೀಮಂತ ಕಾರ್ಯ ಮಾಡಲಾಗಿತ್ತು. ಹೀಗಾಗಿ ಹುಟ್ಟಿದ ಮಗುವಿಗೆ ಯಾವ ಹೆಸರು ಇಡಬಹುದು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.


Click it and Unblock the Notifications











