For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ ಆರೋಪಿ ಸಂಜನಾ ಗಲ್ರಾನಿಗೆ ಜಾಮೀನು: ಮೂರು ಷರತ್ತು

  |

  ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತರಾಗಿದ್ದ ನಟಿ ಸಂಜನಾ ಗಲ್ರಾನಿಗೆ ರಾಜ್ಯ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 8 ರಂದು ಸಂಜನಾ ಗಲ್ರಾನಿ ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಸಂಜನಾ ಗಲ್ರಾನಿಯನ್ನು ವಿಚಾರಣೆಗೆ ಕರೆದು, ನಂತರ ಬಂಧಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿಯ ಬಂಧನವಾದ ಕೆಲವು ದಿನಗಳ ಬಳಿಕ ನಟಿ ಸಂಜನಾ ಬಂಧನವಾಗಿತ್ತು.

  ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧದಲ್ಲಿದ್ದ ಸಂಜನಾ ಗಲ್ರಾನಿಗೆ ಇದೀಗ ರಾಜ್ಯ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ನಟಿ ಸಂಜನಾ ಗಲ್ರಾನಿ ಬರೋಬ್ಬರಿ 85 ದಿನಗಳ ಕಾಲ ಜೈಲಿನಲ್ಲಿ ವಾಸವಿದ್ದರು.

  ನಿನ್ನೆ (ಗುರುವಾರ) ಸಹ ಸಂಜನಾ ರ ಜಾಮೀನು ಅರ್ಜಿಯ ವಿಚಾರಣೆ ನಡೆದಿತ್ತು, ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಹಲವು ಪ್ರಯತ್ನಗಳ ಬಳಿಕ ಇಂದು ಸಂಜನಾ ಗೆ ಜಾಮೀನು ದೊರೆತಿದೆ. ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಗಿಂತಲೂ ಕೆಲ ದಿನ ಮುಂಚೆ ಬಂಧನಕ್ಕೆ ಒಳಗಾಗಿದ್ದ ನಟಿ ರಾಗಿಣಿ ದ್ವಿವೇದಿಗೆ ಈ ವರೆಗೆ ಜಾಮೀನು ದೊರೆತಿಲ್ಲ.

  ಮೂರು ಷರತ್ತು

  ಮೂರು ಷರತ್ತು

  ಮೂರು ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಇಬ್ಬರ ಶ್ಯೂರಿಟಿ ನೀಡುವುದರ ಜೊತೆಗೆ. ಪ್ರತಿ ತಿಂಗಳು ಎರಡು ಬಾರಿ ಪೊಲೀಸ್ ಠಾಣೆಗೆ ಹಾಜರಾಗಬೇಕು ಹಾಗೂ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಕಾರ್ಯ ಮಾಡದೆ ವಿಚಾರಣೆಗೆ ಸಹಕರಿಸಬೇಕು ಎಂಬ ಷರತ್ತು ವಿಧಿಸಿ ಸಂಜನಾಗೆ ಜಾಮೀನು ಮಂಜೂರು ಮಾಡಲಾಗಿದೆ.

  ಆರೋಗ್ಯ ಸ್ಥಿತಿ ಆಧರಿಸಿ ಜಾಮೀನು ನೀಡುವಂತೆ ಮನವಿ

  ಆರೋಗ್ಯ ಸ್ಥಿತಿ ಆಧರಿಸಿ ಜಾಮೀನು ನೀಡುವಂತೆ ಮನವಿ

  ಈ ಹಿಂದೆ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ರದ್ದಾಗಿದ್ದ ಕಾರಣ ಈ ಬಾರಿ ಆರೋಗ್ಯ ಸ್ಥಿತಿಯ ಆಧಾರದ ಮೇಲೆ ಜಾಮೀನು ನೀಡುವಂತೆ ಸಂಜನಾ ಗಲ್ರಾನಿ ನ್ಯಾಯಾಲಯದ ಮೊರೆ ಹೋಗಿದ್ದರು. ಸಂಜನಾ ಅವರ ಆರೋಗ್ಯ ವರದಿಯನ್ನು ಇಂದು ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದರು.

  'ಜೈಲು ಅಧಿಕಾರಿಗಳಿಗೆ ಆದೇಶ ಮುಟ್ಟಿಸಿ'

  'ಜೈಲು ಅಧಿಕಾರಿಗಳಿಗೆ ಆದೇಶ ಮುಟ್ಟಿಸಿ'

  ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ ಹರಿಕುಮಾರ್ ಅವರು ಮೂರು ಷರತ್ತುಗಳ್ನು ವಿಧಿಸಿ ಜಾಮೀನು ಮಂಜೂರು ಮಾಡಿದ್ದು. ಆದೇಶವನ್ನು ಶೀಘ್ರವಾಗಿ ಜೈಲು ಅಧಿಕಾರಿಗಳಿಗೆ ತಲುಪಿಸುವಂತೆ ಹೇಳಿದರು.

  ಸಲಾರ್ ಗೆ ಎಂಟ್ರಿ ಕೊಡಲಿದ್ದಾರೆ ಬಾಲಿವುಡ್ ಬೆಡಗಿ | Disha Patani | Filmibeat Kannada
  ಸಂಜನಾ ಪರ ಹಸ್ಮತ್ ಪಾಷಾ ವಕಾಲತ್ತು

  ಸಂಜನಾ ಪರ ಹಸ್ಮತ್ ಪಾಷಾ ವಕಾಲತ್ತು

  ಹಿರಿಯ ವಕೀಲ ಹಸ್ಮತ್ ಪಾಷಾ ಸಂಜನಾ ಗಲ್ರಾನಿ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಸಂಜನಾ ಗಲ್ರಾನಿ ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.

  English summary
  Actress Sanjjanaa Galrani who arrested by CCB in Drugs case was granted bail by Karnataka high court.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X