ಆಸ್ಪತ್ರೆಗೆ ದಾಖಲಾದ ಸಂಜನಾ: 'ಈ ಹಿಂದಿಗಿಂತಲೂ ಬಲವಾಗಿ ಮರಳಲು ಚೇತರಿಸಿಕೊಳ್ಳುತ್ತಿದ್ದೇನೆ'

ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಜೈಲಿನಿಂದ ಹೊರಬಂದ ಮೇಲೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ನಟಿ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Recommended Video

ಡ್ರಗ್ಸ್ ಪ್ರಕರಣದ ಬಗ್ಗೆ ಅಭಿಮಾನಿಗಳಿಗೆ ಸ್ಪಷ್ಟನೆಕೊಟ್ಟ ಸಂಜನಾ ಗಲ್ರಾನಿ | Filmibeat Kannada

ಆದರೆ, ಯಾವ ಆಸ್ಪತ್ರೆ ಯಾವ ಕಾರಣಕ್ಕಾಗಿ ಎನ್ನುವುದು ತಿಳಿದಿಲ್ಲ. ಆಸ್ಪತ್ರೆ ಬೆಡ್‌ ಮೇಲೆ ಮಲಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂಜನಾ ''ಈ ಹಿಂದಿಗಿಂತಲೂ ಬಲವಾಗಿ ಮರಳಲು ಚೇತರಿಸಿಕೊಳ್ಳುತ್ತಿದ್ದೇನೆ'' ಎಂದು ಪೋಸ್ಟ್ ಹಾಕಿದ್ದಾರೆ.

ಜೈಲಿನಿಂದ ಹೊರಬಂದ ಬಳಿಕ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ. ಕಳೆದ ವಾರ ಇನ್ಸ್ಟಾಗ್ರಾಂನಲ್ಲಿ ಲೈವ್‌ಗೆ ಬಂದಿದ್ದ ಸಂಜನಾ ತಮ್ಮ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದರು.

Actress sanjjanaa galrani Shared Photos from Hospital?

ಡ್ರಗ್ಸ್ ಜಾಲದ ಸಂಬಂಧ ನಟಿ ಸಂಜನಾ 2020ರ ಸೆಪ್ಟೆಂಬರ್ 8 ರಂದು ಜೈಲು ಪಾಲಾಗಿದ್ದರು. ಸುಮಾರು 90 ದಿನಗಳ ನಂತರ ಅಂದರೆ ಡಿಸೆಂಬರ್ 12ರಂದು ಸಂಜನಾ ಅನಾರೋಗ್ಯದ ಕಾರಣದಿಂದ ವೈದ್ಯಕೀಯ ಆಧಾರದ ಮೇಲೆ ಜಾಮೀನು ಮಂಜೂರು ಮಾಡಲಾಯಿತು.

More from Filmibeat

English summary
Kannada Actress sanjjanaa galrani hospitalized and she shared photo from Hospital?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X