For Quick Alerts
  ALLOW NOTIFICATIONS  
  For Daily Alerts

  ಆಸ್ಪತ್ರೆಗೆ ದಾಖಲಾದ ಸಂಜನಾ: 'ಈ ಹಿಂದಿಗಿಂತಲೂ ಬಲವಾಗಿ ಮರಳಲು ಚೇತರಿಸಿಕೊಳ್ಳುತ್ತಿದ್ದೇನೆ'

  |

  ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಜೈಲಿನಿಂದ ಹೊರಬಂದ ಮೇಲೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ನಟಿ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  ಡ್ರಗ್ಸ್ ಪ್ರಕರಣದ ಬಗ್ಗೆ ಅಭಿಮಾನಿಗಳಿಗೆ ಸ್ಪಷ್ಟನೆಕೊಟ್ಟ ಸಂಜನಾ ಗಲ್ರಾನಿ | Filmibeat Kannada

  ಆದರೆ, ಯಾವ ಆಸ್ಪತ್ರೆ ಯಾವ ಕಾರಣಕ್ಕಾಗಿ ಎನ್ನುವುದು ತಿಳಿದಿಲ್ಲ. ಆಸ್ಪತ್ರೆ ಬೆಡ್‌ ಮೇಲೆ ಮಲಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂಜನಾ ''ಈ ಹಿಂದಿಗಿಂತಲೂ ಬಲವಾಗಿ ಮರಳಲು ಚೇತರಿಸಿಕೊಳ್ಳುತ್ತಿದ್ದೇನೆ'' ಎಂದು ಪೋಸ್ಟ್ ಹಾಕಿದ್ದಾರೆ.

  ಕಷ್ಟದ ಸಮಯದಲ್ಲೂ ಜೊತೆಯಲ್ಲಿ ನಿಂತ ಅಭಿಮಾನಿಗಳು ಮತ್ತು ಸ್ನೇಹಿತರಿಗೆ ಸಂಜನಾ ಪ್ರೀತಿಯ ಸಂದೇಶಕಷ್ಟದ ಸಮಯದಲ್ಲೂ ಜೊತೆಯಲ್ಲಿ ನಿಂತ ಅಭಿಮಾನಿಗಳು ಮತ್ತು ಸ್ನೇಹಿತರಿಗೆ ಸಂಜನಾ ಪ್ರೀತಿಯ ಸಂದೇಶ

  ಜೈಲಿನಿಂದ ಹೊರಬಂದ ಬಳಿಕ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ. ಕಳೆದ ವಾರ ಇನ್ಸ್ಟಾಗ್ರಾಂನಲ್ಲಿ ಲೈವ್‌ಗೆ ಬಂದಿದ್ದ ಸಂಜನಾ ತಮ್ಮ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದರು.

  ಡ್ರಗ್ಸ್ ಜಾಲದ ಸಂಬಂಧ ನಟಿ ಸಂಜನಾ 2020ರ ಸೆಪ್ಟೆಂಬರ್ 8 ರಂದು ಜೈಲು ಪಾಲಾಗಿದ್ದರು. ಸುಮಾರು 90 ದಿನಗಳ ನಂತರ ಅಂದರೆ ಡಿಸೆಂಬರ್ 12ರಂದು ಸಂಜನಾ ಅನಾರೋಗ್ಯದ ಕಾರಣದಿಂದ ವೈದ್ಯಕೀಯ ಆಧಾರದ ಮೇಲೆ ಜಾಮೀನು ಮಂಜೂರು ಮಾಡಲಾಯಿತು.

  English summary
  Kannada Actress sanjjanaa galrani hospitalized and she shared photo from Hospital?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X