ಕುಟುಂಬದ ಜೊತೆಗೆ ಶಬರಿಮಲೆಗೆ ಹೋಗುತ್ತೇನೆ ಎಂದ ಸಂಜನಾ

Recommended Video

ಶಬರಿಮಲೆಗೆ ಹೋಗ್ತಾರಂತೆ ಸಂಜನಾ..! | Filmibeat Kannada

''ಮಹಿಳೆಯರು ಕೂಡ ಶಬರಿಮಲೆಗೆ ಹೋಗಬಹುದು, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಬಹುದು, ಒಬ್ಬ ಮಹಿಳೆಯ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಯಾರು ಕಿತ್ತುಕೊಳ್ಳಬಾರದು'' ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಈ ತೀರ್ಪನ್ನು ಸ್ವಾಗತ ಮಾಡಿರುವ ನಟಿ ಸಂಜನಾ ಅದರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡಿರುವ ಅವರು ''ನಾನು ಕೂಡ ನಮ್ಮ ಕುಟುಂಬ ಜೊತೆಗೆ ಶಬರಿಮಲೆಗೆ ಹೋಗುತ್ತೇನೆ'' ಎಂದಿದ್ದಾರೆ.

ಶಬರಿಮಲೆ ತೀರ್ಪು LIVE: ಸುಪ್ರೀಂನಿಂದ ಮತ್ತೊಂದು ಐತಿಹಾಸಿಕ ತೀರ್ಪು

''ನಾನು ಚಿಕ್ಕ ವಯಸ್ಸಿನಲ್ಲಿ ಇರುವಾಗ ಯಾರೂ ನನ್ನನ್ನು ಶಬರಿಮಲೆಗೆ ಕರೆದುಕೊಂಡು ಹೋಗಿರಲಿಲ್ಲ. ನಾನು ಧರ್ಮಸ್ಥಳ, ತಿರುಪತಿ, ಶಿರಡಿ ಹೀಗೆ ಎಲ್ಲ ಕಡೆ ತೆರಳಿದ್ದೇನೆ. ಆದರೆ, ನಮಗೆ ಶಬರಿಮಲೆಗೆ ಹೋಗಲು ಅವಕಾಶ ಇರಲಿಲ್ಲ. ಈಗ ತೀರ್ಪು ಬಂದ ಬಳಿಕ ನಾನು ಖಂಡಿತ ನನ್ನ ಕುಟುಂಬ ಜೊತೆಗೆ ಶಬರಿಮಲೆಗೆ ಹೋಗುತ್ತೇನೆ.'' ಎಂದು ಸಂಜನಾ ಪ್ರತಿಕ್ರಿಯೆ ನೀಡಿದ್ದಾರೆ.

actress sanjjanaa reaction about sc verdict on sabarimalai temple issue

ಅಂದಹಾಗೆ, ಕೇರಳದ ಪ್ರಸಿದ್ಧ ದೇವಾಲಯವಾದ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ, ಸುಪ್ರೀಂ ಕೋರ್ಟ್ ಮಹತ್ವದ ಇಂದು ತೀರ್ಪು ನೀಡಿದೆ.

ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ತೀರ್ಪು: ಸಚಿವೆ ಜಯಮಾಲಾ ಸ್ವಾಗತ

ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳು ದೇವಾಲಯದ ಆವರಣಕ್ಕೆ ಪ್ರವೇಶಿಸಿದರೆ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬು ವಾದವಾಗಿತ್ತು. ಆದರೆ, ಇದು ಒಬ್ಬ ಮಹಿಳೆಯ ಧಾರ್ಮಿಕ ಸ್ವಾತಂತ್ರ್ಯದ ದಕ್ಕೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.

More from Filmibeat

English summary
actress sanjjanaa reaction about sc verdict on sabarimalai temple issue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X