»   » 'ಡೆಡ್ಲಿ ಡೇಂಜರಸ್' ಆದ ಹಾಟ್ ಹುಡುಗಿ ಸಂಜನಾ

'ಡೆಡ್ಲಿ ಡೇಂಜರಸ್' ಆದ ಹಾಟ್ ಹುಡುಗಿ ಸಂಜನಾ

Posted By:
Subscribe to Filmibeat Kannada

ನಟಿ ಸಂಜನಾ ಈಗ ಮೊದಲಿನಂತಿಲ್ಲ. ಹಿಂದಿನಂತೆ ಹಾಟ್ ಅಂಡ್ ಹ್ಯಾಪೆನ್ನಿಂಗ್ ಲುಕ್ ನಲ್ಲಿ ಸಂಜನಾ ಕಾಣಿಸಿಕೊಳ್ಳುತ್ತಿಲ್ಲ. ನೀವು ದಿಗಿಲು ಬೀಳುವ ಹಾಗೆ, ಸಂಜನಾ ಮೇಕ್ ಓವರ್ ಮಾಡಿಕೊಂಡಿದ್ದಾರೆ. ಕನಸಲ್ಲೂ ನೀವು ಬೆಚ್ಚಿ ಬೀಳಬೇಕು ಅಂತಹ ಗೆಟಪ್ ನಲ್ಲಿ 'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಕಂಡು ಬಂದಿದ್ದಾರೆ.

ಸದಾ ಮೇಕಪ್ ಧರಿಸಿ ಪೋಸ್ ಕೊಡುವುದರಲ್ಲೇ ಬಿಜಿಯಾಗಿರುವ ಸಂಜನಾಗೆ ಇದಕ್ಕಿದ್ದಂತೆ ಏನಾಯ್ತು ಅಂತ ಗಾಬರಿ ಪಡಬೇಡಿ. ಹಾಗೆ, ಸಂಜನಾ 'ಡೇಂಜರಸ್' ಗೆಟಪ್ ತಾಳಿರುವುದು ಹೊಸ ಚಿತ್ರಕ್ಕೋಸ್ಕರ.

'ಶಿ ಈಸ್ ಡೆಡ್ಲಿ ಡೇಂಜರಸ್' ಅನ್ನುವ ಹಾರರ್ ಸಿನಿಮಾಗೆ ಸಂಜನಾ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅದಕ್ಕಾಗಿ ಡೆಡ್ಲಿ ಚೇಂಜ್ ಓವರ್ ಮಾಡಿಸಿಕೊಂಡಿರುವ ಸಂಜನಾ ಚಿತ್ರದಲ್ಲಿ ಕಾಣುವುದು ಹೀಗೆ.....

Actress Sanjjanna's Dangerous look

ಹೌದು, 'ಶಿ ಈಸ್ ಡೆಡ್ಲಿ ಡೇಂಜರಸ್' ಚಿತ್ರದಲ್ಲಿರುವ ಸಂಜನಾರ ಫಸ್ಟ್ ಲುಕ್ ಇದು. ತಮ್ಮ ಕೆರಿಯರ್ ನಲ್ಲೇ ಹಿಂದೆಂದೂ ಅಭಿನಯಿಸದ ಆಂಗ್ಲೋ ಇಂಡಿಯನ್ ಹುಡುಗಿಯ ಪಾತ್ರ ನಿಭಾಯಿಸುತ್ತಿದ್ದಾರೆ ನಟಿ ಸಂಜನಾ. [ಬಾಲಿವುಡ್ಡಿಗೆ ಹಾರಲಿದ್ದಾರಾ ಹಾಟ್ ಹುಡುಗಿ ಸಂಜನಾ?]

ಪರ್ಫಾಮೆನ್ಸ್ ಗೆ ಹೆಚ್ಚು ಆದ್ಯತೆ ಇರುವ ಈ ಹಾರರ್ ಚಿತ್ರದಲ್ಲಿ ಸ್ಯಾಂಡಲ್ ವುಡ್ ಇತಿಹಾಸದಲ್ಲೇ ಯಾವೊಬ್ಬ ನಟಿಗೂ ಸಿಗದ ಪಾತ್ರ ನಟಿ ಸಂಜನಾಗೆ ಸಿಕ್ಕಿದ್ಯಂತೆ. ಹಾಗಂತ ಹೆಮ್ಮೆ ಇಂದ ಹೇಳಿಕೊಳ್ಳುವ ಸಂಜನಾ, 'ಡೇಂಜರಸ್' ಆಗುವುದಕ್ಕೆ ಸಿಕ್ಕಾಪಟ್ಟೆ ತಯಾರಿ ನಡೆಸಿದ್ದಾರಂತೆ.

Actress Sanjjanna's Dangerous look

ಈ ಹಿಂದೆ ನಟ ಪ್ರಜ್ವಲ್ ದೇವರಾಜ್ ಗೆ 'ಗೋಕಲ ಕೃಷ್ಣ' ಚಿತ್ರವನ್ನ ನಿರ್ಮಾಣ ಮಾಡಿದ್ದ ಶೇಖರ್ ಗೌಡ, 'ಶೀ ಈಸ್ ಡೆಡ್ಲಿ ಡೇಂಜರಸ್' ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಹಾರರ್ ಚಿತ್ರವಾದ್ದರಿಂದ ಗ್ರಾಫಿಕ್ಸ್ ಬಳಕೆ ಹೆಚ್ಚಾಗಿರಲಿದ್ಯಂತೆ. ಹೈ ಬಜೆಟ್ ನಲ್ಲಿ ಚಿತ್ರ ರೆಡಿಯಾಗಲಿದೆ. [ಸ್ಯಾಂಡಲ್ ವುಡ್ ಬೆಡಗಿಯರು ಯಾರಿಗೇನು ಕಮ್ಮಿ: ಸಂಜನಾ]

ಇದೇ ಖುಷಿಯಲ್ಲಿ ಹೊಸ ಗೆಟಪ್ ಟ್ರೈ ಮಾಡಿ ಸಂಜನಾ ಫೋಟೋಶೂಟ್ ಮಾಡಿಸಿದ್ದಾರೆ. ಮಾಡ್ ಆಗಿದ್ದರೂ ತೆರೆಮೇಲೆ 'ಡೇಂಜರಸ್' ಆಗಿ ಕಾಣ್ತಾರೆ ಅನ್ನೋದಕ್ಕೆ ಈ ಫೋಟೋಗಳಿಗಿಂತ ಬೇರೆ ಉದಾಹರಣೆ ಬೇಕಾ...?!

English summary
Actress Sanjjanna Galrani is roped into play a lead role in a Horror Movie called 'She Is Deadly Dangerous'. Sanjjanna's Deadly look in the movie is out. Check out the Pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada