ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ರೈಲಿನಲ್ಲೇ ಬುದ್ದಿ ಕಲಿಸಿದ ನಟಿ

By Pavithra

Recommended Video

ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ರೈಲಿನಲ್ಲೇ ಬುದ್ದಿ ಕಲಿಸಿದ ನಟಿ | Filmibeat Kannada

ಸಿನಿಮಾರಂಗದಲ್ಲಿನ ನಟಿಯರ ಮೇಲೆ ಲೈಂಗಿಕ ಕಿರುಕುಳದ ಪ್ರಕರಣಗಳು ದಿನೆ ದಿನೇ ಹೆಚ್ಚಾಗುತ್ತಿವೆ. ಇತ್ತೀಚಿಗಷ್ಟೆ ಕನ್ನಡದ ನಟಿ ಶೃತಿ ಹರಿಹರನ್ ಈ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದರು. ಅದಾದ ನಂತರ ನಟಿ ಅಮಲಾ ಪೌಲ್ ಅವರ ಮೇಲೆಯೂ ಲೈಂಗಿಕ ಕಿರುಕುಳವಾಗಿತ್ತು.

ತನ್ನ ಬಳಿ ಕೆಟ್ಟದಾಗಿ ವರ್ತನೆ ಮಾಡಿದ್ದ ಕಾಮುಕನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದರು ನಟಿ ಅಮಲಾ ಪೌಲ್. ಪೊಲೀಸರು ಕೂಡಲೆ ಕ್ರಮ ತೆಗೆದುಕೊಂಡು ಕಾಮುಕನನ್ನು ಅರೆಸ್ಟ್ ಮಾಡಿದ್ದರು.

ಈ ಪ್ರಕರಣಗಳು ಇನ್ನು ಕಣ್ಣುಮುಂದೆ ಇರುವಾಗಲೇ ಮತ್ತೋರ್ವ ಖ್ಯಾತಿ ನಟಿಯ ಮೇಲೆ ಲೈಂಗಿಕ ಕಿರುಕುಳ ಆಗಿರುವ ಪ್ರಕರಣ ಬೆಳಕಿಗೆ ಬಂದಿದ್ದೆ. ಈ ಬಾರಿ ಲೈಂಗಿಕ ಕಿರುಕುಳ ಆಗಿರುವುದು ಕನ್ನಡ ಹಾಗೂ ಮಲೆಯಾಳಂನ ಖ್ಯಾತ ನಟಿ ಸನೂಷಾ ಅವರ ಮೇಲೆ. ಇದರಿಂದ ಕೋಪಗೊಂಡ ನಟಿ ಸನೂಷಾ ಕಾಮುಕನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕಾಮುಕನನ್ನ ಅರೆಸ್ಟ್ ಮಾಡಿ ಕಂಬಿ ಎಣಿಸುವಂತೆ ಮಾಡಿದ್ದಾರೆ. ಮುಂದೆ ಓದಿ

ನಟಿ ಸನೂಷಾಗೆ ಲೈಂಗಿಕ ಕಿರುಕುಳ

ನಟಿ ಸನೂಷಾಗೆ ಲೈಂಗಿಕ ಕಿರುಕುಳ

ಸಂತೆಯಲ್ಲಿ ನಿಂತ ಕಬೀರ ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರನ್ನ ರಂಜಿಸಿದ್ದ ನಟಿ ಸನೂಷಾ ಅವರಿಗೆ ಲೈಂಗಿಕ ಕಿರುಕುಳ ಉಂಟಾಗಿದೆ. ಮಂಗಳೂರಿನಿಂದ ತಿರುವಂತಪುರಂ ಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ.

ಪ್ರಯಾಣಿಕರ ಕೈಗೆ ಸಿಕ್ಕಿ ಬಿದ್ದ ಕಾಮುಕ

ಪ್ರಯಾಣಿಕರ ಕೈಗೆ ಸಿಕ್ಕಿ ಬಿದ್ದ ಕಾಮುಕ

ನಟಿ ಸನೂಷಾ ರಾತ್ರಿ ವೇಳೆಯಲ್ಲಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಇದೇ ವೇಳೆಗೆ ಅವರ ಬಳಿ ಬಂದಿರುವ ಕಾಮುಕ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಅದೇ ಸಮಯದಲ್ಲಿ ಉಪಾಯ ಮಾಡಿದ ಸನೂಷಾ ಕಾಮುಕನ ಕೈ ಹಿಡಿದುಕೊಂಡು ಜೋರಾಗಿ ಕೂಗಿಕೊಂಡಿದ್ದಾರೆ. ನಂತರ ಪ್ರಯಾಣಿಕರ ಸಹಾಯದಿಂದ ಕಾಮುಕನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.

ಕಂಬಿ ಹಿಂದೆ ಕಾಮುಕ

ಕಂಬಿ ಹಿಂದೆ ಕಾಮುಕ

ಪ್ರಯಾಣಿಕರು ಸಹಾಯದಿಂದ ಕಾಮುಕನನ್ನು ರೈಲ್ವೇ ಪೊಲೀಸರಿಗೆ ಹಿಡುದುಕೊಟ್ಟಿದ್ದಾರೆ. ವಿಚಾರಣೆ ವೇಳೆಯಲ್ಲಿ ರಾತ್ರಿಯಲ್ಲಿ ಪ್ರಯಾಣ ಮಾಡುವ ಮಹಿಳೆಯರಿಗೆ ಈತ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ.

ಸನೂಷ ಸಂತೋಷ್ ಸಾಹಸವನ್ನ ಮೆಚ್ಚಿನ ಚಿತ್ರರಂಗ

ಸನೂಷ ಸಂತೋಷ್ ಸಾಹಸವನ್ನ ಮೆಚ್ಚಿನ ಚಿತ್ರರಂಗ

ಸನೂಷಾ ಶಿವರಾಜ್ ಕುಮಾರ್ ಜೊತೆಯಲ್ಲಿ 'ಸಂತೆಯಲ್ಲಿ ನಿಂತ ಕಬೀರ ಸಿನಿಮಾ'ದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಸನೂಷ ಸಾಹಸ ಮತ್ತು ಧೈರ್ಯವನ್ನ ಚಿತ್ರರಂಗ ಹಾಗೂ ಸಹ ಪ್ರಯಾಣಿಕರು ಮೆಚ್ಚಿಕೊಂಡಿದ್ದಾರೆ.

More from Filmibeat

English summary
Malayalam and Kannada actress Sanusha sexually harassed While traveling on train, Sanusha sexually abused by the other passenger.Actress Sanusha filed a complaint with the railway police. Sanusha has acted in Kabir movie in Sant's Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X