ನಟ ಆರ್ಯ ಭಾವಿ ಪತ್ನಿಯೇ 'ಯುವರತ್ನ'ಗೆ ನಾಯಕಿ
ಪುನೀತ್ ರಾಜ್ ಕುಮಾರ್ ಮತ್ತೆ ಕಾಲೇಜ್ ಗೆ ಹೋಗುತ್ತಿದ್ದಾರೆ. 'ಅಪ್ಪು', 'ಅಭಿ' ಬಳಿಕ ಸಾಕಷ್ಟು ವರ್ಷಗಳು ಆದ ಮೇಲೆ ಬುಕ್ ಹಿಡಿದು ಕಾಲೇಜ್ ಕ್ಯಾಂಪಸ್ ನಲ್ಲಿ ಪುನೀತ್ ಓಡಾಡುತ್ತಿದ್ದಾರೆ.
'ನಟ ಸಾರ್ವಭೌಮ' ಸಿನಿಮಾದ ನಂತರ ಪುನೀತ್ ರಾಜ್ ಕುಮಾರ್ 'ಯುವರತ್ನ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಸಿನಿಮಾದಲ್ಲಿ ಪುನೀತ್ ಕಾಲೇಜ್ ಹುಡುಗನ ಪಾತ್ರ ಮಾಡುತ್ತಿದ್ದಾರೆ. ಕಾಲೇಜ್ ಹುಡುಗ ಅಪ್ಪುಗೆ ಈಗ ಜೋಡಿ ಸಿಕ್ಕಿದ್ದಾರೆ.
'ಯುವರತ್ನ' ಸಿನಿಮಾಗೆ ಯಾರು ನಾಯಕಿ ಆಗುತ್ತಾರೆ ಎನ್ನುವ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಸಿನಿಮಾದ ನಾಯಕಿಯ ಹೆಸರನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಂಚಿಕೊಂಡಿದೆ. ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಜೋಡಿಯಾಗಿ ಸಯ್ಯೇಶಾ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದೆ ಓದಿ...

'ಯುವರತ್ನ'ನಿಗೆ ಸಿಕ್ಕ ಸಯ್ಯೇಶಾ
ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಸಿನಿಮಾದ ನಾಯಕಿ ಆಯ್ಕೆ ಆಗಿದೆ. ಈ ವಿಷಯವನ್ನು ಹೊಂಬಾಳೆ ಫಿಲ್ಮ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ನಿರ್ಮಾಪಕ ಕಾರ್ತಿಕ್ ಗೌಡ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ 'ಯುವರತ್ನ' ಸಿನಿಮಾದಲ್ಲಿ ಸಯ್ಯೇಶಾ ನಾಯಕಿಯಾಗಿದ್ದಾರೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.

ನಟ ಆರ್ಯ ಭಾವಿ ಪತ್ನಿ
ನಟಿ ಸಯ್ಯೇಶಾ ಕಾಲಿವುಡ್ ನಟ ಆರ್ಯ ಅವರ ಭಾವಿ ಪತ್ನಿ. ಈ ಜೋಡಿ ಮಾರ್ಚ್ ತಿಂಗಳಿನಲ್ಲಿ ಮದುವೆ ಆಗುತ್ತಿದ್ದಾರೆ. ಆರ್ಯ-ಸಯ್ಯೇಶಾ ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. 2018 ರಲ್ಲಿ ಬಿಡುಗಡೆಯಾದ 'ಘಜನಿಕಾಂತ್' ಚಿತ್ರದಲ್ಲಿ ಆರ್ಯ ಮತ್ತು ಸಯ್ಯೇಶಾ ಒಟ್ಟಾಗಿ ಅಭಿನಯಿಸಿದ್ದರು. ಆಗಲೇ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು.
ಯುವರತ್ನ ಬಗ್ಗೆ ಸಯ್ಯೇಶಾ ಮಾತು
'ಯುವರತ್ನ' ಸಿನಿಮಾದ ಬಗ್ಗೆ ಟ್ವೀಟ್ ಮಾಡಿರುವ ಸಯ್ಯೇಶಾ ''ಯುವರತ್ನ' ಎಂಬ ಅದ್ಬುತ ತಂಡವನ್ನು ಸೇರಿಕೊಳ್ಳಲು ತುಂಬ ಖುಷಿ ಆಗುತ್ತಿದೆ. ಪುನೀತ್ ರಾಜ್ ಕುಮಾರ್ ಸರ್ ಜೊತೆಗೆ ತೆರೆ ಹಂಚಿಕೊಳ್ಳುವ ಸಮಯಕ್ಕಾಗಿ ಕಾಯಲು ಆಗುತ್ತಿಲ್ಲ.'' ಎಂದಿರುವ ಅವರು ಸಂತೋಷ್ ಆನಂದ್ ರಾಮ್ ಹಾಗೂ ಹೊಂಬಾಳೆ ಫಿಲ್ಮ್ಸ್ ಗೆ ಧನ್ಯವಾದ ತಿಳಿಸಿದ್ದಾರೆ.

ಸಯ್ಯೇಶಾ ಎಂಟನೇ ಸಿನಿಮಾ
'ಯುವರತ್ನ' ಸಯ್ಯೇಶಾ ಅವರ ಎಂಟನೇ ಸಿನಿಮಾವಾಗಿದೆ. 2015ರಲ್ಲಿ 'ಅಖಿಲ್' ಚಿತ್ರದ ಮೂಲಕ ಟಾಲಿವುಡ್ ಗ ಎಂಟ್ರಿ ಕೊಟ್ಟ ಸಯ್ಯೇಶಾ ಮುಂದೆ ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾವಾಗಿದೆ. 'ಯುವರತ್ನ' ತಂಡ ಸಯ್ಯೇಶಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದೆ.


Click it and Unblock the Notifications











