ನೇಗಿಲು ಹಿಡಿದು ಉಳುಮೆಗೆ ಇಳಿದ ಹಿರಿಯ ನಟಿ ಶ್ರುತಿ : ರಿಯಾಲಿಟಿ ಶೋ ಗತಿಯೇನು?

ಚಂದನವನದ ಗೊಂಬೆ ಹಿರಿಯ ನಟಿ ಶ್ರುತಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ತಮ್ಮ ನಟನೆ ಮೂಲಕವೇ ಪ್ರೇಕ್ಷಕರನ್ನು ಹಲವು ವರ್ಷಗಳಿಂದ ರಂಜಿಸುತ್ತಾ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.

ನಟಿ ಶೃತಿ ಕೇವಲ ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂನಲ್ಲೂ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಕನ್ನಡದ 'ಶೃತಿ' ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರನ್ನ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ಆದಾದ ಬಳಿಕ ತಮ್ಮ ಮೂಲ ಹೆಸರು ಗಿರಿಜಾ ಬದಲು ಶ್ರುತಿ ಎಂಬ ಹೆಸರೆ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. ಚಿತ್ರರಂಗದಲ್ಲೂ ಶ್ರುತಿ ಎಂದೇ ಫೇಮಸ್‌ ಆದರು.

ಸದ್ಯಕ್ಕೆ ಕನ್ನಡದ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಈಗ ರಿಯಾಲಿಟಿ ಶೋಗಳಲ್ಲೂ ಸಖತ್ ಮಿಂಚುತ್ತಿದ್ದಾರೆ. ಇವುಗಳ ನಡುವೆಯೇ ಕೃಷಿಯತ್ತ ಒಲವು ತೋರಿದ್ದು, ಉಳುಮೆ ಮಾಡುವ ವಿಡಿಯೋವೊಂದನ್ನು ಶ್ರುತಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

 ನೇಗಿಲು ಹಿಡಿದು ಉಳುಮೆ ಮಾಡಿದ ಶ್ರುತಿ

ನೇಗಿಲು ಹಿಡಿದು ಉಳುಮೆ ಮಾಡಿದ ಶ್ರುತಿ

ನಟಿ ಶ್ರುತಿ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದು, ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಯೆಸ್‌ ನಟಿ ಶ್ರುತಿ ತಮ್ಮ ಜಮೀನಿನಲ್ಲಿ ತಾವೇ ಸ್ವತಃ ನೇಗಿಲು ಹಿಡಿದು ಉಳುಮೆ ಮಾಡಿದ್ದಾರೆ. ಇನ್ನು ಶ್ರುತಿಗೆ ಇಡೀ ಕುಟುಂಬವೇ ಸಾಥ್ ನೀಡಿದೆ. ಸದ್ಯ ಈ ವಿಡಿಯೋವನ್ನು ನಟಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ನಮ್ಮ ವಿಡಿಯೋ ಜೊತೆಗೆ ನಾನೇ "ಉತ್ತಿ ಬಿತ್ತಿ ಬೆಳೆಯಬೇಕೆಂಬುದು ನನ್ನ ಬಹು ವರ್ಷದ ಆಸೆ.. ಭಗವಂತನಿಗೆ ಕೋಟಿ ನಮನಗಳು." ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.

 ಯುವಜನತೆಗೆ ಸ್ಪೂರ್ತಿಯಾದ ನಟಿ ಶ್ರುತಿ

ಯುವಜನತೆಗೆ ಸ್ಪೂರ್ತಿಯಾದ ನಟಿ ಶ್ರುತಿ

ಇತ್ತೀಚಿನ ದಿನಗಳಲ್ಲಿ ಯುವಕರು ಕೃಷಿಯಲ್ಲಿ ಆಸಕ್ತಿ ತೋರದೇ ಕಡೆಗಣಿಸುವ ಸಂಖ್ಯೆ ಹೆಚ್ಚಾಗಿದೆ. ಇಂತಹ ಕಾಲದಲ್ಲೂ ಇಂತಹವರ ಮಧ್ಯೆ ಸೆಲೆಬ್ರೆಟಿಯಾಗಿದ್ದರೂ ಸಹ ನಟಿ ಶ್ರುತಿ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಈಗಿನ ಯುವಜನತೆಗೆ ಮೊಬೈಲ್, ಇಂಟರ್‌ನೆಟ್‌ನಲ್ಲಿ ಕಾಲಹರಣದಲ್ಲಿ ಮುಳುಗಿದೆ. ಅಂತಹವರಿಗೆ ನಟಿಯ ಈ ಕಾರ್ಯ ಮಾದರಿಯಾಗಿದೆ. ಯುವಕರು ಮತ್ತೆ ಕೃಷಿಯಲ್ಲಿ ಭಾಗಿಯಾಗಲು ಸ್ಪೂರ್ತಿ ನೀಡಿದಂತಾಗಿದೆ.

 ಶ್ರುತಿಗೆ ನೆಟ್ಟಿಗರಿಂದ ಶುಭಾಶಯ

ಶ್ರುತಿಗೆ ನೆಟ್ಟಿಗರಿಂದ ಶುಭಾಶಯ

ನಟಿ ಶ್ರುತಿ ನಟನೆಯ ಜೊತೆಗೆ ಈಗ ಕೃಷಿ ಕಾರ್ಯದಲ್ಲೂ ತೊಡಗಿಕೊಂಡಿರುವುದು ಹಲವರಿಗೆ ಖುಷಿ ತಂದಿದೆ. ರೈತನ ನಮ್ಮ ದೇಶದ ಬೆನ್ನೆಲುಬು ಎಂಬ ವಾಕ್ಯವನ್ನು ಮತ್ತೆ ಸಾಬೀತು ಪಡಿಸಿದಂತಿದೆ. ಸೆಲೆಬ್ರೆಟಿಗಳೆಂದರೆ ಅವರು ಇಂತಹ ಕೃಷಿ ಕೆಲಸಗಳನ್ನು ಮಾಡಲ್ಲ ಎಂಬ ಮಾತಿದೆ. ಆದರೆ, ಅಂತಹ ಮಾತುಗಳಿಗೆ ಹಿರಿಯ ನಟಿ ಶ್ರುತಿ ಬ್ರೇಕ್ ಹಾಕಿದ್ದಾರೆ. ಸದ್ಯ ನಟಿಯ ಈ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ರೆಸ್ಪಾನ್ಸ್ ಬರುತ್ತಿದ್ದು, ಹಲವರು ಶ್ರುತಿಯ ಕಾರ್ಯವನ್ನು ಹಾಡಿ ಹೊಗಳಿದ್ದಾರೆ. ಇದು ಎಲ್ಲರಿಗೂ ಸ್ಪೂರ್ತಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

 ಶ್ರುತಿ ಅಭಿನಯದ ಮುಂಬರುವ ಚಿತ್ರಗಳು

ಶ್ರುತಿ ಅಭಿನಯದ ಮುಂಬರುವ ಚಿತ್ರಗಳು

ನಟಿ ಶ್ರುತಿ ದಿಗ್ಗಜರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯಕ್ಕೆ ಈಗ ಕೆಲವು ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದು, ಇದರ ಜೊತೆಗೆ ರಿಯಾಲಿಟಿ ಶೋಗಳಲ್ಲೂ ನಟಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ಮುಹೂರ್ತವಾಗಿದ್ದ 'ನಂಬರ್ 13' ಸಿನಿಮಾದಲ್ಲಿ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Senior Kannada Actress Shruthi doing Agriculture Photos Goes Viral. Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X