twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಕ್ಕೆ ಶಕೀಲಾ ಆತ್ಮಕಥೆಯ ಕಣ್ಣೀರ ಪುಟಗಳು

    By Rajendra
    |

    ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆಗೆ ಕೊಳ್ಳಿ ಇಟ್ಟ, ಅವರ ಬೆಚ್ಚಗಿನ ಕನಸುಗಳಿಗೆ ಇಂಬುಕೊಟ್ಟ ತಾರೆ ಶಕೀಲಾ. ಇಡೀ ದಕ್ಷಿಣ ಚಿತ್ರರಂಗದಲ್ಲಿ ಅವರ ಸಿನಿಮಾಗಳನ್ನು ಮುಗಿಬಿದ್ದು ನೋಡುತ್ತಿದ್ದಂತಹ ಕಾಲಘಟ್ಟವೊಂದಿತ್ತು.

    ಶಕೀಲಾ ಆತ್ಮಕಥೆ ಈಗಾಗಲೆ ಮಲಯಾಳಂ ಭಾಷೆಯಲ್ಲಿ ಪ್ರಕಟವಾಗಿದೆ. ಮಲಯಾಳಂನಲ್ಲಿ ಅವರ ಆತ್ಮಕಥೆಗೆ 'Athmakadha' ಎಂದು ಹೆಸರಿಡಲಾಗಿದೆ. ಈಗ ಅದೇ ಕೃತಿಯನ್ನು ಕನ್ನಡಕ್ಕೆ ತರುತ್ತಿದೆ ಸೀಮಾ ಬುಕ್ಸ್. ಮಲಯಾಳಂ ಕೃತಿಯನ್ನು ಕೆ.ಕೆ.ಗಂಗಾಧರ್ ಅವರು ಕನ್ನಡಕ್ಕೆ ಅನುವಾದಿಸಿದ್ದು "ನಟಿ ಶಕೀಲಾ ಆತ್ಮಕಥೆ" ಎಂದು ಹೆಸರಿಡಲಾಗಿದೆ. [ಶಕೀಲಾ ಆತ್ಮಕಥೆಯ ಕೆಲವು ಕಣ್ಣೀರ ಪುಟಗಳು]

    ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಗಸ್ಟ್ 23ರ ಶನಿವಾರ ಸಂಜೆ 6 ಗಂಟೆಗೆ ಶಕೀಲಾ ಆತ್ಮಕಥೆ ಪುಸ್ತಕ ಲೋಕಾರ್ಪಣೆಯಾಗುತ್ತಿದೆ. ಶಕೀಲಾ, ಲೇಖಕ ಹಾಗೂ ಪುರವಣೆ ಸಂಪಾದಕ ಜೋಗಿ, ಲೇಖಕರು ಮತ್ತು ವಕೀಲರು ಅಂಜಲಿ ರಾಮಣ್ಣ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗಿಯಾಗುತ್ತಿದ್ದಾರೆ.

    ಸುವರ್ಣ ವಾಹಿನಿಯ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಯಾಗಿ ಆಗಮಿಸಿದ ಶಕೀಲಾ ಎಲ್ಲರಿಂದ ಚೇಚಿ ಎಂದು ಕರೆಸಿಕೊಂಡಿದ್ದರು. ಕನ್ನಡ ಅಷ್ಟಾಗಿ ಬರದಿದ್ದರೂ ಅರ್ಥ ಮಾಡಿಕೊಂಡು ಕಾನ್ವೆಂಟ್ ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದ ಶಕೀಲಾ ಇದ್ದಷ್ಟು ದಿನವೂ ಆದಷ್ಟು ಮೌನಕ್ಕೆ ಶರಣಾಗಿದ್ದರು. (ಒನ್ಇಂಡಿಯಾ ಕನ್ನಡ)

    English summary
    The Kannada version of actress Shakeela autobiography will be releases at Freedom park, Bangalore on 23rd August. She explains how she entered the film industry, her relationship with Silk Smitha and much else. She also narrates various anecdotes from her life.
    Thursday, August 21, 2014, 12:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X