»   » ಮಲಯಾಳಂ ಮಲ್ಲಿಗೆ ಶಕೀಲಾ ಸೆಕೆಂಡ್ ಇನ್ನಿಂಗ್ಸ್

ಮಲಯಾಳಂ ಮಲ್ಲಿಗೆ ಶಕೀಲಾ ಸೆಕೆಂಡ್ ಇನ್ನಿಂಗ್ಸ್

Posted By:
Subscribe to Filmibeat Kannada
ತೊಂಬತ್ತರ ದಶಕದಲ್ಲಿ ತಮ್ಮ ಸೊಂಟದ ಸುತ್ತಳತೆಯಲ್ಲೇ ಪಡ್ಡೆಗಳನ್ನು ಹಳ್ಳಕ್ಕೆ ಕೆಡವಿದ ಹಾಟ್ ಬಾಂಬ್ ಶಕೀಲಾ ಈಗ ಸೆಕೆಂಡ್ ಇನ್ನಿಂಗ್ಸ್ ಗೆ ಅಣಿಯಾಗಿದ್ದಾರೆ. ಅಯ್ಯೋ ಈ ಬಾರಿ ಇನ್ಯಾವ ಬಾಂಬ್ ಪ್ರಯೋಗಿಸುತ್ತಾರೋ ಏನೋ ಎಂದು ಪಡ್ಡೆಗಳು ನಿರೀಕ್ಷಿಸಿದ್ದಾರೆ.

ನಲವತ್ತರ ಹರಯದಲ್ಲಿ ಇನ್ಯಾವ ಬಾಂಬ್ ಪ್ರಯೋಗಿಸಲು ಸಾಧ್ಯ? ಈಗ ಅವರಿಗೆ ಅಂತಹ ವಯಸ್ಸೂ ಇಲ್ಲ, ಉತ್ಸಾಹವೂ ಇದ್ದಂಗಿಲ್ಲ. ಸೊಂಟ ಏಳು ಸುತ್ತಿನ ಕೋಟೆಯಂತಾಗಿದೆ. ಆದರೆ ಮನೆಮಂದಿಯಲ್ಲಾ ನೋಡುವಂತಹ ಒಂದು ಉತ್ತಮ ಚಿತ್ರವನ್ನಂತೂ ಖಂಡಿತ ನೀಡುತ್ತೇನೆ ಎನ್ನುತ್ತಿದ್ದಾರೆ.

ಈ ಬಾರಿ ಅವರು ಬಣ್ಣ ಹಚ್ಚುತ್ತಿಲ್ಲ. ಬದಲಾಗಿ ನಿರ್ದೇಶನದತ್ತ ಹೊರಳಿದ್ದಾರೆ. ತಾವೊಬ್ಬ ಬಿ ಗ್ರೇಡ್ ತಾರೆ ಎನ್ನಿಸಿಕೊಂಡಿದ್ದರೂ ತಮ್ಮ ನಿರ್ದೇಶನದಲ್ಲಿ ಮೂಡಿಬರುವ ಚಿತ್ರ ಮಾತ್ರ ಎ ಗ್ರೇಡ್ ಆಗಿರುತ್ತದಂತೆ ಅರ್ಥಾತ್ ಸದಭಿರುಚಿಯ ಚಿತ್ರ ಎನ್ನುತ್ತಾರೆ.

ತಮ್ಮ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ 'ನೀಲಕುರುಂಜಿ' ಎಂದು ಹೆಸರಿಟ್ಟಿದ್ದಾರೆ. ಆದರೆ ಚಿತ್ರದ ಟೈಟಲ್ ನಷ್ಟೇ ನೀಲ ಎಂದಿದೆ ಆದರಿದು ನೀಲಿ ಚಿತ್ರವಲ್ಲ. ಈ ಚಿತ್ರ ಜನವರಿ 21ರಂದು ಸೆಟ್ಟೇರಿದೆ. ಮಹಿಳೆಯರ ಮನೋವೇದನೆಯ ಎಳೆಗಳೇ ಚಿತ್ರದ ಕಥಾವಸ್ತುವಂತೆ. ಅಂದರೆ ಈ ಬಾರಿ ಮಹಿಳೆಯ ಕೈಗೆ ಕರವಸ್ತ್ರ ಗ್ಯಾರಂಟಿ.

ಸರಿಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಶಕೀಲಾ ತಮ್ಮದೇ ಆದಂತಹ ವೈವಿಧ್ಯಮಯ ಪಾತ್ರಗಳಿಗೆ ಹೆಸರಾಗಿದ್ದರು. ದಕ್ಷಿಣ ಭಾರತದ ಮತ್ತೊಬ್ಬ ಸೆಕ್ಸ್ ಬಾಂಬ್ ಸಿಲ್ಕ್ ಸ್ಮಿತಾ ಕಣ್ಮರೆಯಾದಾಗ ಅವರ ಸ್ಥಾನವನ್ನು ಸಂಪೂರ್ಣವಾಗಿ ತುಂಬಿದ ಬೆಡಗಿ ಶಕೀಲಾ. (ಏಜೆನ್ಸೀಸ್)

English summary
Malayalam films B grade actress Shakeela is back but says that she is here to direct and not to act in movies. "My film would be one which could be seen by all," Shakeela, 40, told reporters.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada