ಬಯೋಪಿಕ್ ಟ್ರೈಲರ್ ನೋಡಿ ಮಾಜಿ ಪ್ರಿಯಕರನನ್ನು ನೆನೆದ ಶಕೀಲಾ

ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ಅವರ ಜೀವನ ಆಧರಿತ ಸಿನಿಮಾ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25ಕ್ಕೆ ಬಿಡುಗಡೆಯಾಗುತ್ತಿದೆ. ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿರುವ ಈ ಚಿತ್ರ ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ತೆರೆಕಾಣುತ್ತಿದೆ.

Recommended Video

ಅದು ನನಗೆ ಬಹಳ ಮುಖ್ಯವಾದ ದಿನ ಎಂದ ಶಕೀಲ | Shakeela | Filmibeat Kannada

ಇತ್ತೀಚಿಗಷ್ಟೆ ಶಕೀಲಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ನೀಲಿ ಚಿತ್ರಗಳು ಮೂಲಕ ಹೆಚ್ಚು ಗುರುತಿಸಿಕೊಂಡಿರುವ ನಟಿಯ ಬದುಕಿನ ಅನೇಕ ಇಂಟರೆಸ್ಟಿಂಗ್ ವಿಷಯಗಳು ಈ ಚಿತ್ರದಲ್ಲಿ ಬಹಿರಂಗವಾಗಲಿದೆ.

ಹೀಗಾಗಿ, ಸಹಜವಾಗಿ ಶಕೀಲಾ ಬಯೋಪಿಕ್ ನಿರೀಕ್ಷೆ ಮೂಡಿಸಿದೆ. ಅಂದ್ಹಾಗೆ, ಶಕೀಲಾ ಸಿನಿಮಾದ ಟ್ರೈಲರ್ ನೋಡಿ ತನ್ನ ಮಾಜಿ ಪ್ರಿಯಕರ ರಿಚರ್ಡ್ಸ್ ನೆನಪಾದ ಎಂದು ಸ್ವತಃ ಶಕೀಲಾ ಹೇಳಿಕೊಂಡಿದ್ದಾರೆ.

Actress Shakeela reminded of her ex lover after watching the trailer of her biopic

ಟ್ರೈಲರ್ ಬಿಡುಗಡೆ ಕಾರ್ಯಕ್ರಮದ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿದ್ದ ಶಕೀಲಾ, ನಂತರ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿ ''ಸಿನಿಮಾ ಅದ್ಭುತವಾಗಿ ಬಂದಿದೆ ಎಂಬ ನಂಬಿಕೆ ಇದೆ, ಟ್ರೈಲರ್ ತುಂಬಾ ಇಂಪ್ರೆಸ್ ಆಗಿದೆ, ನನ್ನ ಮಾಜಿ ಪ್ರಿಯಕರ ಹೆಚ್ಚು ನೆನಪಾದ'' ಎಂದಿದ್ದಾರೆ.

ಇನ್ನು 90ರ ದಶಕದ ಹಾಟ್‌ ನಟಿ ಶಕೀಲಾ ಪಾತ್ರದಲ್ಲಿ ರಿಚಾ ಚಡ್ಡಾ ಅಭಿನಯಿಸಿದ್ದು, ನೀಲಿ ತಾರೆಯಾಗಿ ತೆರೆಮೇಲೆ ಮಿಂಚಿದ್ದಾರೆ. ಪಂಕಜ್ ತ್ರಿಪಾಠಿ ಮತ್ತು ಮಲಯಾಳಂ ನಟ ರಾಜೀವ ಪಿಳ್ಲೈ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ.

More from Filmibeat

English summary
Actress Shakeela reminded of her ex-lover after watching the trailer of her biopic Shakeela directed by indrajit Lankesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X