'ಮಾಸ್ಟರ್ ಪೀಸ್' ಸಿನಿಮಾ ಗೆದ್ದೆ ಗೆಲ್ಲುತ್ತೆ', ಶಾನ್ವಿ ಉವಾಚ

By Suneetha

ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಹಳ ಜಾಗರೂಕತೆಯಿಂದ ಹೆಜ್ಜೆ ಇಡುತ್ತಿರುವ ನಟಿ ಶಾನ್ವಿ ಶ್ರೀವಾತ್ಸವ್ ಅವರು ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ನಟಿಸಿರುವ 'ಮಾಸ್ಟರ್ ಪೀಸ್' ಚಿತ್ರದ ಬಿಡುಗಡೆಯ ತವಕದಲ್ಲಿದ್ದಾರೆ.

ವಾರಾಣಾಸಿ ಮೂಲದ ನಟಿ ಶಾನ್ವಿ ಅವರು 2014 ರಲ್ಲಿ ನಟ ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯಾಗಿ 'ಚಂದ್ರಲೇಖ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟರು. ಇದೀಗ ಯಶ್ ಅವರ ಜೊತೆ ಬಹುನಿರೀಕ್ಷಿತ 'ಮಾಸ್ಟರ್ ಪೀಸ್' ಚಿತ್ರದ ಮೂಲಕ ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ.['ಕೇಡಿ ನಂಬರ್-1' ಯಶ್ 'ಮಾಸ್ಟರ್ ಪೀಸ್' ಟ್ರೈಲರ್ ಬೊಂಬಾಟ್!]

'ಕನ್ನಡದಲ್ಲಿ ಇದು ನನ್ನ ಮೂರನೇ ಸಿನಿಮಾ. 'ಭಲೇ ಜೋಡಿ' ತೆರೆ ಕಾಣಬೇಕಿದೆ. 'ಮಾಸ್ಟರ್ ಪೀಸ್'ನಂತಹ ದೊಡ್ಡ ಯೋಜನೆಗೆ ನನ್ನನ್ನು ಆಯ್ಕೆ ಮಾಡಿದ ನಿರ್ದೇಶಕ ಮಂಜು ಮಾಂಡವ್ಯ ಅವರಿಗೆ ಧನ್ಯವಾದಗಳು' ಎಂದು ಇದೇ ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಯಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ನಟಿ ಶಾನ್ವಿ ಅವರು ನುಡಿಯುತ್ತಾರೆ.['ಮಾಸ್ಟರ್ ಪೀಸ್' ಸಿನಿಮಾದ ಮಸ್ತ್ ಸಾಂಗ್ ಔಟ್!]

'ಕೇವಲ ರೊಮ್ಯಾನ್ಸ್ ಗಷ್ಟೇ ಸೀಮಿತವಾಗದೆ ಹಾಸ್ಯ ಮತ್ತು ಮನರಂಜನೆಯ ಪಾತ್ರವನ್ನು ಈ ಬಾರಿ 'ಮಾಸ್ಟರ್ ಪೀಸ್' ಮೂಲಕ ಮಾಡಿದ್ದೇನೆ. ಚಿತ್ರ ಗೆದ್ದೆ ಗೆಲ್ಲುತ್ತೆ ಅಂತ ಚಿತ್ರತಂಡಕ್ಕೂ ತುಂಬಾ ಆತ್ಮವಿಶ್ವಾಸ ಇದೆ. ನನಗೆ ಕೂಡ ಯಾವುದೇ ಭಯಗಳಿಲ್ಲ' ಎಂದು ನಿಸ್ಸಂಕೋಚವಾಗಿ ಹೇಳುತ್ತಾರೆ ಶಾನ್ವಿ ಶ್ರೀವಾತ್ಸವ್.

'ಭಾಷೆಯ ತೊಡಕು ಹೊರತುಪಡಿಸಿದರೆ, ಸಿನಿಮಾದಲ್ಲಿ ಸುಸೂತ್ರವಾಗಿ ಅಭಿನಯಿಸಿದೆ ಎನ್ನುವ ಶಾನ್ವಿ 'ಇದಕ್ಕೆ ಸ್ವಲ್ಪ ಹೆಚ್ಚಿಗೆಯೇ ಕೆಲಸ ಮಾಡಬೇಕಿತ್ತು. ಏಕೆಂದರೆ ಭಾಷೆ ಹೊಸದು ಮತ್ತು ಉದ್ದುದ್ದ ಡೈಲಾಗ್ ಜೊತೆಗೆ ಸಂಭಾಷಣೆಗಳು ಇದ್ದವು.['ಮಾಸ್ಟರ್ ಪೀಸ್' ಸೆನ್ಸಾರ್ ನಿಂದ ಪಾಸ್, ರಿಲೀಸ್ ಫಿಕ್ಸ್!]

ಅಲ್ಲದೆ ಕೆಲವು ಆಕ್ಷನ್ ದೃಶ್ಯಗಳಲ್ಲಿ ಹಗ್ಗ ಬಳಸಿ ಕಟ್ಟಡಗಳಿಂದ ಜಿಗಿಯಬೇಕಿತ್ತು. ನಾನು ಡ್ಯೂಪ್ ಬಳಸದೆ ಮಾಡಿದ್ದು ಒಳ್ಳೆಯ ಅನುಭವ ಎಂದು ಶಾನ್ವಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಡಿಸೆಂಬರ್ 24 ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿರುವ ಯಶ್ ಅವರ ಮಾಸ್ಟರ್ ಪೀಸ್ ಅಭಿಮಾನಿಗಳಲ್ಲಿ ಮತ್ತು ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮತ್ತು ಕುತೂಹಲಗಳನ್ನು ಹೆಚ್ಚಿಸಿದೆ.

More from Filmibeat

English summary
Actress Shanvi Srivastava is treading cautiously in the southern film world, slowly garnering the adoration of audience in Telugu, Kannada and Tamil. Having entered Sandalwood with Chandralekha in 2014, the Varanasi born actress is now awaiting the release of her much anticipated movie, Masterpiece opposite Yash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X