ರಾಧಾ ಮಿಸ್ ಬಿಟ್ಟು ಶಾನ್ವಿ ಹಿಂದೆ ಹೊರಟ ರಮಣ್
Recommended Video
'ರಾಧಾ ರಮಣ' ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರಸಿದ್ಧ ಧಾರಾವಾಹಿ. ಈ ಧಾರಾವಾಹಿಯಲ್ಲಿ ರಮಣ್ ಪಾತ್ರದ ಮೂಲಕ ಖ್ಯಾತಿಗಳಿಸಿರುವ ನಟ ಸ್ಕಂದ ಅಶೋಕ್ ಈಗ ಸ್ಯಾಂಡಲ್ ವುಡ್ ನಟಿ ಶಾನ್ವಿ ಶ್ರೀವಾಸ್ತವ ಹಿಂದಿ ಹೊರಟಿದ್ದಾರೆ. ಹಾಗಾದ್ರೆ ರಮಣ್, ರಾಧಾ ಮಿಸ್ ನನ್ನು ಬಿಟ್ರಾ ಅಂತ ಅಚ್ಚರಿಪಡುತ್ತಿದ್ದೀರಾ.
ರಮಣ್, ರಾಧಾ ಮಿಸ್ ಅನ್ನು ಬಿಟ್ಟಿಲ್ಲ. ಆದ್ರೆ ಮತ್ತೊಂದೆಡೆ ಶಾನ್ವಿಗೆ ನಾಯಕನಾಗಿದ್ದಾರೆ. ಆದ್ರೆ ಕಿರುತೆರೆಯಲಲ್ಲ ಬದಲಿಗೆ ಬೆಳ್ಳಿ ಪರದೆ ಮೇಲೆ. ಹೌದು, ಸ್ಕಂದ 'ರಣಂಗನ' ಚಿತ್ರದಲ್ಲಿ ನಾಯಕನಾಗಿ ಮಿಂಚಲಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ಸ್ಕಂದ, ಶಾನ್ವಿ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದು ಚಿತ್ರದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ.
ಅಂದ್ಹಾಗೆ 'ರಣಂಗನ' ಚಿತ್ರಕ್ಕೆ ರೋಹಿತ್ ರಾವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರೋಹಿತ್ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿತ್ರದಲ್ಲಿ ನಟ ಸ್ಕಂದ ಸೈನಿಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಸೈನಿಕ ಪಾತ್ರ ಅಂದ್ಮೇಲೆ ನೈಜ ಘಟನೆ ಆಧಾರಿತ ಚಿತ್ರನಾ ಎನ್ನುವ ವಿಚಾರ ಕೂಡ ಬರುತ್ತೆ. ಆದ್ರೆ ಈ ಸಿನಿಮಾ ಯಾವುದೆ ವ್ಯಕ್ತಿಯ ನಿಜ ಜೀವನದ ಕಥೆ ಅಲ್ಲವಂತೆ.

ಇತ್ತೀಚಿಗೆ ನಡೆದ ಕೆಲವು ಘಟನೆಗಳನ್ನು ಆಧಾರಿಸಿ ಈ ಕಥೆ ಮಾಡಲಾಗಿದೆಯಂತೆ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸುವ ಅವಶ್ಯಕತೆ ಇದ್ದು ಈಗಾಗಲೆ ವರ್ಕೌಟ್ ಮಾಡುತ್ತಿದ್ದಾರಂತೆ. ಚಿತ್ರದ ಪ್ರಿಪ್ರೊಡಕ್ಷನ್ ಕೆಲಸ ಭರದಿಂದ ನಡೆಯುತ್ತಿದ್ದು ಸಧ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದೆ ಚಿತ್ರತಂಡ.


Click it and Unblock the Notifications











