ನನ್ನ ಮೊದಲ ಸಂಭಾವನೆ ₹3 ಲಕ್ಷ, ಈಗ ಎಷ್ಟಂದ್ರೆ?; ತಮ್ಮ ಸಂಭಾವನೆ ರಿವೀಲ್ ಮಾಡಿದ್ರು ಶಾನ್ವಿ

ಮುಂಬೈ ಬೆಡಗಿ ಶಾನ್ವಿ ಶ್ರೀವಾಸ್ತವ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಯಶ್, ದರ್ಶನ್, ರಕ್ಷಿತ್‌ ಶೆಟ್ಟಿ ಸೇರಿದಂತೆ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ವಾರನಾಸಿಯಲ್ಲಿ ಹುಟ್ಟಿ ಬೆಳೆದ ಶಾನ್ವಿ ಕನ್ನಡ ಸಿನಿಮಾಗಳಲ್ಲಿ ನಟಿಸಿರುವುದೇ ಹೆಚ್ಚು.

ಕಾಲೇಜು ದಿನಗಳಲ್ಲೇ ಶಾನ್ವಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ತೆಲುಗಿನ 'ಲವ್‌ಲೀ' ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. 'ಚಂದ್ರಲೇಖ' ಕನ್ನಡದಲ್ಲಿ ಆಕೆಯ ಮೊದಲ ಸಿನಿಮಾ. 'ಮಾಸ್ಟರ್‌ಪೀಸ್' ಚಿತ್ರಕ್ಕಾಗಿ ಸೈಮಾ ಕ್ರಿಟಿಕ್ಸ್ ಅವಾರ್ಡ್ ಸಹ ಸಿಕ್ಕಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ತಮ್ಮ ಬೋಲ್ಡ್ ಕಾಮೆಂಟ್‌ಗಳಿಂದಲೂ ಗಮನ ಸೆಳೆಯುತ್ತಾರೆ.

Actress Shanvi Srivastava revealed her remuneration for kannada film

ಗಂಡಸರ ಸಂಬಳ ಕೇಳಬಾರದು, ಹೆಂಗಸರ ವಯಸ್ಸು ಕೇಳಬಾರದು ಎನ್ನುವ ನಾಣ್ಣುಡಿ ಇದೆ. ಚಿತ್ರರಂಗದಲ್ಲಿ ನಟ-ನಟಿಯರ ಸಂಭಾವನೆಯನ್ನೂ ಕೇಳಬಾರದು. ಕೇಳಿದರೂ ಯಾರು ಸರಿಯಾದ ಉತ್ತರ ಕೊಡಲ್ಲ. ಈ ಪ್ರಶ್ನೆ ಎಲ್ಲಾ ಅಂತೆ ಕಂತೆ ಲೆಕ್ಕವೇ ಸಿಗುತ್ತದೆ. ಸರಿಯಾದ ಉತ್ತರ ಸಿಗುವುದು ಕಷ್ಟ. ಸಿನಿಮಾ ಬಜೆಟ್, ಕಲೆಕ್ಷನ್ ವಿಚಾರಕ್ಕೂ ಈ ಮಾತು ಅಪ್ಲೇ ಆಗುತ್ತದೆ. ಕಾರಣ ಇಲ್ಲಿ ರಾಮನ ಲೆಕ್ಕ, ಕೃಷ್ಣನ ಲೆಕ್ಕವೇ ಹೆಚ್ಚು ಎನ್ನುವವರು ಇದ್ದಾರೆ.

ಶಾನ್ವಿ ಶ್ರೀವಾಸ್ತವ ತಮ್ಮ ಸಂಭಾವನೆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ತಾವು ಚಿತ್ರವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಶಾನ್ವಿ ಮಾತನಾಡಿದ್ದಾರೆ. ತಮ್ಮ ವೈಯಕ್ತಿಕ ಜೀವನ, ಸಿನಿಮಾಗಳ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತಾವು ಎದುರಿಸಿದ ಆರೋಗ್ಯ ಸಮಸ್ಯೆಯ ಬಗ್ಗೆಯೂ ಮಾತನಾಡಿದ್ದಾರೆ.

"ಪ್ರತಿಯೊಬ್ಬರ ಜೀವನಕ್ಕೆ ಹಣ ಬಹಳ ಮುಖ್ಯ. ನಮಗೆ ಆರೋಗ್ಯ ಕೈಕೊಟ್ಟರೆ ಚಿಕಿತ್ಸೆಗೆ ಹಣ ಬೇಕೇಬೇಕು. ಎಲ್ಲರೂ ಹಣಕ್ಕಾಗಿಯೇ ಕೆಲಸ ಮಾಡುತ್ತೇವೆ. ಆದರೆ ಹಣವನ್ನು ಹೇಗೆ ಬಳಸಬೇಕು ಎನ್ನುವುದು ಮುಖ್ಯ. ನನ್ನ ಮೊದಲ ಸಂಭಾವನೆ 3 ಲಕ್ಷ ರೂಪಾಯಿ. ಪದವಿ ಕಾಲೇಜಿನಲ್ಲಿ ನನ್ನ ಪೀಸ್ ನಾನೇ ಕಟ್ಟಬೇಕು ಅಂತ ನಟಿಸಲು ಆರಂಭಿಸಿದೆ"

Actress Shanvi Srivastava revealed her remuneration for kannada film

"ಕಾಲೇಜು ಪೀಸ್‌ಗಾಗಿ ಮನೆಯಲ್ಲಿ ಕೇಳುವುದು ಬೇಡ ಎಂದುಕೊಂಡೆ. ನಾನು ಚಿತ್ರರಂಗಕ್ಕೆ ಬರುವ ಮುನ್ನ ಒಂದು ಕೋಚಿಂಗ್ ಸೆಂಟರ್‌ನಲ್ಲಿ 3 ತಿಂಗಳು ಪಾಠ ಮಾಡಿದ್ದೆ. ತಿಂಗಳಿಗೆ 3,500 ರೂಪಾಯಿ ಸಂಬಳ ಪಡೆದಿದ್ದೆ. ಅದು ಕೂಡ ನನ್ನ ವಿದ್ಯಾಭ್ಯಾಸಕ್ಕಾಗಿ. ವರ್ಷಕ್ಕೆ 14 ಸಾವಿರ ರೂಪಾಯಿ ಪೀಸ್ ಇತ್ತು. ಒಂದು ಚಿತ್ರಕ್ಕೆ 3 ಲಕ್ಷ ಅಂದಾಗ ಇಡೀ ಕಾಲೇಜು ಪೀಸ್ ಬರುತ್ತಲ್ಲ ಎಂದು ನಟಿಸಿದೆ. ಈಗ ಸಂಭಾವನೆ 30 ಲಕ್ಷ ರೂಪಾಯಿ ಆಗಿದೆ"

"ಕನ್ನಡದಲ್ಲಿ ಚಿತ್ರಕ್ಕೆ ನನಗೆ 30 ಲಕ್ಷ ರೂಪಾಯಿ ಸಂಭಾವನೆ. ಮಾರ್ಕೆಟ್‌ಗೆ ತಕ್ಕಂತೆ ಬದಲಾಗುತ್ತದೆ. ವಾವ್ ಕೊನೆಗೂ ನನ್ನ ಸಂಭಾವನೆ ಎಷ್ಟು ಎಂದು ರಿವೀಲ್ ಮಾಡಿಬಿಟ್ಟೆ" ಎಂದು ಶಾನ್ವಿ ನಕ್ಕಿದ್ದಾರೆ. ಕನ್ನಡದಲ್ಲಿ 'ಭಲೇ ಜೋಡಿ', 'ಸುಂದರಾಂಗ ಜಾಣ', 'ಸಾಹೇಬ', 'ತಾರಕ್', 'ಮಫ್ತಿ', 'ಗೀತಾ', 'ಅವನೇ ಶ್ರೀಮನ್ನಾರಾಯಣ' ಹೀಗೆ ಹಲವು ಸಿನಿಮಾಗಳಲ್ಲಿ ಶಾನ್ವಿ ನಟಿಸಿದ್ದಾರೆ.

ಸದ್ಯ ಮಲಯಾಳಂ ಚಿತ್ರರಂಗಕ್ಕೆ ಶಾನ್ವಿ ಶ್ರೀವಾಸ್ತವ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದಲ್ಲಿ 'ತ್ರಿಶೂಲಂ' ಹಾಗೂ 'ಅಮೆರಿಕಾ ಅಮೆರಿಕಾ'-2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಉಗ್ರಂ' ಮರಾಠಿ ರೀಮೆಕ್‌ನಲ್ಲಿ ಕೂಡ ಶಾನ್ವಿ ಬಣ್ಣ ಹಚ್ಚಿದ್ದಾರೆ.

More from Filmibeat

English summary
Shanvi Srivastava reveals her first salary and remuneration for film;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X