»   »  ಶ್ರೀಮುರಳಿ ಜೊತೆ ಗ್ಲಾಮರ್ ಬೊಂಬೆ ಶಾನ್ವಿ ಶ್ರೀವಾಸ್ತವ ಡ್ಯುಯೆಟ್

ಶ್ರೀಮುರಳಿ ಜೊತೆ ಗ್ಲಾಮರ್ ಬೊಂಬೆ ಶಾನ್ವಿ ಶ್ರೀವಾಸ್ತವ ಡ್ಯುಯೆಟ್

Posted By:
Subscribe to Filmibeat Kannada

'ಮಾಸ್ಟರ್ ಪೀಸ್' ಚಿತ್ರದಲ್ಲಿ ಎಲ್ಲರಿಗೂ ಮೋಡಿ ಮಾಡಿದ್ದ ನಟಿ ಶಾನ್ವಿ ಅವರಿಗೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಭರಪೂರ ಅವಕಾಶಗಳು ದೊರೆಯುತ್ತಿವೆ. ಇದೀಗ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಇನ್ನೂ ಹೆಸರಿಡದ ಮುಂಬರುವ ಚಿತ್ರದಲ್ಲಿ ನಾಯಕಿಯಾಗಿ ನಟಿ ಶಾನ್ವಿ ಶ್ರೀವಾಸ್ತವ ಅವರು ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಈ ಹೊಸ ಚಿತ್ರದ ಸ್ಕ್ರಿಪ್ಟ್ ನ ಪೂಜೆ ನೆರವೇರಿದ್ದು, ಜಯಣ್ಣ ನಿರ್ಮಾಣ ಸಂಸ್ಥೆಯಿಂದ ಈ ಚಿತ್ರ ಹೊರಬರುತ್ತಿದೆ. ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ವಿಶೇಷ ಪಾತ್ರ ವಹಿಸುತ್ತಿದ್ದಾರೆ.[ಶ್ರೀಮುರಳಿ-ಶಿವಣ್ಣ ಚಿತ್ರದ ಬಗ್ಗೆ ಸುಮ್ಮನೆ ಗಾಸಿಪ್ ಹಬ್ಬಿಸ್ಬೇಡಿ.!]

Actress Shanvi Srivastava Roped In For Shivanna & Sri Murali's Next

ನಿರ್ದೇಶಕ ನರ್ತನ್ ಅವರು ಆಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರತಂಡ ಈಗಾಗಲೇ ಶೂಟಿಂಗ್ ಗಾಗಿ ಇಟಲಿಯತ್ತ ಪ್ರಯಾಣ ಬೆಳೆಸಿವೆ. 'ಸಂತೆಯಲ್ಲಿ ನಿಂತ ಕಬೀರ' ಚಿತ್ರಕ್ಕೆ ಕ್ಯಾಮೆರಾ ಕೈ ಚಳಕ ತೋರಿದ್ದ ನವೀನ್ ಅವರು ಈ ಚಿತ್ರಕ್ಕೂ ಛಾಯಾಗ್ರಾಹಕರಾಗಿ ದುಡಿಯುತ್ತಿದ್ದಾರೆ.

Actress Shanvi Srivastava Roped In For Shivanna & Sri Murali's Next

ಅಂದಹಾಗೆ ಶಿವರಾಜ್ ಕುಮಾರ್ ಅವರು ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ 'ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದಲ್ಲಿ ಮಿಂಚಿದರೆ, ಶಾನ್ವಿ ಅವರು ಕೂಡ ಇದೇ ಬ್ಯಾನರ್ ಅಡಿಯಲ್ಲಿನ 'ಸಾಹೇಬ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಶಾನ್ವಿ ಮತ್ತು ಮನೋರಂಜನ್ ಡ್ಯುಯೆಟ್ ಹಾಡಿರುವ 'ಸಾಹೇಬ' ಚಿತ್ರದ ಶೂಟಿಂಗ್ ಕೂಡ ಕೊನೆ ಹಂತದಲ್ಲಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.[ಕನ್ನಡಾಭಿಮಾನಿಗಳಿಗೆ ನಟ ಶ್ರೀಮುರಳಿ ಕೊಟ್ಟ 'ಬಾಂಬ್' ನ್ಯೂಸ್ ಏನು?]

English summary
Hatrick Hero Shiv Rajkumar and Roaring Star Sri Murali confirming their presence in Kannada Movie 'Mufti', now Actress Shanvi Srivastava, has been roped in to the play heroine in this multi-starrer. The movie is directed by Narthan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada