ಗ್ಯಾಂಗ್ ಲೀಡರ್ ಆದ್ರು ನಟಿ ಶಾನ್ವಿ ಶ್ರೀವಾಸ್ತವ್!
ಕೊರೊನಾ ಕಾಟ ಆರಂಭ ಅದ ಬಳಿಕ ಸಾಕಷ್ಟು ಸಿನಿಮಾ ಸಿನಿಮಾಗಳು ತೆರೆಗ ಬಾರದೆ ಉಳಿದಿವೆ. ಹಾಗಾಗಿ ಕೆಲ ಸಿನಿಮಾತಾರೆರು ಕಾಣಿಸಿಕೊಂಡು ಬಹಲ ದಿನಗಳು ಕಳೆದಿವೆ. ನಟಿ ಶಾನ್ವಿ ಶ್ರೀವಾಸ್ತವ್ ಕೂಡ ಇತ್ತೀಚೆಗೆ ಯಾವ ಸಿನಿಮಾದ ವಿಚಾರವಾಗಿಯು ಸುದ್ದಿ ಆಗುತ್ತಿರಲಿಲ್ಲ. ಈಗ ಹೊಸ ಉರುಪಿನೊಂದಿಗೆ ಬಂದಿದ್ದಾರೆ.
ನಟಿ ಶಾನ್ವಿ ಅವರು ಇಷ್ಟು ದಿನ ಗ್ಲ್ಯಾಮರಸ್ ಗೊಂಬೆ ಆಗಿ ಕಾನಿಸಿಕೊಂಡಿದ್ದರು. ಆದರೆ ಇದೆ ಮೊದಲ ಬಾರಿಗೆ ಶಾನ್ವಿ ಬ್ಯಾಂಗ್‌ಸ್ಟರ್ ಆಗಿ ಅಭಿನಯಿಸಿದ್ದಾರೆ. ನಾಯಕ ನಟನ ಲವ್ ಇಂಟ್ರಸ್ಟ್ ಆಗಿಯೆ ನಟಿಸುವುದನ್ನು ತೊರೆದು ಶಾನ್ವಿ ಕೊಂಚ ವಿಭಿನ್ನ ಮಾರ್ಗ ಹಿಡಿದಿದ್ದಾರೆ.
ಖ್ಯಾತ ನಟಿ ಶಾನ್ವಿ ಶ್ರೀವಾಸ್ತವ್ 'ಬ್ಯಾಂಗ್' ಎನ್ನುವ ಹೊಸ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ 'ಬ್ಯಾಂಗ್' ಚಿತ್ರದ ಟೀಸರ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ಶಾನ್ವಿ ಶ್ರೀವಾಸ್ತವ್ ಈಗ ಬ್ಯಾಂಗ್ ಸ್ಟರ್!
ಇದೊಂದು ಡಾರ್ಕ್ ಕಾಮಿಡಿ ಹಾಗೂ ಆಕ್ಷನ್ ಥ್ರಿಲ್ಲರ್ ಚಿತ್ರ. ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ಎಲ್ಲರಿಗೂ ಅನ್ವಯಿಸುವ ಕಥೆಯಿದೆ. ಮೊದಲ ಬಾರಿಗೆ ಶಾನ್ವಿ ಶ್ರೀವಾಸ್ತವ್ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪಾತ್ರದ ಬಗ್ಗೆ ಸಂತಹ ವ್ಯಕ್ತ ಪಡಿಸಿರುವ ಶಾನ್ವಿ "ನಾನು ಈ ರೀತಿ ಪಾತ್ರ ಯಾವತ್ತೂ ಮಾಡಿಲ್ಲ. ಮೊದಲು ಯೋಚನೆ ಮಾಡಿದ್ದೆ. ನನಗೆ ಈ ಪಾತ್ರ ಸರಿ ಹೊಂದುತ್ತದೊ ಇಲ್ಲವೋ? ಎಂದು. ಮೊದಲ ದಿನ ಚಿತ್ರೀಕರಣಕ್ಕೆ ಹೋದಾಗ, ನನ್ನ ನಿರ್ಧಾರ ಸರಿ ಅನಿಸಿತು. ನಾಯಕಿಯಾಗಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇಂತಹ ಪಾತ್ರಗಳು ಬರುವುದು ಕಡಿಮೆ. ಕಥೆ ತುಂಬಾ ಚೆನ್ನಾಗಿದೆ" ಎಂದು ಶಾನ್ವಿ ಶ್ರೀವಾಸ್ತವ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

'ಡ್ಯಾಡಿ' ಪಾತ್ರದಲ್ಲಿದೊಂದಿಗೆ ನಟನೆಗೆ ಇಳಿದ ರಘು ದೀಕ್ಷಿತ್!
ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಇದೇ ಪ್ರಥಮ ಬಾರಿಗೆ ಡ್ಯಾಡಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಭಿನಯಕ್ಕೆ ಮುಂದಾಗಿರುವ ರಘು ದೀಕ್ಷಿತ್ " ಗೆಳೆಯ ರಿತ್ವಿಕ್ ಹಾಗೂ ನಿರ್ದೇಶಕ ಗಣೇಶ್ ಮಾತನಾಡಲು ಮನೆಗೆ ಬಂದರು. ನಾನು ಸಂಗೀತ ನಿರ್ದೇಶನ ಅಥವಾ ಹಾಡು ಹಾಡಿಸುವುದಕ್ಕಾಗಿ ಕೇಳಲು ಮನೆಗೆ ಬಂದಿದ್ದಾರೆ ಅಂದು ಕೊಂಡೆ. ನಂತರ ಅವರು ನೀವು ಈ ಚಿತ್ರದಲ್ಲಿ ನಟಿಸಬೇಕೆಂದರು. ಒಂದು ಸಲ ಆಶ್ಚರ್ಯವಾಯಿತು. ಮೊದಲು ನಾನು ಒಪ್ಪಲಿಲ್ಲ. ನಂತರ ಅವರ ಒತ್ತಡಕ್ಕೆ ಮಣಿದು ಒಪ್ಪಿಕೊಂಡೆ. ಡ್ಯಾಡಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಒಳ್ಳೆಯ ನಿರ್ಮಾಪಕರೊಂದಿಗೆ ಹಾಗೂ ಚಿತ್ರತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆ" ಎಂದರು ರಘು ದೀಕ್ಷಿತ್.

48ಗಂಟೆಗಳಲ್ಲಿ ನಡೆಯುವ ನಾಲ್ಕು ಸ್ನೇಹಿತರ ಕಥೆ!
ನಲವತ್ತೆಂಟು ಘಂಟೆಗಳಲ್ಲಿ ನಡೆಯುವ ಘಟನೆಯೊಂದನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಈ ಚಿತ್ರ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಜನವರಿಯಲ್ಲಿ ಟ್ರೇಲರ್ ರಿಲೀಸ್ ಆಗಲಿದೆ.

ನಿರೀಕ್ಷೆ ಹುಟ್ಟಿಸಿದೆ 'ಬ್ಯಾಂಗ್' ಟೀಸರ್!
ಚಿತ್ರದಲ್ಲಿ ನಾಲ್ಕು ಸ್ನೇಹಿತರ ಪಯಣದಲ್ಲಿ ಈ ಕಥೆ ನಡೆಯುತ್ತದೆ. ಚಿತ್ರದ ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್ ಆರವ್ ಪಾತ್ರದಲ್ಲಿ, ಸುನೀಲ್ ತಮ್ಮದೇ ಹೆಸರಿನ ಪಾತ್ರದಲ್ಲಿ, ನಾಟ್ಯ ರಂಗ ಭೂಷಣ್ ಆಗಿ ಹಾಗೂ ಸಾತ್ವಿಕ ಅವರು ಸಿರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಉದಯಲೀಲ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಯು.ಕೆ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಆನ ಹಾಗೂ ನಾನು, ಅದು ಮತ್ತು ಸರೋಜ ಚಿತ್ರಗಳನ್ನು ನಿರ್ಮಾಣ ಮಾಡಿರುವ ಪೂಜಾ ವಸಂತಕುಮಾರ್ ಅವರ ನಿರ್ಮಾಣದ ಮೂರನೇ ಚಿತ್ರ 'ಬ್ಯಾಂಗ್'.


Click it and Unblock the Notifications











