''ದರ್ಶನ್ ಜೈಲಿಗೆ ಹೋದ ವಿಚಾರ ನನಗೆ ಗೊತ್ತಿರಲಿಲ್ಲ'' : ಶರ್ಮಿಳಾ ಮಾಂಡ್ರೆ...!
ಒಂದು ಕಡೆ ಜನಪ್ರಿಯತೆಯ ಅಮಲಿನಲ್ಲಿ ಮೈ ಮರೆತು ದರ್ಶನ್ ಜೈಲು ಪಾಲಾಗಿದ್ದಾರೆ. ಇನ್ನೊಂದು ಕಡೆ ವಿವೇಚನೆಯನ್ನು ಕಳೆದುಕೊಂಡು, ಮಾನವೀಯತೆಯನ್ನೇ ಮರೆತವರಂತೆ ಇವರ ಕೆಲ ಅಂಧಾಭಿಮಾನಿಗಳು ವರ್ತಿಸುತ್ತಿದ್ದಾರೆ. ದರ್ಶನ್‌ಗೆ ಜೈಲಿನಲ್ಲಿ ನೀಡಿರುವ ಖೈದಿ ನಂಬರ್ 6016 ಎನ್ನುವ ನಂಬರನ್ನೂ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಹಚ್ಚೆ ಹಾಕಿಸಕೊಳ್ಳುತ್ತಿದ್ದಾರೆ.
ಇನ್ನೂ.. ದರ್ಶನ್ ವಿಚಾರದಲ್ಲಿ ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಹಲವಾರು ಜನ ಮಾತನಾಡಿದ್ದಾರೆ. ಕೆಲವರು ದರ್ಶನ್ ಪರ ವಕಾಲತ್ತು ವಹಿಸಿದ್ದರೆ, ಇನ್ನೂ ಕೆಲವರು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು ಮಾತ್ರ ದರ್ಶನ್ ವಿರುದ್ಧ ಮಾತನಾಡಿದ್ದಾರೆ. ಇದರ ನಡುವೆ ದರ್ಶನ್ ಜೈಲಿಗೆ ಹೋದ ವಿಚಾರವೇ ನನಗೆ ಗೊತ್ತಿರಲಿಲ್ಲ ಎಂದು ಹೇಳುವ ಮೂಲಕ ಶರ್ಮಿಳಾ ಮಾಂಡ್ರೆ ಅಚ್ಚರಿ ಮೂಡಿಸಿದ್ದಾರೆ.

ಹೌದು, ತಾನಾಯಿತು ತನ್ನ ಕೆಲಸವಾಯಿತು ಎಂದು ಮೊದಲಿಂದ ಇರುವ ಶರ್ಮಿಳಾ ಮಾಂಡ್ರೆ, ಇಲ್ಲಿಯವರೆಗೆ ಮಾಡಿರುವ ಸಿನಿಮಾಗಳಲ್ಲಿ ನವಗ್ರಹ ಕೂಡ ಒಂದು ಮತ್ತು ಪ್ರಮುಖವಾದದ್ದು. ಈ ಚಿತ್ರದ ಕಣ್ ಕಣ್ಣ ಸಲಿಗೆ ಹಾಡು ಇವತ್ತು ಕೂಡ ಫೇಮಸ್.
ಇನ್ನೂ.. ಈ ಚಿತ್ರ ತೂಗುದೀಪ ಪ್ರೊಡಕ್ಷನ್ಸ್ ನಿರ್ಮಾಣದಡಿ ಸಿದ್ಧವಾಗಿದ್ದು, ದಿನಕರ್ ತೂಗುದೀಪ ಈ ಚಿತ್ರ ನಿರ್ದೇಶನ ಮಾಡಿದ್ದು ಈಗ ಇತಿಹಾಸ. ದರ್ಶನ್ ಅವರ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿರುವ ನವಗ್ರಹ ಚಿತ್ರದ ನೆನಪುಗಳನ್ನೂ ''ಪಬ್ಲಿಕ್ ಟಿವಿ'' ಜೊತೆ ಹಂಚಿಕೊಂಡಿರುವ ಶರ್ಮಿಳಾ ಮಾಂಡ್ರೆ ದರ್ಶನ್ ಅವರ ಸಂಪೂರ್ಣ ಕುಟುಂಬ ನನಗೆ ತುಂಬಾನೇ ಪರಿಚಯ ಅಂದಿದ್ದಾರೆ. ನವಗ್ರಹ ಚಿತ್ರದ ಸಮಯದಲ್ಲಿ ಅವರ ಜೊತೆ ಕೆಲಸ ಮಾಡಿದ ಅನುಭವ ಚೆನ್ನಾಗಿತ್ತು ಎಂದಿರುವ ಶರ್ಮಿಳಾ, ಸೆಟ್‌ನಲ್ಲಿ ದರ್ಶನ್ ಸರ್ ಚೆನ್ನಾಗಿರುತ್ತಿದ್ದರು ಎಂದಿದ್ದಾರೆ. 2007ರಲ್ಲಿ ಚಿತ್ರದ ಚಿತ್ರೀಕರಣ ನಡೆದಿತ್ತು. ದರ್ಶನ ಅವರ ಅಮ್ಮ ದಿನಕರ್ ಈ ಚಿತ್ರ ನಿರ್ದೇಶಿಸಿದ್ದರು ಎಂದಿದ್ದಾರೆ.

ಇನ್ನೂ ಒಲ್ಲದ ಮನಸಿಂದನೇ ದರ್ಶನ್ ಪ್ರಕರಣದ ಬಗ್ಗೆ ಇದೇ ಸಮಯದಲ್ಲಿ ಮಾತನಾಡಿರುವ ಶರ್ಮಿಳಾ ಮಾಂಡ್ರೆ ನಾನು ತುಂಬಾ ಟ್ರಾವೆಲ್ ಮಾಡುತ್ತಿದ್ದೆ. ಹೀಗಾಗಿ ದರ್ಶನ್ ಪ್ರಕರಣ ನನಗೆ ಗೊತ್ತಿರಲಿಲ್ಲ ಎಂದಿದ್ದಾರೆ. ತೀರಾ ಇತ್ತೀಚೆಗಷ್ಟೇ ಈ ವಿಚಾರ ನನಗೆ ಗೊತ್ತಾಗಿದೆ. ನನ್ನ ಪ್ರಕಾರ ಎಲ್ಲವನ್ನೂ ಕಾನೂನು ನಿರ್ಧಾರ ಮಾಡುತ್ತೆ ಎಂದು ಕೂಡ ಹೇಳಿದ್ದಾರೆ ಶರ್ಮಿಳಾ ಮಾಂಡ್ರೆ.
ಉಳಿದಂತೆ ಈ ಆಗಸ್ಟ್ ಹನ್ನೊಂದಕ್ಕೆ ದರ್ಶನ್ ಜೈಲು ಪಾಲಾಗಿ ಎರಡು ತಿಂಗಳಾಗಲಿವೆ. ಇನ್ನೂ ಕೊಲೆ ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಪೊಲೀಸರಿಗೆ 90 ದಿನಗಳ ಕಾಲಾವಕಾಶ ಇರುತ್ತೆ. ಒಂದು ವೇಳೆ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಲ್ಲಿ, ಚಾರ್ಜ್ ಶೀಟ್ಸಲ್ಲಿಕೆಗೂ ಮುನ್ನ ಕೊಲೆ ಕೇಸ್ನಲ್ಲಿ ಬೇಲ್ ಸಿಗೋದಿಲ್ಲ.ಹೀಗಾಗಿ ಚಾರ್ಜ್ ಶೀಟ್ ಸಲ್ಲಿಕೆ ಆಗುವವರೆಗೂ ದರ್ಶನ್ & ಗ್ಯಾಂಗ್ಗೆ ನ್ಯಾಯಾಂಗ ಬಂಧನವೇ ಗಟ್ಟಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸದ್ಯ ದರ್ಶನ್, ಪವಿತ್ರಾ ಗೌಡ ಸೇರಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 13 ಆರೋಪಿಗಳು ಹಾಗೂ ತುಮಕೂರು ಜೈಲಿನಲ್ಲಿರುವ 4 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಆಗಸ್ಟ್ 14ರಂದು ಮುಕ್ತಾಯವಾಗಲಿದೆ.


Click it and Unblock the Notifications











