ಶರ್ಮಿಳಾ ಮಂಡ್ರೆ ಕಡೆಯಿಂದ ಬಂತು ಒಂದು ದೊಡ್ಡ ಸುದ್ದಿ!

By Naveen

ಕನ್ನಡದ ನಟಿಯರು ಈಗ ಸಿನಿಮಾ ನಿರ್ಮಾಣಕ್ಕೆ ಕೈ ಹಾಕುವುದು ಹೆಚ್ಚಾಗಿದೆ. ರಚಿತಾ ರಾಮ್, ಶೃತಿ ಹರಿಹರನ್, 'ಸ್ಪರ್ಶ' ರೇಖಾ ನಂತರ ಈಗ ನಟಿ ಶರ್ಮಿಳಾ ಮಂಡ್ರೆ ಕೂಡ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಪ್ಲಾನ್ ಮಾಡಿದ್ದಾರೆ.

'ಸಜನಿ' ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟ ಶರ್ಮಿಳಾ ಮಂಡ್ರೆ ಮುಂದೆ ಅನೇಕ ಸಿನಿಮಾ ಮಾಡಿದರು. ಅದೇಕೋ ಹಿಟ್ ಗಿಂತ ಹೆಚ್ಚು ಫ್ಲಾಪ್ ಸಿನಿಮಾಗಳನ್ನೇ ನೀಡಿದರು. ಆದರೆ ಈಗ ನಿರ್ಮಾಪಕಿ ಆಗಿ ಶರ್ಮಿಳಾ ಮಂಡ್ರೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗಾಗಲೇ ತಮ್ಮ ನಿರ್ಮಾಣ ಸಂಸ್ಥೆಗೆ 'ಶರ್ಮಿಳಾ ಮಂಡ್ರೆ ಪ್ರೊಡಕ್ಷನ್ಸ್' ಎಂಬ ಹೆಸರು ಇಟ್ಟಿದ್ದಾರೆ. ಇನ್ನು ಮುಂದಿನ ವರ್ಷದಿಂದ ಅವರ ಸಿನಿಮಾ ನಿರ್ಮಾಣ ಕೆಲಸ ಶುರು ಆಗಲಿದೆಯಂತೆ.

Actress Sharmiela Mandre turns producer

ಇನ್ನು ತಮ್ಮ ಹೊಸ ಯೋಜನೆ ಬಗ್ಗೆ ಮಾತನಾಡಿರುವ ಅವರು ''ನನ್ನ ಬ್ಯಾನರ್ ನಡಿ ಉತ್ತಮ ಚಿತ್ರಗಳನ್ನು ನಿರ್ಮಿಸುವ ಆಕಾಂಕ್ಷೆ ಹೊಂದಿದ್ದೇನೆ, ನಾನು ತಯಾರಿಸುವ ಚಿತ್ರಗಳಲ್ಲಿ ನಟಿಸುವ ಆಸೆ ನನಗಿಲ್ಲ. ಹೊಸಬರನ್ನು ಹಾಕಿಕೊಂಡು ಚಿತ್ರ ನಿರ್ಮಿಸುವುದು ನನ್ನ ಉದ್ದೇಶವಾಗಿದೆ'' ಎಂದು ಹೇಳಿದ್ದಾರೆ.

More from Filmibeat

English summary
Kannada Actress 'Sharmiela Mandre' turns producer. Her production house named Sharmiela Mandre Productions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X