»   » ಸಿನಿಮಾದಲ್ಲಿ ಗೆಲ್ಲದಿದ್ದರೇನಂತೆ, ಸಿಸಿಎಲ್ ರಾಯಭಾರಿ ಆಗಿಲ್ವಾ?

ಸಿನಿಮಾದಲ್ಲಿ ಗೆಲ್ಲದಿದ್ದರೇನಂತೆ, ಸಿಸಿಎಲ್ ರಾಯಭಾರಿ ಆಗಿಲ್ವಾ?

Posted By:
Subscribe to Filmibeat Kannada

'ಕಣ್ ಕಣ್ಣ ಸಲಿಗೆ' ಅಂತ ನಟ ಧರ್ಮ ಕೀರ್ತಿರಾಜ್ ಅವರ ಜೊತೆ ಡ್ಯುಯೆಟ್ ಹಾಡಿದ್ದ ನಟಿ ಶರ್ಮಿಳಾ ಮಾಂಡ್ರೆ ಮತ್ತೆ 'ಮುಮ್ತಾಜ್' ಚಿತ್ರದಲ್ಲಿ ಅದೇ ಧರ್ಮ ಅವರ ಜೊತೆ ನಟಿಸಿದ್ದರು.

ಆಮೇಲೆ ಚಂದನವನದ ತೆರೆಯ ಮೇಲೆ ಪತ್ತೆಯೇ ಇಲ್ಲದ ಮಾಂಡ್ರೆ ಇದೀಗ ದಿಢೀರ್ ಅಂತ ಸಿ.ಸಿ.ಎಲ್ ಕರ್ನಾಟಕ ಬುಲ್ಡೋಜರ್ ತಂಡದ ರಾಯಭಾರಿಯಾಗುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.[ಸಿಸಿಎಲ್ ಮ್ಯಾಚ್ ನಿಂದ ಕಿಚ್ಚ ಅವರಿಗೆ ಸಿಗುವ ಸಂಭಾವನೆ ಎಷ್ಟು]

Actress Sharmila Mandre and Actress Parwathy Nair ambassador of CCL

ಇನ್ನು ಶರ್ಮಿಳಾ ಅವರದೇ ಸಾಲಿಗೆ ಸೇರ್ಪಡೆಗೊಳ್ಳುವ ಮತ್ತೋರ್ವ ನಟಿ ಪಾರ್ವತಿ ನಾಯರ್. ಹೌದು ಈ ಇಬ್ಬರು ನಟಿ-ಮಣಿಯರು ಇದೀಗ ಸಿ.ಸಿ.ಎಲ್ ನ ಪ್ರಚಾರ ರಾಯಭಾರಿಗಳಾಗಿದ್ದು, ಕರ್ನಾಟಕ ಬುಲ್ಡೋಜರ್ಸ್ ತಂಡದವರನ್ನು ಹುರಿದುಂಬಿಸುವ ಕೆಲಸ ಮಾಡಲಿದ್ದಾರೆ.

ನಟಿ ಪಾರ್ವತಿ ನಾಯರ್ ಅವರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿದ್ದು, ಆಯ್ತು ತದನಂತರ ಕನ್ನಡದಲ್ಲಿ ನಟ ಕಿಶೋರ್ ಅವರ ಜೊತೆ 'ವಾಸ್ಕೋಡಿಗಾಮ' ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಆದರೂ ನಟಿಗೆ ಯಾಕೋ ಅದೃಷ್ಟ ಒಲಿಯಲಿಲ್ಲ.

Actress Sharmila Mandre and Actress Parwathy Nair ambassador of CCL

ಅಂದಹಾಗೆ ಸಿನಿಮಾ ಮಾಡಿ ಗುರುತಿಸಿಕೊಳ್ಳದಿದ್ದರೆ ಏನಂತೆ ಇದೀಗ ಸಿ.ಸಿ.ಎಲ್ ಮೂಲಕ ಗುರುತಿಸಿಕೊಂಡು ಮುಂದಿನ ದಿನಗಳಲ್ಲಿ ಇಬ್ಬರು ಒಳ್ಳೆ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರಾ ಅಂತ ಕಾದು ನೋಡಬೇಕಿದೆ.

English summary
Actress Sharmila Mandre and Actress Parwathy Nair ambassador for CCL Cricket league (Karnataka Bulldozers).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada