ನಟಿ ಶರ್ಮಿಳಾ ಮಾಂಡ್ರೆ ಮದುವೆ ಫಿಕ್ಸ್; ಚಂದನವನದ 'ಸಜನಿ' ಕೈ ಹಿಡಿಯುವ ವರ ಯಾರು?

ಕನ್ನಡ ನಟಿ ಶರ್ಮಿಳಾ ಮಾಂಡ್ರೆ ಹೊಸ ಬಾಳಿಗೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಕೊನೆಯದಾಗಿ ಕನ್ನಡ 'ಡೆವಿಲ್' ಚಿತ್ರದಲ್ಲಿ ಆಕೆ ನಟಿಸಿದ್ದರು. ಇದೀಗ ತಮಿಳು ನಿರ್ಮಾಪಕನ ಜೊತೆ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ. ನಿರ್ಮಾಪಕ ಸುಧನ್ ಸುಂಧರಮ್ ಎಂಬುವವರ ಜೊತೆ ಶರ್ಮಿಳಾ ಮದುವೆ ನಡೆಯಲಿದೆ. ಕನ್ನಡದ 'ಸಜನಿ' ಸಿನಿಮಾ ಮೂಲಕ ಆಕೆ ಚಿತ್ರರಂಗ ಪ್ರವೇಶಿಸಿದ್ದರು.

ಜೂನ್ 25ರಂದು ನಿರ್ಮಾಪಕ ಸುಧನ್ ಸುಂಧರಮ್ ಹಾಗೂ ನಟಿ ಶರ್ಮಿಳಾ ಮಾಂಡ್ರೆ ಮದುವೆ ಎಂಗೇಜ್‌ಮೆಂಟ್ ನಡೆಲಿದೆ. ವಿಜಯ್ ಸೇತುಪತಿ ನಟನೆಯ 'ಮಹಾರಾಜಾ' ಹಾಗೂ ಇತ್ತೀಚೆಗೆ ಹಿಟ್ ಆದ 'ತಾಯ್ ಕಿಳವಿ' ಚಿತ್ರಗಳಿಗೆ ಸುಧನ್ ಸಹ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದರು. 'ಸೀತಾಕಾಥಿ', 'ಅನ್ನಾಬೆಲ್ಲೆ ಸೇತುಪತಿ' ಎಂಬ ಚಿತ್ರಗಳನ್ನು ಕೂಡ ಅವರು ನಿರ್ಮಾಣ ಮಾಡಿದ್ದರು. ಎಂಗೇಜ್‌ಮೆಂಟ್ ಬಳಿಕ ಇದೇ ವರ್ಷ ಮದುವೆ ನೆರವೇರಿಸಲು ಎರಡೂ ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ.

Actress Sharmila Mandre to Get Engaged on June 25 Set to Marry Tamil Producer Sudhan Sundaram

ಬಹಳ ಅದ್ಧೂರಿಯಾಗಿ ಶರ್ಮಿಳಾ ಹಾಗೂ ಸುಧನ್ ಮದುವೆ ನಡೆಯಲಿದೆ. ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದವರು ಶರ್ಮಿಳಾ ಮಾಂಡ್ರೆ. 'ಸಜನಿ' ಚಿತ್ರವನ್ನು ಆಕೆಯ ಸೋದರ ಸಂಬಂಧಿ ಸುನಂದಾ ಮುರಳಿ ಮನೋಹರ್ ನಿರ್ಮಾಣ ಮಾಡಿದ್ದರು. ತಂದೆ ದಯಾನಂದ ಮಾಂಡ್ರೆ ಉದ್ಯಮಿ. ಅಜ್ಜ ರಮಾನಂದ ನಾರಾಯಣರಾವ್ ಮಾಂಡ್ರೆ ಬೆಂಗಳೂರಿನಲ್ಲಿ ಸಿನಿಮಾ ನಿರ್ಮಾಪಕರು, ವಿತರಕರು ಆಗಿದ್ದರು. ಸಂಗಮ್ ಚಿತ್ರಮಂದಿರ ಹೊಂದಿದ್ದರು. ಹಾಗಾಗಿ ಶರ್ಮಿಳಾ ಚಿತ್ರರಂಗ ಪ್ರವೇಶ ಕಷ್ಟವಾಗಲಿಲ್ಲ.

'ಸಜನಿ' ಬಳಿಕ 'ಕೃಷ್ಣ', 'ನವಗ್ರಹ', 'ಸ್ವಯಂವರ', 'ಮಮ್ತಾಜ್', 'ಮಾಸ್ ಲೀಡರ್', 'ಗಾಳಿಪಟ-2' ಹೀಗೆ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ಶರ್ಮಿಳಾ ನಟಿಸಿದರು. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. ಒಂದು ತೆಲುಗು ಹಾಗೂ ಒಂದು ತಮಿಳು ಚಿತ್ರದಲ್ಲಿ ನಟಿಸಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಆಗಾಗ್ಗೆ ಫೋಟೊ, ವೀಡಿಯೋ ಶೇರ್ ಮಾಡುತ್ತಾರೆ. ವಿದೇಶ ಪ್ರವಾಸದ ಅಪ್‌ಡೇಟ್ ಕೊಡುತ್ತಾರೆ. ಕೊನೆಯದಾಗಿ ದರ್ಶನ್ ನಟನೆಯ 'ಡೆವಿಲ್' ಚಿತ್ರದಲ್ಲಿ ನಟಿಸಿದ್ದರು.

ಸದ್ಯ ತಮಿಳಿನ 'ಅದೃಷ್ಟಶಾಲಿ' ಹಾಗೂ ಕನ್ನಡದ 'ದಸರಾ' ಚಿತ್ರಗಳಲ್ಲಿ ಶರ್ಮಿಳಾ ನಟಿಸಿದ್ದಾರೆ. ನಟಿಯಾಗಿ ಮಾತ್ರವಲ್ಲದೇ ಶರ್ಮಿಳಾ ನಿರ್ಮಾಪಕಿಯಾಗಿ ಒಂದಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ತಮಿಳಿನ 'ಇವನುಕ್ಕು ಎಂಗೆಯೊ ಮಚ್ಚಮ್ ಇರುಕ್ಕು', 'ನಾನುಂ ಸಿಂಗಲ್ ತಾನ್', 'ಸಿಲ ನಾಡಿಗಳಿಲ್', 'ಸಂಡಕಾರಿ', 'ಕಾದಲ್ ಕೊಂಜಂ ತೂಕಲ' ಸಿನಿಮಾಗಳಿಗೆ ಬಂಡವಾಳ ಹೂಡಿದ್ದರು. 'ದಸರಾ' ಚಿತ್ರವನ್ನು ನಿರ್ಮಿಸಿ ನಟಿಸುತ್ತಿದ್ದಾರೆ.

Read more about: sharmila mandre sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X